ದಿ| ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರಕ್ಕೆ ಕೃತಿಗಳ ಅಹ್ವಾನ

Spread the love

ದಿ| ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರಕ್ಕೆ ಕೃತಿಗಳ ಅಹ್ವಾನ

ಉಡುಪಿ: ದಿ| ಫ್ರಾನ್ಸಿಸ್ ದಾಂತಿ ಸ್ಮಾರಕ ಪ್ರತಿಷ್ಠಾನ ಮತ್ತು ಕಥೋಲಿಕ್ ಸಭಾ ಉಡುಪಿ ಪ್ರದೇಶ (ರಿ.) ಇದರ ಜಂಟಿ ಆಶ್ರಯದಲ್ಲಿ ಕರ್ನಾಟಕ ರಾಜ್ಯಮಟ್ಟದ “ದಿ|ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ – 2024″ ಕಥೊಲಿಕ್ ಕೊಂಕಣಿ ಕ್ರೈಸ್ತರಿಂದ 2024 ಜನವರಿಯಿಂದ 2024 ಡಿಸೆಂಬರ್ ವರೆಗೆ ಪ್ರಕಟಪಡಿಸಿದ ಕನ್ನಡ ಭಾಷೆಯ ಕೃತಿಗಳನ್ನು ಆಹ್ವಾನಿಸಲಾಗಿದೆ.

ಪುರಸ್ಕಾರಕ್ಕೆ ಯೋಗ್ಯವಾದ ಕೃತಿಗಳು ಧಾರ್ಮಿಕ, ವೈಚಾರಿಕ, ವೈಜ್ಞಾನಿಕ, ಐತಿಹಾಸಿಕ, ಸಮಾಜಶಾಸ್ತ್ರ, ಜಾನಪದ ಅಧ್ಯಯನ, ಜೀವನಚರಿತ್ರೆ, ವ್ಯಕ್ತಿಚಿತ್ರಣ, ಸಂಪಾದಿತ ಕೃತಿಗಳ ಸಂಗ್ರಹ, ಕೊಂಕಣಿಯಿಂದ ಭಾಷಾಂತರಿತ ಕೃತಿಗಳು, ಕಥಾ ಸಂಗ್ರಹ, ಕಾದಂಬರಿ, ಕಾವ್ಯ ಸಂಗ್ರಹ, ನಾಟಕ, ಕಿರು ನಾಟಕ ಸಂಗ್ರಹ ಕಳುಹಿಸಬಹುದು. ಒಂದು ಬಾರಿ ಪ್ರಶಸ್ತಿ ಪಡೆದ ವ್ಯಕ್ತಿಗೆ ಪುನ: ಭಾಗವಹಿಸಲು ಅವಕಾಶವಿರುವುದಿಲ್ಲ.

ಪ್ರಶಸ್ತಿ ರು. 25,000/- ನಗದು, ಸ್ಮರಣಿಕೆ ನೀಡಿ ಶಾಲು ಹೊದಿಸಿ ಕಥೊಲಿಕ್ ಸಭಾ ಉಡುಪಿ ಪ್ರದೇಶದ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನಿಸಲಾಗುವುದು.

ತಮ್ಮ ಕೃತಿಗಳ ಮುದ್ರಿತ 4 ಪ್ರತಿಗಳನ್ನು 28 ಫೆಬ್ರವರಿ 2025 ರ ಒಳಗೆ ಶ್ರೀ ಅಲೋನ್ಸ್ ಡಿಕೋಸ್ಟಾ, ಸಂಚಾಲಕರು, “ದಿ ಫ್ರಾನ್ಸಿಸ್‌ ದಾಂತಿ ಸ್ಮಾರಕ ಪ್ರತಿಷ್ಠಾನ”, ಕಥೊಲಿಕ್ ಸಭಾ ಉಡುಪಿ ಪ್ರದೇಶ (ರಿ.), 1ನೇ ಮಹಡಿ, ಅನುಗ್ರಹ, ಪಾಲನಾಕೇಂದ್ರ ಕಕ್ಕುಂಜೆ, ಸಂತೆಕಟ್ಟೆ ಪೋಸ್ಟ್ ಉಡುಪಿ – 576105 ಈ ವಿಳಾಸಕ್ಕೆ ಕಳುಹಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಅಲ್ಫೋನ್ಸ್ ಡಿಕೋಸ್ಟಾ : 9035996144


Spread the love
Subscribe
Notify of

0 Comments
Inline Feedbacks
View all comments