ದುಬಾಯಿಯಲ್ಲಿ ನಡೆದ ಹೆಚ್.ಎಂ.ಸಿ. ಯುನೈಟೆಡ್ ಸರ್ವಧರ್ಮ ಸೌಹಾರ್ಧ ಇಫ್ತಾರ್ ಕೂಟ
ಪವಿತ್ರರಂಜಾನ್ ಮಾಸಾಚರಣೆಯ ಶುಭ ಸಂದರ್ಭದಲ್ಲಿ ದುಬಾಯಿ ಗ್ರಾಂಡ್ ಎಕ್ಸ್ಲೆಸಿಯರ್ ಹೋಟೆಲ್ ಸಭಾಂಗಣದಲ್ಲಿ 2017 ಜೂನ್ 16ನೆ ತಾರೀಕು ಶುಕ್ರವಾರ ಸಂಜೆ 6.00ಗಂಟೆಗೆ ಹೆಚ್.ಎಂ.ಸಿ. ಯುನೈಟೆಡ್ ಆಶ್ರಯದಲ್ಲಿ ಸೌಹಾರ್ಧ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು.
ಹೆಚ್.ಎಂ.ಸಿ. ಯುನೈಟೆಡ್ – ಹಿಂದೂ ಮುಸ್ಲಿಂ ಕ್ರೈಸ್ತಒಗ್ಗೂಡಿ ಸಂಘಟಿತರಾದ ವೇದಿಕೆ ಕಳೆದ ಹಲವು ವರ್ಷಗಳಿಂದ ಕರಾವಳಿ ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಕ್ರೀಡೋತ್ಸವ, ಕ್ರಿಕೆಟ್ ಪಂದ್ಯಾಟ, ರಾಜ್ಯಮಟ್ಟದಲ್ಲಿ ಕ್ರೀಡಾಪಟುಗಳಿಗೆ ಪ್ರಶಸ್ತಿ ಪ್ರಧಾನ ಸಮಾರಂಭಗಳನ್ನು ಅಯೋಜಿಸಿಕೊಂಡು ಯಶಸ್ವಿಯಾಗಿ ನಡೆಸಿರುವ ಕೀರ್ತಿ ಹೆಚ್.ಎಂ. ಸಿ. ಯುನೈಟೆಡ್‍ಗೆ ಸಲ್ಲುತ್ತದೆ.
ದುಬಾಯಿಯಲ್ಲಿ ಪ್ರಥಮ ಬಾರಿಗೆ ಏರ್ಪಡಿಸಿದ ಇಫ್ತಾರ್‍ಕೂಟಕ್ಕೆಯು.ಎ.ಇ. ಯ ವಿವಿಧ ಭಾಗಗಳಿಂದ ಸರ್ವಧರ್ಮದಆಹ್ವಾನಿತ ಅತಿಥಿಗಳು ಆಗಮಿಸಿದ್ದರು. ಶ್ರೀಮತಿ ಭವಿತ ಪಾಂಚಾಲ್‍ರವರ ಸ್ವಾಗತದೊಂದಿಗೆಕಾರ್ಯಕ್ರಮ ಪ್ರಾರಂಭವಾಯಿತು. ಮಾಸ್ಟರ್ ಯೂಸುಫ್ ನಸರ್ ಆಲಿ ಯೂಸುಫ್ ಕುರಾನ್ ಪಠಣದೊಂದಿಗೆ ಇಫ್ತಾರ್ ಕೂಟಕ್ಕೆ ಚಾಲನೆ ನೀಡಲಾಯಿತು. ಪವಿತ್ರ ರಮದಾನ್ ಮಾಸಾಚರಣೆಯ ಬಗ್ಗೆ ಲೇಖಕರು, ಸಾಹಿಲ ಆನ್ ಲೈನ್ ಮಾಧ್ಯಮದಕನ್ನಡ ವಿಭಾಗದ ಉಪಸಂಪಾದಕರಾದ ಶ್ರೀ ಆರ್ಶದ್ ಹುಸೈನ್‍ರವರು ಶುಭ ಸಂದೇಶವನ್ನು ನೀಡಿದರು. ಇಫ್ತಾರ್ ಉಪವಾಸವನ್ನು ಅಂತ್ಯಗೊಳಿಸಿ ಉಪಹಾರ ಸ್ವೀಕರಿಸಿ, ನಮಾಜ್ ಮುಗಿಸಿದ ನಂತರ ದ್ವಿತೀಯ ಹಂತದ ಸಭಾಕಾರ್ಯಕ್ರಮ ಮುಂದುವರೆಸಲಾಯಿತು. ಶ್ರೀ ಹರೀಶ್ ಶೇರಿಗಾರ್ ನಿರ್ಮಾಣದ “ಮಾರ್ಚ್ 22” ಕನ್ನಡ ಚಲನಚಿತ್ರ ಸರ್ವಧರ್ಮ ಸಮನ್ವಯದ ಹಿನ್ನೆಲೆಯಲ್ಲಿ ಚಿತ್ರಿಕರಣವಾಗಿದ್ದು, ಡಾ. ಬಿ ಆರ್. ಶೆಟ್ಟಿಯವರು ವಿಶೇಷ ಫಕೀರನ ಪಾತ್ರದಲ್ಲಿ ನಟಿಸಿರುವ ಅರ್ಥಪೂರ್ಣ ಭಾವೈಕ್ಯತೆಯಗೀತೆಯ ಭಾಗವನ್ನು ಪರದೆಯ ಮೇಲೆ ಪ್ರದರ್ಶಿಸಲಾಯಿತು.
