ದಿ. ಪ್ರಭಾಕರ ಅಂಬಲ್ತೆರೆಯವರ ದಿವ್ಯಾತ್ಮಕ್ಕೆ ಶೃದ್ಧಾಂಜಲಿ ಸಮರ್ಪಣೆ
ದುಬಾಯಿಯಲ್ಲಿ ಅನಿವಾಸಿಯಾಗಿದ್ದ ಶ್ರೀ ಪ್ರಭಾಕರ್ ಅಂಬಲ್ತೆರೆಯವರು ಆನಾರೋಗ್ಯದ ಕಾರಣದುಬೈನಿಂದ ಊರಿಗೆ ತೆರಳಿ ಮಂಗಳೂರಿನ ತಮ್ಮ ಸ್ವಗ್ರಹದಲ್ಲಿಚಿಕಿತ್ಸೆ ಪಡೆಯುತ್ತಿದ್ದು ಅನಿರೀಕ್ಷಿತವಾಗಿ 55ರ ನಡು ವಯಸ್ಸಿನಲ್ಲಿ 2024ಮೇ 6ನೇ ತಾರೀಕಿನಂದು ನಿಧನರಾಗಿದ್ದರು. ಅಗಲಿರುವ ದಿವಂಗತ ಪ್ರಭಾಕರ ಅಂಬಲ್ತೆರೆಯವರಿಗೆ ಗಲ್ಫ್ ನಾಡಿನ ಸಂಘ ಸಂಸ್ಥೆಗಳ ಪ್ರಮುಖ ಸಂಘ ಸಂಸ್ಥೆಗಳ ಮುಖ್ಯಸ್ಥರ ಸಮ್ಮುಖದಲ್ಲಿ ಸಂತಾಪ ಸಭೆಯನ್ನು ಏರ್ಪಡಿಸಲಾಗಿತ್ತು.
ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯು.ಎ.ಇ. ಹಾಗೂ ಕರ್ನಾಟಕ ಸಂಘ ಶಾರ್ಜಾ ಮತ್ತು ಮಾರ್ಗದೀಪ ಸಾಂಸ್ಕೃತಿಕ ಸಮಿತಿಯು.ಎ.ಇ. ಸಂಯುಕ್ತಆಶ್ರಯದಲ್ಲಿ ನುಡಿ ನಮನ ಶೃದ್ದಾಂಜಲಿ ಸಮರ್ಪಣೆ ಸಭೆಯನ್ನು ದುಬಾಯಿ ಅಲ್‍ಗಿಸೆಸ್ ನ ಫಾರ್ಚೂನ್ ಪ್ಲಾಝಾ ಹೋಟೆಲ್ ಸಭಾಂಗಣದಲ್ಲಿ2024 ಮೇ 11ನೇ ತಾರೀಕು ಸಂಜೆ ಏರ್ಪಡಿಸಲಾಗಿತ್ತು.
ಸಭೆಯಲ್ಲಿ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯು.ಎ.ಇ. ಅಧ್ಯಕ್ಷರು ಶ್ರೀ ಪ್ರವೀಣ್‍ಕುಮಾರ್ ಶೆಟ್ಟಿ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರು ಶ್ರೀ ಸರ್ವೋತ್ತಮ ಶೆಟ್ಟಿ, ಕರ್ನಾಟಕ ಸಂಘ ಶಾರ್ಜಾದ ಆಧ್ಯಕ್ಷರು ಶ್ರೀ ಸತೀಶ್ ಪೂಜಾರಿ, ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷರು ಶ್ರೀ ಗಣೇಶ್‍ರೈ, ಕರ್ನಾಟಕ ಸಂಘ ದುಬಾಯಿಯ ಅಧ್ಯಕ್ಷರು ಶ್ರೀ ಶಶಿಧರ ನಾಗರಾಜಪ್ಪ, ಮಾರ್ಗದೀಪ ಸಾಂಸ್ಕೃತಿಕ ಸಮಿತಿ ಪೂರ್ವ ಅಧ್ಯಕ್ಷರು ಶ್ರೀ ಸುಗಂಧರಾಜ್ ಬೇಕಲ್, ಬ್ಯಾರೀಸ್ ಕಲ್ಚರಲ್ ಫೊರಮ್ ಪೋಷಕರ ುಡಾ. ಬಿ.ಕೆ. ಯೂಸುಫ್, ಅಧ್ಯಕ್ಷರು ಶ್ರೀ ಅಬ್ದುಲ ಲತೀಫ್ ಮುಲ್ಕಿ, ಇನ್ನಿತರ ಗಣ್ಯರುಗಳು ಶ್ರೀಯುತರುಗಳಾದ ಶೋಧನ್ ಪ್ರಸಾದ್, ಮಲ್ಲಿಕಾರ್ಜುನ ಗೌಡ, ಮನೋಹರ್ ತೋನ್ಸೆ, ವಿಶ್ವನಾಥ್ ಶೆಟ್ಟಿ, ರಾಜೇಶ್ ಕುತ್ತಾರ್, ನೋವೆಲ್ ಡಿ ಅಲ್ಮೆಡಾ, ಬ್ರಾಹ್ಮಣ ಸಮಾಜದ ಅಧ್ಯಕ್ಷರು ಶ್ರೀ ಸುಧಾಕರ್ ಪೇಜಾವರ ಹಾಗೂ ಇನ್ನಿತರ ಹಲವಾರು ಸಂಘ ಸಂಸ್ಥಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಪುಷ್ಪಗಳೊಂದಿಗೆ ನುಡಿ ನಮನ ಸಲ್ಲಿಸಲಾಯಿತು.
