Home Mangalorean News Kannada News ದಲಿತ ಮಹಿಳೆಯರ ಬೆತ್ತಲೆ ಪ್ರತಿಭಟನೆ ರಾಜ್ಯ ಸರಕಾರಕ್ಕೆ ನಾಚಿಕೆಗೇಡು: ದ ಕ ಬಿಜೆಪಿ

ದಲಿತ ಮಹಿಳೆಯರ ಬೆತ್ತಲೆ ಪ್ರತಿಭಟನೆ ರಾಜ್ಯ ಸರಕಾರಕ್ಕೆ ನಾಚಿಕೆಗೇಡು: ದ ಕ ಬಿಜೆಪಿ

Spread the love

ದಲಿತ ಮಹಿಳೆಯರ ಬೆತ್ತಲೆ ಪ್ರತಿಭಟನೆ ರಾಜ್ಯ ಸರಕಾರಕ್ಕೆ ನಾಚಿಕೆಗೇಡು: ದ ಕ ಬಿಜೆಪಿ

ಮಂಗಳೂರು: ಕೊಡಗಿನ ವಿರಾಜಪೇಟೆ ತಾಲೂಕಿನ ದಿಡ್ಡಳ್ಳಿಯಲ್ಲಿ ಈ ಡಿಸೆಂಬರ್ ಏಳರಂದು ಆದಿವಾಸಿ ದಲಿತ ಮಹಿಳೆಯರ ಬೆತ್ತಲೆ ಪ್ರತಿಭಟನೆ ನಡೆದಿರುವುದು ಅಮಾನವೀಯವಾಗಿರುವ ಘಟನೆಯಾಗಿದೆ. ಯಾಕೆಂದರೆ ಅರಣ್ಯ ಪ್ರದೇಶದಲ್ಲಿ ಒಕ್ಕಲೆಬ್ಬಿಸುವ ಮೂಲಕ ಇವರ ಮೇಲೆ ದಬ್ಬಾಳಿಕೆಯನ್ನು ಕರ್ನಾಟಕ ರಾಜ್ಯಸರಕಾರ ಮಾಡಿದೆ. ಇದಕ್ಕಾಗಿ ರಾಜ್ಯದ ಅರಣ್ಯ ಸಚಿವರಾದ ರಮಾನಾಥ ರೈ ಹಾಗೂ ಕರ್ನಾಟಕ ರಾಜ್ಯದಲ್ಲಿ ಅಹಿಂದದ ಹೆಸರಿನಲ್ಲಿ ಅಧಿಕಾರವನ್ನು ಪಡೆದಂಥಹ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಇದಕ್ಕೆ ನೇರ ಹೊಣೆ.

ಅರಣ್ಯ ಭಾಗದಲ್ಲಿ ನೆಲೆ ಇರುವ ದಲಿತ ಆದಿವಾಸಿ ಕುಟುಂಬಕ್ಕೆ ನ್ಯಾಯ ಒದಗಿಸಲು ತಾಕತ್ತಿಲ್ಲದ ಸರಕಾರ, ಈ ರಾಜ್ಯದ ದಲಿತರಿಗೆ ನ್ಯಾಯ ಒದಗಿಸಲು ವಿಫಲವಾಗಿರುವುದು ಸಾಬೀತಾಗಿದೆ. ಕೇವಲ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕ್ಷೇತ್ರಕ್ಕೆ ಸೀಮಿತವಾಗಿರುವ ರಾಜ್ಯದ ಅರಣ್ಯ ಸಚಿವರು, ಕೇವಲ ತೋರಿಕೆಯ ಅರಣ್ಯ ಸಚಿವರಾಗಿರುವುದು ಈ ರಾಜ್ಯದ ದೌಭಾಗ್ಯ. ಆದ್ದರಿಂದ ಈ ಘಟನೆಯ ಹೊಣೆ ಹೊತ್ತು ಕೂಡಲೇ ರಾಜಿನಾಮೆ ನೀಡಬೇಕು.ಈ ರಾಜ್ಯದ ದಲಿತರಿಗೆ ಆದ ಅನ್ಯಾಯವನ್ನು ಮನಗಂಡು ನ್ಯಾಯ ಒದಗಿಸಬೇಕು, ಮತ್ತು ಒಬ್ಬ ದಲಿತ ಮಹಿಳೆಯ ಈ ದುಃಸ್ಥಿತಿಗೆ ಕಾರಣವಾದ ರಾಜ್ಯ ಸರಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಜಿಲ್ಲಾ ವಕ್ತಾರರಾದ ಜಿತೇಂದ್ರ. ಎಸ್. ಕೊಟ್ಟಾರಿಯವರು ತಿಳಿಸಿದ್ದಾರೆ


Spread the love

Exit mobile version