ವೇದಿಕೆಯಲ್ಲಿ ಹೆಚ್.ಎಂ.ಸಿ. ಯುನೈಟೆಡ್‍ಗೌರಅಧ್ಯಕ್ಷರು ಶ್ರೀ ಕೆ. ಪಿ. ಇಬ್ರಾಹಿಂ ಮಟ್ಪಾಡಿ, ಗೌರವ ಅತಿಥಿಗಳಾದ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯು.ಎ.ಇ. ಅಧ್ಯಕ್ಷರು ಹಾಗೂ ಫಾರ್ಚೂನ್‍ಗ್ರೂಫ್‍ಆಫ್ ಹೋಟೆಲ್ಸ್‍ಚೇರ್ಮೆನ್ ಶ್ರೀ ಪ್ರವೀಣ್‍ಕುಮಾರ್ ಶೆಟ್ಟಿ, ಮೆಲುವಾ ಸಿಗಾರ್ ಬ್ರಾಂಡ್‍ಓನರ್, ಕ್ವೀನ್ ಬೀ ಪ್ರಾಡಕ್ಟ್ಸ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀ ಯೋಗೇಶ್ ದೇಶಪಾಂಡೆ, ಆಕ್ಮೆ ಬಿಲ್ಡಿಂಗ್ ಮೆಟೆರಿಯಲ್ಸ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕೆ.ಎನ್.ಆರ್.ಐ. ಉಪಾಧ್ಯಕ್ಷರು ಶ್ರೀ ಹರೀಶ್ ಶೇರಿಗಾರ್, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರು, ಕೆ.ಎನ್.ಆರ್.ಐ. ಉಪಾಧ್ಯಕ್ಷರು ಶ್ರೀ ಸರ್ವೋತ್ತಮ ಶೆಟ್ಟಿ, ಬ್ಯಾರೀಸ್ ವೆಲ್ಫೆರ್ ಫೋರಂ ಅಬುಧಾಬಿ ಅಧ್ಯಕ್ಷರು ಶ್ರೀ ಮಹಮ್ಮದ್ ಆಲಿ ಉಚ್ಚಿಲ, ಶಾರ್ಜಾ ದುಬಾಯಿ ರಾಯಲ್ ಡೈಮಂಡ್ಸ್ ಚೇರ್ಮನ್ ಶ್ರೀ ಇಮ್ರಾನ್ ಖಾನ್, ಕೆ.ಎನ್.ಆರ್.ಐ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಭಾಕರ ಅಂಬಲ್ತೆರೆ, ರೇದಿಯಂಟ್ ಸ್ಟಾರ್‍ಗ್ರೂಪ್‍ಆಫ್ ಕಂಪೆನಿ ಸಿ.ಎಫ್.ಓ ಶ್ರೀ ಶಾಂತಾರಾಂ ಶೆಟ್ಟಿ, ಶ್ರೀ ಸುನಿಲ್ ಬಾಗಲ್ಕೊಟ್, ಮತ್ತು ಶ್ರೀ ಸಿರೆಮಿಕಾ ಗ್ರೂಪ್ ಮಸ್ಕಟ್, ಚೇರ್ಮನ್ ಶ್ರೀ ಅಹ್ಮದ್ ನುಚಿಕಲತ್ ಆಸೀನರಾಗಿದ್ದರು.