ನುಡಿನಮನದಲ್ಲಿ ಕಳೆದ 25 ವರ್ಷಗಳಲ್ಲಿ ಸದಾ ಚೈತನ್ಯಶೀಲ ವ್ಯಕ್ತಿತ್ವವನ್ನು ಸಂತಾಪದಲ್ಲಿ ನೆನಪು ಮಾಡಿಕೊಳ್ಳಲಾಯಿತು.
* ಕರ್ನಾಟಕ ಸಂಘ ಶಾಜಾದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ
* ಕರ್ನಾಟಕ ಸಂಘ ಶಾಜಾದಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವುದು
* ಯು.ಎ.ಇ.ಯಲ್ಲಿ ಪ್ರಥಮ ಕನ್ನಡ ರೇಡಿಯೊ ಏಔಆ 1152 ಪ್ರಾರಂಭಿಸಿರುವುದು.
ಕನ್ನಡ ವಾರ್ತೆಗಳು, ಸಂದರ್ಶನ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚೆ…
* ರಾಮಕ್ಷ್ತ್ರೀಯ ಸಂಘ ಯು.ಎ.ಇ. ಯ ಸ್ಥಾಪಕ ಸದಸ್ಯರು, ಅಧ್ಯಕ್ಷರಾಗಿ ಸೇವೆ ಸಲ್ಲಿಕೆ
* ಮಾರ್ಗದೀಪ ಸಾಂಸ್ಕೃತಿಕ ಸಮಿತಿ ಯು.ಎ.ಇ. ಸ್ಥಾಪಕರು, ಅಧ್ಯಕ್ಷರಾಗಿ ಸೇವೆ ಸಲ್ಲಿಕೆ
ದುಬಾಯಿಯಲ್ಲಿ ಪ್ರಥಮ ಬಾರಿಗೆ ಕನ್ನಡಿಗರನ್ನು ಒಗ್ಗೂಡಿಸಿ ಸಾರ್ವಜನಿಕ ಶೀ ಗಣಪತಿ ಉತ್ಸವ ಫ್ರಾರಂಭಿಸಿದವರು.
* ದುಬಾಯಿಯಲ್ಲಿಆಪಘಾತದಲ್ಲಿ ಸಿಲುಕಿದವರಿಗೆ ಸಹಾಯ ಹಸ್ತ ನೀಡಿರುವುದು.
* ದುಬಾಯಿಯಲ್ಲಿ ಮರಣ ಹೊಂದಿದ ಅನಿವಾಸಿ ಭಾರತೀಯರ ಮೃತದೇಹವನ್ನು ಯು.ಎಇ. ಕಾನೂನಿನ ಪ್ರಕ್ರಿಯೇ ನಡೆಸಿ ಅವರ ಊರಿಗೆ ಮುಟ್ಟಿಸುವ ವ್ಯವಸ್ಥೆ ಮಾಡಿರುವುದು.
* ಪ್ರತಿಭಾನ್ವಿತ ಪ್ರತಿಭೆಗಳಿಗೆ ವಿವಿಧ ಸಾಂಸ್ಕೃತಿಕ ವೇದಿಕೆಗಳಲ್ಲಿ ಅವಕಾಶ ಕಲ್ಪಿಸಿಸ್ರುವುದು.
* ಮಂಗಳೂರು ವಿಮಾನಯಾನದ ಹೆಚ್ಚುವರಿ ಟಿಕೆಟ್ ದರವನ್ನು ಪ್ರಶ್ನಿಸಿ ಮಂಗಳೂರು ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಜಾಥಾ ಮೂಲಕ ಸಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಮುಖ ಗಣ್ಯರೊಂದಿಗೆ ಧರಣಿ ಕುಳಿತು ಪ್ರತಿಭಟನೆ ಮಾಡಿ ವಿಮಾನ ಯಾನ ಸಂಸ್ಥೆಗೆ ಚುರುಕು ಮುಟ್ಟಿಸಿರುವುದು.
* ಯು.ಎ.ಇ.ಯಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಿಗೆ ಕರ್ನಾಟಕ ಸರ್ಕಾರದಿಂದ ಯಾವುದೇ ರೀತಿಯಲ್ಲಿ ಸೌಲಭ್ಯಗಳು ಸಿಗದೆ ವಂಚಿತರಾಗಿರುವುದನ್ನು ಸರ್ಕಾರದ ಗಮನಕ್ಕೆ ಪತ್ರಗಳ ಮೂಲಕ ಹಾಗೂ ಮಾಧ್ಯಮ ಸಂವಾದದ ಮೂಲಕ ಮುಟ್ಟಿಸಿರುವುದು.
* ಅನಿವಾಸಿ ಭಾರತೀಯ ಸಮಿತಿ ಯು.ಎ.ಇ. ಸ್ಥಾಪಕರಲ್ಲಿ ಓರ್ವರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದವರು.
ಹೆಚ್ಚಿನ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡು ಸಮಾಜಮುಖಿಯಾಗಿ ಗಲ್ಫ್ ನಾಡಿನಲ್ಲಿ ಕನ್ನಡಿಅಗರು ಮತ್ತು ಮಲಯಾಳಂ ಭಾಷಿಗರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು.
ಫಾರ್ಚೂನ್ ಪ್ಲಾಝಾದ ಚೇರ್ಮನ್ ಶ್ರೀ ಪ್ರವೀಣ್‍ಕುಮಾರ್ ಶೆಟ್ಟಿಯವರು ಸಂತಾಪ ಸಭೆಯ ಸಭಾಂಗಣದ ಸ್ಥಳವಕಾಶವನ್ನು ವ್ಯವಸ್ಥೆ ಮಾಡಿದ್ದರು.