ದನಗಳ್ಳತನ ನಾಲ್ವರು ಆರೋಪಿಗಳ ಬಂಧನ

Spread the love

ದನಗಳ್ಳತನ ನಾಲ್ವರು ಆರೋಪಿಗಳ ಬಂಧನ

ಮಂಗಳೂರು: ದನಗಳ್ಳತನ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಬಂಟ್ವಾಳ ನಿವಾಸಿ ಇಮ್ರಾನ್ @ ಕುಟ್ಟ ಇಮ್ರಾನ್ (31), ಜೈನುದ್ದೀನ್ (22), ಹಿದಾಯುತುಲ್ಲಾ (24), ಫಾರೂಕ್ @ ಮಲಿಕ್, (29) ಎಂದು ಗುರುತಿಸಲಾಗಿದೆ .

ಬಂಧಿತರಿಂದ ಪ್ರಕರಣಗಳಲ್ಲಿ ಕೃತ್ಯಕ್ಕೆ ಬಳಸಿದ ಒಂದು ಮಾರುತಿ ರಿಡ್ಜ್ ಕಾರು ಅಂದಾಜು ಮೌಲ್ಯ 3,50,000/, ವಿವಿಧ ಪ್ರಕರಣಗಳಲ್ಲಿ ಕಳವು ಮಾಡಿದಂತಹ 4 ದನಗಳು, ಅಂದಾಜು ಮೌಲ್ಯ 90,000/- ಇವುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಅಮ್ಮೆಮಾರ್ ಮತ್ತು ಕುಂಪನಮಜಲು ಪ್ರದೇಶಕ್ಕೆ ಸೇರಿದ್ದು, ಇವರ ಮೇಲೆ ಬಂಟ್ವಾಳ ಗ್ರಾಮಾಂತರ, ಬಂಟ್ವಾಳ ನಗರ, ವಿಟ್ಲ, ಪೂಂಜಾಲಕಟ್ಟೆ, ವಾಮಂಜೂರು, ಕಾವೂರು, ಕೋಣಾಜೆ, ಉಳ್ಳಾಲ, ಸೋಮವಾರ ಪೇಟೆ, ಕುಶಾಲನಗರ, ಸಕಲೇಶಪುರ, ಬಜಪೆ, ಮಡಿಕೇರಿ, ಶನಿವಾರ ಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದನ ಕಳ್ಳತನ, ಹಲ್ಲೆ, ದೊಂಬಿ, ಪ್ರಕರಣಗಳು ದಾಖಲಾಗಿರುತ್ತವೆ. ಸದ್ರಿ ಆರೋಪಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ಸದ್ರಿ ಕಾರ್ಯಾಚರಣೆಯು ಶರಣ ಗೌಡ ವೃತ್ತ ನಿರೀಕ್ಷಕರು, ಬಂಟ್ವಾಳ ವೃತ್ತ, ಪ್ರಸನ್ನ. ಎಂ.ಎಸ್ ಪೊಲೀಸ್ ಉಪನಿರೀಕ್ಷಕರು, ಪ್ರೊ. ಪಿ.ಎಸ್.ಐ ರವರುಗಳಾದ ವಿನೋದ್, ಜಂಬುರಾಜ್ ಮಹಾಜನ್ ಬಂಟ್ವಾಳ ಗ್ರಾಮಾಂತರ ಠಾಣೆ, ಸಿಬ್ಬಂದಿಯವರಾದ ಹೆಚ್.ಸಿಗಳಾದ ಸುರೇಶ್, ಜನಾರ್ಧನ, ಮಾದವ ಗೌಡ, ರಾಧಾಕೃಷ್ಣ, ಪಿ.ಸಿಗಳಾದ ನಝೀರ್, ಮನೋಜ್, ಸುಬ್ರಹ್ಮಣ್ಯ, ವಿಶಾಲಾಕ್ಷಿ, ರವರು ಈ ಪ್ರಕರಣವನ್ನು ಭೇದಿಸಲು ಯಶಸ್ವಿಯಾಗಿದ್ದಾರೆ


Spread the love