ಹೆಚ್.ಎಂ.ಸಿ. ಯುನೈಟೆಡ್ ಸ್ಥಾಪಕರಲ್ಲಿ ಓರ್ವರಾದ ಸಂಘಟಕರಾದ ಶ್ರೀ ಶಕೀಲ್ ಹಸನ್‍ರವರು ತಮ್ಮ ಪ್ರಾಸ್ತವಿಕ ಭಾಷಣದಲ್ಲಿ ಹೆಚ್.ಎಂ.ಸಿ. ಯುನೈಟೆಡ್ ಹಿಂದೂ ಮುಸ್ಲಿಂ ಕ್ರೈಸ್ತ ಸಂಘಟನೆಯನ್ನು ಕರಾವಳಿ ಕರ್ನಾಟಕದ ಬ್ರಹ್ಮಾವರದಲ್ಲಿ ಸ್ಥಾಪಿಸಿ ಧ್ಯೆಯೋದ್ದೇಶಗಳು ಹಾಗೂ ಕಾರ್ಯಯೋಜನೆಗಳನ್ನು ಹಾಕಿಕೊಂಡು ಯಶಸ್ವಿ ಹೆಜ್ಜೆಗಳನ್ನು ಇಟ್ಟು ಮುನ್ನಡೆದ ಬಗ್ಗೆ ವಿವರವಾಗಿತಿಳಿಸಿ,ಇದೀಗ ದುಬಾಯಿಯಲ್ಲಿ ಪ್ರಥಮ ಬಾರಿಗೆ ಇಫ್ತಾರ್ ಕೂಟವನ್ನು ಆಯೋಜಿಸಲು ತಮ್ಮ ಕಾರ್ಯಕಾರಿ ಸಮಿತಿಯ ಸಹಕಾರದ ಕೊಡುಗೆಯನ್ನು ಶ್ಲಾಘಿಸಿ, ಸಭೆಗೆ ಆಗಮಿಸಿದ ಸರ್ವರಿಗೂ ಶುಭವನ್ನು ಹಾರೈಸಿದರು.
ಗೌರವ ಅತಿಥಿಗಳು ಪವಿತ್ರ ರಮದಾನ್ ಮಾಸದ ಶುಭ ಸಂದೇಶವನ್ನು ನೀಡಿದರು.
ಗೌರವ ಅತಿಥಿಗಳು ಮತ್ತು ಕಾರ್ಯಕರ್ತರಿಗೆ ಅಭಿನಂದನಾ ಸ್ಮರಣಿಕೆಪತ್ರವನ್ನು ನೀಡಿ ಗೌರವಿಸಲಾಯಿತು.
ಇಫ್ತಾರ್ ಕೂಟದಲ್ಲಿ ಮಾಧ್ಯಮ ಮಿತ್ರರು ಆಗಮಿಸಿ ತಮ್ಮ ಪೂರ್ಣ ಸಹಕಾರವನ್ನು ನೀಡಿದ್ದರು.
ಅತಿಥಿಗಳಲ್ಲಿ ಓರ್ವರಾದ ಕ್ರಿಯಾತ್ಮಕ ಕಲಾನಿರ್ದೇಶಕ, ಕೆ. ಎನ್. ಆರ್. ಐ. ಉಪಾಧ್ಯಕರಾದ ಶ್ರೀ ಬಿ. ಕೆ. ಗಣೇಶ್ ರೈಯವರು ಕಾರ್ಯಕ್ರಮ ನಿರೂಪಣೆಯನ್ನು ನಿರ್ವಹಿಸಿ, ಸರ್ವರಿಗೂ ವಂದನೆಗಳನ್ನು ಸಲ್ಲಿಸಿ ಶುಭಾಶಯಗಳನ್ನು ಕೋರಿದರು.
ಕೊನೆಯಲ್ಲಿ ಸ್ವಾದಿಷ್ಟ ಭೋಜನದ ವ್ಯವಸ್ಥೆಗೊಳಿಸಿದ್ದು ಸರ್ವರು ಸ್ವೀಕರಿಸಿದರು.
ಹೆಚ್.ಎಂ.ಸಿ. ಯುನೈಟೆಡ್ ದುಬಾಯಿ ಘಟಕದ ಕಾರ್ಯಕಾರಿ ಸಮಿತಿಯ ಸರ್ವಸದಸ್ಯರ ಹಲವು ದಿನಗಳ ವ್ಯವಸ್ಥಿತ ಪೂರ್ವತಯಾರಿಯ ಫಲವಾಗಿ ದುಬಾಯಿಯಲ್ಲಿ ಪ್ರಥಮ ಬಾರಿಗೆ ನಡೆದ ಸರ್ವಧರ್ಮಇಫ್ತಾರ್‍ಕೂಟ ಐತಿಹಾಸಿಕ ದಾಖಲೆಗೆ ಸಾಕ್ಷಿಯಾಯಿತು.