ದಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆ: ಡಾ.ಎಂ.ಎನ್.ಆರ್ ಬಣಕ್ಕೆ ಭರ್ಜರಿ ಜಯ

Spread the love

ದಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆ: ಡಾ.ಎಂ.ಎನ್.ಆರ್ ಬಣಕ್ಕೆ ಭರ್ಜರಿ ಜಯ

ಮಂಗಳೂರು: ಕನ್ನಡ ಜಿಲ್ಲೆಯ ಪ್ರತಿಷ್ಠಿತ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಸಹಕಾರ ರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಬಣಕ್ಕೆ ಭರ್ಜರಿ ಜಯ ಲಭಿಸಿದೆ.

ಒಕ್ಕೂಟದ ಪ್ರಧಾನ ಕಚೇರಿಯಲ್ಲಿ ದ.ಕ ಮತ್ತು ಉಡುಪಿ ಎರಡು ಜಿಲ್ಲೆಗಳ ನಿರ್ದೇಶಕರ 16 ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ 13 ಸ್ಥಾನಗಳಲ್ಲಿ ಸಹಕಾರ ರತ್ನ ’ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಬಣದ ಅಭ್ಯರ್ಥಿಗಳು ಗೆಲವಿನ ನಗೆ ಬೀರಿದರು.

ಉಡುಪಿ ಜಿಲ್ಲೆಯಿಂದ ಸ್ಪರ್ಧಿಸಿದ ರಾಜೇಂದ್ರ ಕುಮಾರ್ ಬಣದ 8 ಮಂದಿಯೂ ಜಯ ಗಳಿಸಿದ್ದಾರೆ.

ರಾಜೇಂದ್ರ ಕುಮಾರ್ ಬಳಗದ ದೇವಿಪ್ರಸಾದ್ ಶೆಟ್ಟಿ, ರವಿರಾಜ ಹೆಗ್ಡೆ, ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಉದಯ ಎಸ್. ಕೋಟ್ಯಾನ್, ಸುಧಾಕರ್ ಶೆಟ್ಟಿ, ಎನ್. ಮಂಜಯ್ಯ ಶೆಟ್ಟಿ, ಕೆ. ಶಿವಮೂರ್ತಿ, ಸುಚರಿತ ಶೆಟ್ಟಿ, ನಂದರಾಮ್ ರೈ, ಎಸ್. ಬಿ. ಜಯರಾಮ ರೈ, ಚಂದ್ರಶೇಖರ ರಾವ್, ಎಚ್. ಪ್ರಭಾಕರ್, ಮಮತಾ ಆರ್. ಶೆಟ್ಟಿ ಜಯ ಗಳಿಸಿದ್ದಾರೆ.

ಸಹಕಾರಿ ಭಾರತಿಯಲ್ಲಿ ಗುರುತಿಸಿಕೊಂಡ ಭರತ್ ಎನ್, ಬಿ. ಸುಧಾಕರ ರೈ, ಸವಿತಾ ಎನ್ ಶೆಟ್ಟಿ ಸಾಧಿಸಿದ್ದಾರೆ. ಆಯ್ಕೆಗೊಂಡ ಎಲ್ಲರಿಗೂ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments