Home Mangalorean News Kannada News ದೀಪಕ್ ಹತ್ಯೆ ಜಮಾಅತೆ ಇಸ್ಲಾಮೀ ಹಿಂದ್ ಖಂಡನೆ

ದೀಪಕ್ ಹತ್ಯೆ ಜಮಾಅತೆ ಇಸ್ಲಾಮೀ ಹಿಂದ್ ಖಂಡನೆ

Spread the love

ದೀಪಕ್ ಹತ್ಯೆ ಜಮಾಅತೆ ಇಸ್ಲಾಮೀ ಹಿಂದ್ ಖಂಡನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು-ಸುವ್ಯವಸ್ಥೆ ದಿನೇ ದಿನೇ ಹದಗೆಡುತ್ತಿರುವುದಕ್ಕೆ ಇನ್ನೊಂದು ಉದಾಹರಣೆಯಾಗಿದೆ. ಕಾಟಿಪಳ್ಳದ ದೀಪಕ್ ಹತ್ಯೆ. ಇದು ಅತ್ಯಂತ ಖಂಡನೀಯ ಎಂದು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ನಗರ ಅಧ್ಯಕ್ಷ ಮುಹಮ್ಮದ್ ಕುಂಞ ಪ್ರತಿಕ್ರೀಯಿಸಿದ್ದಾರೆ.

ಕಳೆದ ಎರಡ್ಮೂರು ವಾರಗಳಲ್ಲಿ ಜಿಲ್ಲೆ ಹತ್ಯೆ, ಹತ್ಯೆ ಯತ್ನ ಮತ್ತು ಅನೈತಿಕ ಗೂಂಡಾಗಾಗಿ ಸುದ್ದಿಯಲ್ಲಿದೆ. ಇದನ್ನು ಜಿಲ್ಲಾಡಳಿತದ ವೈಫಲ್ಯ ಎನ್ನಬೇಕೋ ಅಥವಾ ಕಾನೂನು ಕೈಗೆತ್ತಿಕೊಳ್ಳುವವರ ಮೇಲುಗೈ ಏನ್ನಬೇಕೋ? ಮುಖ್ಯಮಂತ್ರಿಗಳು ಮತ್ತು ಗೃಹ ಸಂಚಿವರು ಈ ಜಿಲ್ಲೆಯ ಬಗ್ಗೆ ವಿಶೇಷ ಗಮನಕೊಡಬೇಕಾದ ತುರ್ತು ಅಗತ್ಯವಿದೆ. ಚುನಾವಣೆ ಹತ್ತಿರ ಬರುತ್ತಿರುವಂತೆಯೇ ಇಂಥ ಘಟನೆಗಳು ಸಾಮಾನ್ಯ ಎಂದು ಸಮರ್ಥಿಸಿಕೊಳ್ಳುವುದು ಇದಕ್ಕೆ ಪರಿಹಾರವಲ್ಲ.

ಜಿಲ್ಲೆಯನ್ನು ಉದ್ವಿಘ್ನ ಸ್ಥಿತಿಯಲ್ಲಿಡುವುದನ್ನೇ ಗುರಿಯಾಗಿಟ್ಟುಕೊಂಡಿರುವ ಶಕ್ತಿಗಳು ಜಿಲ್ಲೆಯಲ್ಲಿರಬಹುದು. ಅವರನ್ನು ಹದ್ದುಬಸ್ಸಿನಲ್ಲಿಡುವುದು ಜಿಲ್ಲಾಡಳಿತದ ಕರ್ತವ್ಯ. ದೀಪುವಿನ ಹತ್ಯೆಕೋರರನ್ನು ಮತ್ತು ಕಲ್ಲಡ್ಕದ ಕೇಶವ ಹತ್ಯಾ ಯತ್ನದ ಆರೋಪಿಗಳನ್ನು ಬಂಧಿಸಿರುವ ಪೆÇಲೀಸರ ಪ್ರಯತ್ನವನ್ನು ಶ್ಲಾಘಿಸುವುದರ ಜೊತೆಗೇ ಇನ್ನಷ್ಟು ಹತ್ಯೆ, ಪ್ರತೀಕಾರಗಳ ಸರಣಿ ಮುಂದುವರಿಯದಂತೆ ನೋಡಿಒಳ್ಳಬೇಕಾದ ಅಗತ್ಯವೂ ಇದೆ. ದೀಪಕ್‍ನ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಒದಗಿಸುವುದಕ್ಕೂ ಸರಕಾರ ಮುಂದಾಗಬೇಕು. ಅವರು ಆಗ್ರಹಿಸಿದ್ದಾರೆ.


Spread the love

Exit mobile version