ದನದ ಮಾಂಸ ಮಾರಾಟಕ್ಕೆ ಯತ್ನ – ಶಿರ್ವ ಪೊಲೀಸರಿಂದ ಇಬ್ಬರ ಬಂಧನ

Spread the love

ದನದ ಮಾಂಸ ಮಾರಾಟಕ್ಕೆ ಯತ್ನ – ಶಿರ್ವ ಪೊಲೀಸರಿಂದ ಇಬ್ಬರ ಬಂಧನ

ಉಡುಪಿ: ದನ ಕಡಿದು ಮಾಂಸ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಶಿರ್ವ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಕಳತ್ತೂರು ಚಂದ್ರನಗರ ದೇವರಪಾಡಿ ನಿವಾಸಿ ಮೊಹಮ್ಮದ್ ಅಲ್ತಾಫ್ (25) ಮತ್ತು ಮಜೂರು ನಿವಾಸಿ ಲುಕ್ಮಾನುಲ್ಲ ಹಕೀಂ ಎಂದು ಗುರುತಿಸಲಾಗಿದೆ.

ಶನಿವಾರ ಶಿರ್ವ ಪೊಲೀಸ್ ಠಾಣೆಯ ಉಪನೀರಿಕ್ಷಕಿ ವೇದಾವತಿ ಅವರಿಗೆ ಕಳತ್ತೂರು ಗ್ರಾಮದ ದೇವರಹಾಡಿ ಎಂಬಲ್ಲಿರುವ ಹಸನ್ ಸಾಹೆಬ್ ರವರ ಮನೆಯ ಬಳಿ ಮಾರಾಟ ಮಾಡಲು ದನಗಳನ್ನು ಕಡಿದು ಮಾಂಸ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರಗೆ ಠಾಣಾ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ದಾಳಿ ಅಕ್ರಮವಾಗಿ ದನಗಳನ್ನು ಕಡಿದು ಮಾಂಸ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದು, ಅಲ್ಲದೇ ಇನ್ನೊಬ್ಬ ಹಾಡಿಯಲ್ಲಿ ಓಡಿ ಪರಾರಿಯಾಗಿದ್ದು ಹೆಸರು ವಿಚಾರಿಸಲಾಗಿ ಇಲಿಯಾಸ್ ಎಂದು ಗುರುತಿಸಲಾಗಿದೆ.

ಈ ವೇಳೆ ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ದನವನ್ನು ಕಡಿದು ಮಾಂಸ ಮಾಡುವುದಾಗಿ ತಿಳಿದು ಬಂದಿದ್ದು, 100 ಕೆ.ಜಿ. ತೂಕದ ಸತ್ತ ದನ – 1, ದನವನ್ನು ಕಟ್ಟಿದ ನೈಲಾನ್ ಹಗ್ಗ, ದನವನ್ನು ಕಡಿಯಲು ಉಪಯೋಗಿಸಿದ 2 ಕತ್ತಿ , ಮಾಂಸವನ್ನು ತುಂಬಿಸಲು ಉಪಯೋಗಿಸಿದ 1 ಕ್ರೇಟ್ ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love