Home Mangalorean News Kannada News ದಶಕಗಳ ಸಂಶೋಧನೆ ಇಲ್ಲದೆ ಇಂಗ್ಲೀಷ್ ಸಾಹಿತ್ಯದ ಸಾಂಸ್ಕೃತಿಕ ಹಿನ್ನೆಲೆಯನ್ನು ಅರಿತುಕೊಳ್ಳುವುದು ಭಾರತೀಯರಿಗೆ ಅಸಾಧ್ಯ!

ದಶಕಗಳ ಸಂಶೋಧನೆ ಇಲ್ಲದೆ ಇಂಗ್ಲೀಷ್ ಸಾಹಿತ್ಯದ ಸಾಂಸ್ಕೃತಿಕ ಹಿನ್ನೆಲೆಯನ್ನು ಅರಿತುಕೊಳ್ಳುವುದು ಭಾರತೀಯರಿಗೆ ಅಸಾಧ್ಯ!

Spread the love

“ದಶಕಗಳ ಸಂಶೋಧನೆ ಇಲ್ಲದೆ ಇಂಗ್ಲೀಷ್ ಸಾಹಿತ್ಯದ ಸಾಂಸ್ಕೃತಿಕ ಹಿನ್ನೆಲೆಯನ್ನು ಅರಿತುಕೊಳ್ಳುವುದು ಭಾರತೀಯರಿಗೆ ಅಸಾಧ್ಯ!”

ಫೆಬ್ರುವರಿ 4 ಮತ್ತು 5ರಂದು ಉಜಿರೆಯ ಎಸ್.ಡಿ.ಎಮ್ ಕಾಲೇಜಿನ ಸಿ.ಐ.ಆರ್.ಎಚ್.ಎಸ್ ಆಯೋಜಿಸಿದ್ದ’ ಪೌರಾತ್ಯ ಇಂಗ್ಲೀಷ್ ಸಾಹಿತ್ಯದ  ಸಾಂಸ್ಕೃತಿಕ ಹಿನ್ನೆಲೆ’ ಕಾರ್ಯಾಗಾರದಲ್ಲಿ ಮಾತನಾಡುತ್ತ ಡಾ. ಡಂಕಿನ್ ಝಳಕಿಯವರು, “ಪೌರಾತ್ಯ ಇಂಗ್ಲಿಷ್ ಸಾಹಿತ್ಯದ ಕುರಿತು ಉತ್ತಮ ಸಂಶೋಧನೆ ಭಾರತದಿಂದಲೂ ಬರಬೇಕು ಎಂಬುದು ನಮ್ಮ ಆಶಯವಾದರೆ ನಮ್ಮ ಇಂದಿನ ಇಂಗ್ಲೀ ಷ್ ಸಾಹಿತ್ಯ ಅಧ್ಯಯನವನ್ನು ಅಮೂಲಾಗ್ರವಾಗಿ ಬದಲಾಯಿಸಬೇಕಾಗಿದೆ” ಎಂದು ಅಭಿಪ್ರಾಯ ಪಟ್ಟರು. “ಈ ಇಂಗ್ಲಿಷ್ ಸಾಹಿತ್ಯವನ್ನು ಅರಿತುಕೊಳ್ಳಬೇಕಾದರೆ, ನಾವು ಯೂರೋಪಿನ ಸಂಸ್ಕೃತಿಯನ್ನು ಅರಿತುಕೊಳ್ಳಬೇಕು, ಅದನ್ನು ಅರಿತುಕೊಳ್ಳಬೇಕಾದರೆ ಮೊದಲಿಗೆ ನಾವು ಯೂರೋಪಿನ ಕ್ರಿಶ್ಚಿಯನ್ ರಿಲಿಜನ್ ಅನ್ನು ಅರಿತುಕೊಳ್ಳುವ ಅವಶ್ಯಕತೆ ಇದೆ. ಇಂದಿನ ನಮ್ಮ ಶಿಕ್ಷಣ ಮತ್ತು ಸಂಶೋಧನೆಯು ಇದನ್ನು ಅರಿತುಕೊಳ್ಳಲು ಸಂಪೂರ್ಣವಾಗಿ ಸೋತಿದೆ. ದಶಕಗಳ ಸಂಶೋಧನೆ ಇಲ್ಲದೆ ಇಂಗ್ಲೀಷ್ ಸಾಹಿತ್ಯದ ಸಾಂಸ್ಕೃತಿಕ ಹಿನ್ನೆಲೆಯನ್ನು ಅರಿತುಕೊಳ್ಳುವುದು ಭಾರತೀಯರಿಗೆ ಅಸಾಧ್ಯ” ಎಂದರು. ಕಾರ್ಯಾಗಾರದಲ್ಲಿ ಮಾತನಾಡುತ್ತಾ, ಡಾ.ಸೂಫಿಯ ಪಠಾಣ್, “ದಿ ಆಲ್ ಇಂಡಿಯಾ ಹೈಯರ್ ಎಜುಕೇಶನ್ ಇನ್ಸ್ಟಿಟ್ಯುಟಿನ 2014-15ರ ವರದಿಯ ಪ್ರಕಾರ, ಇಂದು ಭಾರತದ ಉನ್ನತ ಶಿಕ್ಷಣದ ಕ್ಷೇತ್ರದಲ್ಲಿ ಅತ್ಯಂತ ಜನಪ್ರಿಯ ಸ್ನಾತಕೋತ್ತರ ಪದವಿ ಎಂದರೆ ಇಂಗ್ಲೀಷ್ ಸಾಹಿತ್ಯ. ಅಂದಮೇಲೆ ನಾವು ಇಂಗ್ಲೀಷ್ ಸಾಹಿತ್ಯ ಅಭ್ಯಾಸವನ್ನು ಗಟ್ಟಿಗೊಳಿಸುವ ಮೂಲಕ ಹೆಚ್ಚಿನ ಬದಲಾವಣೆಯನ್ನು ತರುವುದು ಸಾಧ್ಯ” ಎಂದು ಹೇಳಿದರು.

ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸಿ.ಐ.ಆರ್.ಎಚ್.ಎಸ್ ನಡಾಡಂಕಿನ್ಝಳ ಕಿ,ಡಾ.ಸೂಫಿಯ ಪಠಾಣ್, ಬೆಲ್ಜಿಯಂನ ಶ್ರೀಮತಿ ಆನ್ ಕಾರ್ಡಿನಲ್, ಮುಂಬೈನ ಎಸ್.ಏನ್.ಡಿ.ಟಿ ವಿಶ್ವವಿದ್ಯಾಲಯದಲ್ಲಿ ಪ್ರಾದ್ಯಾಪಕರಾಗಿದ್ದ ಡಾ. ಪಾಲಿ ಹಜಾರಿಕ ಭಾಗವಹಿಸಿದ್ದರು.ಕಾರ್ಯಾಗಾರದಲ್ಲಿ ಎಸ್.ಡಿ.ಎಮ್ ಕಾಲಿಜಿನ ಆಯ್ದ ವಿದ್ಯಾರ್ಥಿಗಳು, ಶಿಕ್ಷಕರು ಮಾತ್ರವಲ್ಲದೆ,ಸುಭ್ರಮಣ್ಯದ ಕೇ.ಎಸ್.ಎಸ್ ಕಾಲೇಜಿನ, ಹರಿಹರದ ಕಾಲೇಜಿನ, ಮತ್ತು ದೂರದ ಚೆನ್ನೈ ಮತ್ತು ಮುಂಬೈಯಿಂದ ಬಂದ ಅಭ್ಯರ್ಥಿಗಳು ಪಾಲ್ಗೊಂಡಿದ್ದರು.

ಯೂರೋಪಿನ ಸಂಸ್ಕೃತಿಯ ಕುರಿತು ಹೆಚ್ಚಿನ ತಿಳುವಳಿಕೆ ಕೊಡುವ ಉದ್ದೇಶದಿಂದ, ಕಾರ್ಯಾಗಾರದಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ ಕುರಿತು ವಿಶೇಷ ಅಧಿವೇಶನವನ್ನು ಆಯೋಜಿಸಲಾಗಿತ್ತು. ಇದನ್ನು ಬೆಲ್ಜಿಯಂನ ಶ್ರೀಮತಿ ಆನ್ ಕಾರ್ಡಿನಲ್ ನಡೆಸಿಕೊಟ್ಟರು.ಮುಂಬೈನಿಂದ ಬಂದಿದ್ದ ವಿದ್ಯಾರ್ಥಿ ಗರಿಮಾ ರಘುವಂಶಿಯವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು ಹೀಗೆ: “ಈ ಕಾರ್ಯಾಗಾರವು ನಿಜವಾಗಿಯೂ ಗಮನಾರ್ಹವಾಗಿತ್ತು. ಇಲ್ಲಿ ಚರ್ಚೆಗೆ ಬಂದ ಒಳನೋಟಗಳನ್ನು ನಾವು ನಿಜವಾಗಿಯೂ ವ್ಯಾಪಕವಾಗಿ ಹರಡುವ ಅಗತ್ಯವಿದೆ, ಈ ಸಂಶೋಧನಾ ಕೇಂದ್ರ ಮತ್ತು ಎಸ್.ಡಿ.ಎಮ್ ಕಾಲೇಜು ಇಂಥ ಹಲವು ಉತ್ತಮ ಕಾರ್ಯಾಗಾರಗಳನ್ನು ಮುಂದೆಯೂ ಹಮ್ಮಿಕೊಳ್ಳಲಿ ಎಂದು ಆಶಿಸುತ್ತೇನೆ.”

ಸಿ.ಐ.ಆರ್.ಎಚ್.ಎಸ್ ಸಂಶೋಧನಾ ಕೇಂದ್ರವು ಮುಂಬರುವ ತಿಂಗಳುಗಳಲ್ಲಿ ಇಂಗ್ಲೀಷ್ ಸಾಹಿತ್ಯಮಾತ್ರವಲ್ಲದೆ, ಮಾನವಿಕ ಮತ್ತು ಸಮಾಜ ವಿಜ್ಞಾನದ ಇನ್ನು ಹಲವು ಶಿಸ್ತುಗಳ ಕುರಿತು ಈ ರೀತಿಯ ಕಾರ್ಯಾಗಾರಗಳು ನಡೆಸುವ ಉದ್ದೇಶ ಇಟ್ಟುಕೊಂಡಿದೆ. ಆಸಕ್ತರು ಇದರ ಕುರಿತು ಹೆಚ್ಚಿನ ಮಾಹಿತಿಗಾಗಿ ಅವರ ಜಾಲತಾಣ www.cirhs.wordpress.com ಗಮನಿಸುತ್ತಿರಬಹುದು ಎಂದು ಕೇಂದ್ರದ ನಿರ್ದೇಶಕರು ತಿಳಿಸಿದರು.


Spread the love

Exit mobile version