Home Mangalorean News Kannada News ದಿ. ಉಳ್ಳಾಲ ಶ್ರೀನಿವಾಸ ಮಲ್ಯ 51 ನೇ ಸ್ಮøತಿ ದಿವಸ

ದಿ. ಉಳ್ಳಾಲ ಶ್ರೀನಿವಾಸ ಮಲ್ಯ 51 ನೇ ಸ್ಮøತಿ ದಿವಸ

Spread the love
RedditLinkedinYoutubeEmailFacebook MessengerTelegramWhatsapp

ದಿ. ಉಳ್ಳಾಲ ಶ್ರೀನಿವಾಸ ಮಲ್ಯ 51 ನೇ ಸ್ಮøತಿ ದಿವಸ
ಮಂಗಳೂರು: ಕೊಂಕಣಿ ಭಾಸ್ ಆನಿ ಸಂಸ್ಕøತಿ ಪ್ರತಿಷ್ಠಾನ, ವಿಶ್ವ ಕೊಂಕಣಿ ಕೇಂದ್ರ , ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು ಹಮ್ಮಿಕೊಂಡಿರುವ ಆಧುನಿಕ ಮಂಗಳೂರು ನಗರ ನಿರ್ಮಾತೃ ದಿ. ಉಳ್ಳಾಲ ಶ್ರೀನಿವಾಸ ಮಲ್ಯ ರ 51 ನೇ ಸ್ಮøತಿ ದಿವಸ ದಿ. 19-12-2016 ಸೋಮವಾರ ಬೆಳಿಗ್ಗೆ ಗಂ. 10.30 ವಿಶ್ವ ಕೊಂಕಣಿ ಕೇಂದ್ರ, ಶಕ್ತಿನಗರದಲ್ಲಿ ಜರುಗಲಿರುವುದು.

u-srinivas-mallya-inv-outer-1

ಮಂಗಳೂರು ಮಹಾನಗರ ಪಾಲಿಕೆ ಸನ್ಮಾನ್ಯ ಮಹಾ ಪೌರರಾದ ಶ್ರೀ ಎಂ. ಹರಿನಾಥ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಮಂಗಳೂರು ನಿಟ್ಟೆ ಯುನಿವರ್ಸಿಟಿ ಮಾನ್ಯ ಕುಲಪತಿಗಳಾದ ಡಾ. ಎನ್. ವಿನಯ ಹೆಗ್ಡೆ ಭಾಗವಹಿಸುವರು. ಮಂಗಳೂರಿನ ಮಾನ್ಯ ಪೋಲೀಸ್ ಕಮೀಷನರ್, ಎಮ್. ಚಂದ್ರಶೇಖರ (IPS) ಇವರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಸಂಧರ್ಭದಲ್ಲಿ ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ದ. ಕ. ಜಿಲ್ಲೆ ಮತ್ತು ಉಡುಪಿ ಜಿಲ್ಲೆಗಳ 250 ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಜರುಗಿದ ದಿ. ಉಳ್ಳಾಲ ಶ್ರೀನಿವಾಸ ಮಲ್ಯ ಜೀವನ- ಸಾಧನೆ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರಿಂದ ಬಹುಮಾನ ವಿತರಣಾ ಕಾರ್ಯಕ್ರಮವೂ ನಡೆಯಲಿರುವುದು ಎಂದು ವಿಶ್ವ ಕೊಂಕಣಿ ಕೇಂದ್ರದ ಪ್ರಕಟನೆ ತಿಳಿಸಿದೆ.


Spread the love
RedditLinkedinYoutubeEmailFacebook MessengerTelegramWhatsapp

Exit mobile version