ದೀಪಕ್ ಮೃತದೇಹವನ್ನು ಮನೆಗೆ ತಲುಪಿಸಿದ ಪೋಲಿಸರು; ಬಿಜೆಪಿಯಿಂದ ಪ್ರತಿಭಟನೆ

Spread the love

ದೀಪಕ್ ಮೃತದೇಹವನ್ನು ಮನೆಗೆ ತಲುಪಿಸಿದ ಪೋಲಿಸರು; ಬಿಜೆಪಿಯಿಂದ ಪ್ರತಿಭಟನೆ

ಮಂಗಳೂರು: ಕಾಟಿಪಳ್ಳದಲ್ಲಿ ಬುಧವಾರ ದುಷ್ಕರ್ಮಿಗಳಿಂದ ಕೊಲೆಗೀಡಾ ಯುವಕ ದೀಪಕ್ ರಾವ್ ಅವರ ಮೃತದೇಹವನ್ನು ಗುರುವಾರ ಬೆಳಿಗ್ಗೆ ಪೋಲಿಸರು ಆಸ್ಪತ್ರೆಯಿಂದ ನೇರವಾಗಿ ದೀಪಕ್ ಮನೆಗೆ ತಲುಪಿಸಿದ್ದು, ಇದನ್ನು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದರು.

ಗುರುವಾರ ಬೆಳಿಗ್ಗೆ ದಕ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದು, ಅವರು ಆಸ್ಪತ್ರೆಯಿಂದ ತೆರಳಿದ ಮರುಕ್ಷಣವೇ ಪೋಲಿಸರು ಯಾವುದೇ ರೀತಿಯ ಅಹಿತಕರ ಘಟನೆಗೆ ಕಾರಣವಾಗದಂತೆ ತಡೆಯಲು ದೀಪಕ್ ಅವರ ಮೃತದೇಹವನ್ನು ಅಂಬುಲೆನ್ಸ್ ಮೂಲಕ ಮನೆಗೆ ತಲುಪಿಸಿದ್ದಾರೆ.

ದೀಪಕ್ ಮೃತದೇಹ ಮನೆಗೆ ತಲುಪುತ್ತಿದ್ದಂತೆ ಬಿಜೆಪಿ ನಾಯಕರು ಪೋಲಿಸರನ್ನು ತರಾಟೆಗೆ ತೆಗೆದುಕೊಂಡರು. ದೀಪಕ್ ಏನು ಅನಾಥನಲ್ಲ ಆತನ ಮೃತದೇಹವನ್ನು ಅನಾಥನಂತೆ ಪೋಲಿಸರು ತಂದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಮೃತದೇಹವನ್ನು ಅಂಬುಲೆನ್ಸಿನಿಂದ ಹೊರತೆಗೆಯಲು ಅವಕಾಶ ನೀಡದೆ ವಿರೋಧಿಸಿದರು.


Spread the love