Home Mangalorean News Kannada News ದೀಪಾವಳಿಗೆ ಮಂಗಳೂರಿನಲ್ಲಿ ಮಣ್ಣಿನ ಬೆಳಕು !

ದೀಪಾವಳಿಗೆ ಮಂಗಳೂರಿನಲ್ಲಿ ಮಣ್ಣಿನ ಬೆಳಕು !

Spread the love

ದೀಪಾವಳಿಗೆ ಮಂಗಳೂರಿನಲ್ಲಿ ಮಣ್ಣಿನ ಬೆಳಕು !

ದೀಪಾವಳಿ ಸಮೀಪಿಸುತ್ತಿದೆ, ದೀಪಗಳ ಹಬ್ಬವನ್ನು ಸ್ವಾಗತಿಸಲು ಮತ್ತು ಆಚರಿಸಲು ವಿಭಿನ್ನ ವಿನ್ಯಾಸದ ವಿವಿಧ ಬಗೆಯ ದೀಪಗಳು ಮಂಗಳೂರು ನಗರದ ಟೆಂಪಲ್ ಸ್ಕ್ವೆರ್ (ವೆಂಕಟರಮಣ ಟೆಂಪಲ್ ಮುಂಬಾಗ, ಕಾರ್ ಸ್ಟ್ರೀಟ್ )ಲ್ಲಿ ಲಭ್ಯವಿದೆ.

ಕೆಲದಿನಗಳಲ್ಲಿಯೇ ದೀಪಾವಳಿ ಬರಲಿದೆ ಬೆಳಕಿನ ಹಬ್ಬವಾದ ದೀಪಾವಳಿಯಲ್ಲಿ ಮನೆಮನಗಳಲ್ಲಿ ಬೆಳಕು ಹರಿಸಲು ನಗರದ ಇಕೋ ಫ್ರೆಂಡ್ಸ್ ವತಿಯಿಂದ ಮಣ್ಣಿನ ದೀಪಗಳ ಪ್ರದರ್ಶನ ಸಜ್ಜಾಗಿದೆ. ಮಣ್ಣು ಲೋಪ ಮರ ಸೇರಿದಂತೆ ಇತರ ವಸ್ತುಗಳನ್ನು ಮಾಧ್ಯಮವಾಗಿ ಬಳಸಿ ದೇಶದ ವಿವಿದೆಡೆಯಲ್ಲಿ ಬಳಸುವ ಹಲವು ಬಗೆಯ ಪ್ರದರ್ಶನ ಮತ್ತು ಮಾರಾಟಕ್ಕಿಟ್ಟಿದ್ದಾರೆ.

ಮೈಸೂರು, ಚನ್ನ ಪಟ್ಟಣ, ಉತ್ತರಪ್ರದೇಶ, ಗುಜರಾತ್ ಕಚ್ಛ್ ಪ್ರಾಂತ್ಯ, ತಮಿಳುನಾಡಿನ ಮದುರೈ ಪಾಂಡೀಚೆರಿ ಹಾಗೂ ಕೇರಳದಿಂದ ದೀಪಗಳನ್ನ ತಯಾರಿಸುವವರಿಂದ ನೇರವಾಗಿ ಕೊಂಡು ಕೊಂಡು ರಿಯಾಯತಿ ದರದಲ್ಲಿ ಮಾರುಕಟ್ಟೆ ಮಾಡುತ್ತಿದ್ದಾರೆ.

ಮೈಸೂರು ಹಾಗೂ ಚನ್ನಪಟ್ಟಣದಲ್ಲಿ ತಯಾರಿಸಿದ ಮಣ್ಣಿನ ದೀಪಗಳು ಹಾಗೂ ತಮಿಳುನಾಡಿನ ಮುಧುರೈಯಲ್ಲಿ ತಯಾರಿಸಿದ ವಿಭಿನ್ನ ಕಲಾಕೃತಿಗಳ ಮಣ್ಣಿನ ದೀಪಗಳನ್ನು ಇಡಲಾಗಿದೆ. ಕೇರಳದಲ್ಲಿ ತಯಾರಾದ ತೆಂಗಿನ ಕಾಯಿಯಿಂದ ತಯಾರಿಸಿದ ದೀಪಗಳು ಪರಿಸರ ಸ್ನೇಹಿಯಾಗಿದೆ.

ತಮಿಳುನಾಡಿನ ಮುಧುರೈಯಲ್ಲಿ ತಯಾರಿಸಿದ ಮಣ್ಣಿನ ದೀಪಗಳು ಅತೀ ಕಡಿಮೆ ರಿಯಾಯತಿ ದರದಲ್ಲಿ ಲಭ್ಯವಿದೆ.

ಗುಜರಾತಿನಲ್ಲಿ ತಯಾರಿಸಿದ ಮಣ್ಣಿನ ಹಣತೆಯನ್ನು ಬಣ್ಣ ಬಣ್ಣಗಳನ್ನು ಉಪಯೋಗಿಸಿ ಹಾಗೂ ಪರಿಸರಕ್ಕೆ ಹಿತವಾದ ಮೇಣದ ಬತ್ತಿಯನ್ನು ಉಪಯೋಗಿಸಿ ದೀಪಗಳು ನೋಡಲು ಆಕರ್ಷಣಿಯವಾಗಿದೆ.

ಮಣ್ಣಿನ ದೀಪಗಳು: ಗುಜರಾತಿನ ಕಛ್ ಪ್ರಾಂತ್ಯದಲ್ಲಿ ಮಹಿಳಾ ಕಲಾವಿದರು ಜೇಡಿಮಣ್ಣಿನಿಂದ ಸಿದ್ದಪಡಿಸಿರುವ ಆಕರ್ಷಕ ಟೆರಾಕೋಟಾ ಲ್ಯಾಂಟಿನ್ ಹಾಗೂ ತಮಿಳುನಾಡಿನ ಕಲಾವಿದರು ತಯಾರಿಸಿದ ಪುರತನ ಶೈಲಿಯ ಸೀಮೆಎಣ್ಣೆ ದೀಪಗಳು ಇಲ್ಲಿ ಸಿಗುತ್ತವೆ.

ಹೆಚ್ಚಿನ ಮಾಹಿತಿಗಾಗಿ ಇಕೋ ಫ್ರೆಂಡ್ಸ್ ಗ್ರೂಪ್ ಕರೆಮಾಡಿ 9972237055


Spread the love

Exit mobile version