ದೀಪಕ್ ರಾವ್ ಕೊಲೆ ಆರೋಪಿ ಪಿಂಕಿ ನವಾಝ್ ಬಿಜೆಪಿ ಕಾರ್ಯಕರ್ತ : ಎಸ್.ಡಿ.ಪಿ.ಐ

Spread the love

ದೀಪಕ್ ರಾವ್ ಕೊಲೆ ಆರೋಪಿ ಪಿಂಕಿ ನವಾಝ್ ಬಿಜೆಪಿ ಕಾರ್ಯಕರ್ತ : ಎಸ್.ಡಿ.ಪಿ.ಐ

ಮಂಗಳೂರು: ಕಾಟಿಪಳ್ಳದಲ್ಲಿ ದುಷ್ಕರ್ಮಿಗಳಿಂದ ಕೊಲೆಯಾದ ದೀಪಕ್ ರಾವ್ ಅವರ ಕೊಲೆಯಲ್ಲಿ ಬಂಧಿತನಾದ ವ್ಯಕ್ತಿಗಳಲ್ಲಿ ಪಿಂಕಿ ನವಾಝ್ ಮತ್ತು ಆತನ ತಂಡ ಈ ಹಿಂದೆ ಚುನಾವಣೆಯಲ್ಲಿ ಸುರತ್ಕಲ್ ಬಿಜೆಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಎಸ್ ಡಿ ಪಿ ಐ ದಕ ಜಿಲ್ಲಾ ಅಧ್ಯಕ್ಷ ಹನೀಫ್ ಖಾನ್ ಕೊಡಾಜೆ ಗಂಭೀರ ಆರೋಪ ಮಾಡಿದ್ದಾರೆ.

ಅವರು ನಗರದಲ್ಲಿ ಗುರುವಾರ ಆಯೋಜಿಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೋಮು ಗಲಭೆಯ ದಾಳವಾಗಿ ಬದುಗುತ್ತಿದ್ದು ಬಜರಂಗದಳ ಕಾರ್ಯಕರ್ತ ದೀಪಕ್ ರಾವ್ ಕೊಲೆಯನ್ನು ಹಾಗೂ ಬಳಿಕ ನಡೆದ ಮುಬಾಶಿರ್ ಮತ್ತು ಬಶೀರ್ ಮೇಲಿನ ಹಲ್ಲೆಯನ್ನು ಖಂಡಿಸಿದ ಹನೀಫ್ ಅವರು ಜಿಲ್ಲೆಯಲ್ಲಿ ಕೋಮು ಘರ್ಷಣೆಯನ್ನು ನಡೆಸಲು ಪೂರ್ವ ನಿಯೋಜಿತ ತಯಾರಿಯಾಗಿದೆ. ಮುಂಬರುವ ಚುನಾವಣೆಗೆ ಬಿಜೆಪಿ ಪಕ್ಷ ಹೆಣಗಳ ಮೇಲೆ ರಾಜಕೀಯ ಮಾಡುವ ಕೆಲಸ ಮಾಡುತ್ತಿದೆ ಆದರೆ ಆರೋಪಿಗಳನ್ನು ತ್ವರಿತವಾಗಿ ಹಿಡಿದ ಪೋಲಿಸರ ಕಾರ್ಯವೈಖರಿ ಅಬಿನಂದನೆಗೆ ಅರ್ಹ ಎಂದರು.

ಪ್ರಕರಣದ ಆರೋಪಿ ಪಿಂಕಿ ನವಾಝ್ ಮತ್ತು ಆತನ ಕುಟುಂಬಿಕರು ಬಿಜೆಪಿ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಿಂಕಿ ನವಾಝ್ ಮತ್ತು ಆತನ ಕುಟುಂಬದವರು ಬಿಜೆಪಿ ಪರ ಪ್ರಚಾರ ಮಾಡಿದ್ದರು. ಪಿಂಕಿ ನವಾಝ್ ಕ್ರಿಮಿನಲ್ ಹಿನ್ನಲೆಯಿಂದ ಬಂದಿದ್ದು, ಬಿಜೆಪಿ ಪಕ್ಷ ಆತನನ್ನು ಕ್ರಿಮಿನಲ್ ಕೆಲಸಗಳಿಗೆ ಉಪಯೋಗಿಸಿಕೊಳ್ಳುತ್ತಿದೆ. ರಾಜ್ಯ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದ್ದು ವಿಶೇಷ ತಂಡವನ್ನು ರಚಿಸಿ ತನಿಖೆ ನಡೆಸಬೇಕು ಎಂದರು.

ಉಡುಪಿ ಮತ್ತು ಮೈಸೂರು ಸಂಸದರಿಗೆ ಕೊಲೆಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದು ಅವರನ್ನು ಸಹ ತನಿಖೆಗೆ ಒಳಪಡಿಸಬೇಕು. ಅವರೂ ಕೂಡ ಈ ಕೊಲೆ ಕೃತ್ಯಗಳಲ್ಲಿ ಭಾಗಿಯಾಗಿರುವ ಸಂಶಯವಿದ್ದು ತನಿಖೆಯಿಂದ ಸತ್ಯ ಹೊರಬರಲು ಸಾಧ್ಯವಿದೆ ಎಂದರು. ದಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಎಸ್ ಡಿ ಪಿ ಐ ಮತ್ತು ಪಿ ಎಫ್ ಐ ಸಂಘಟನೆಯನ್ನು ಹಿಂದೂ ಸಂಘಟನೆಗಳ ಜೊತೆ ಹೋಲಿಕೆ ಮಾಡುತ್ತಾರೆ ಅಲ್ಲದೆ ಸವಣೂರಿನಲ್ಲಿ ಬಿಜೆಪಿಯೊಂದಿಗೆ ಎಸ್ ಡಿ ಪಿ ಐ ಕೈ ಜೋಡಿಸಿದೆ ಎಂದು ಆರೋಪಿಸಿದ್ದಾರೆ ಆದರೆ ಇದುವರೆಗೆ ಬಿಜೆಪಿ ಬೇರೆ ಯಾವುದೇ ಪಕ್ಷದೊಂದಿಗೆ ಕೈ ಜೋಡಿಸಿಲ್ಲ ಎಂದರು.


Spread the love