Home Mangalorean News Kannada News ದುಬೈಯಲ್ಲಿ ವಿಜೃಂಭಿಸಿದ ಯಕ್ಷಾಂಭುದಿ -ಉಡುಪಿ ಯ ವಿದ್ಯಾರ್ಥಿಗಳ ” ಗಜೇಂದ್ರ ಮೋಕ್ಷ ” ಯಕ್ಷಗಾನ 

ದುಬೈಯಲ್ಲಿ ವಿಜೃಂಭಿಸಿದ ಯಕ್ಷಾಂಭುದಿ -ಉಡುಪಿ ಯ ವಿದ್ಯಾರ್ಥಿಗಳ ” ಗಜೇಂದ್ರ ಮೋಕ್ಷ ” ಯಕ್ಷಗಾನ 

Spread the love

ದುಬೈಯಲ್ಲಿ ವಿಜೃಂಭಿಸಿದ ಯಕ್ಷಾಂಭುದಿ -ಉಡುಪಿ ಯ ವಿದ್ಯಾರ್ಥಿಗಳ ” ಗಜೇಂದ್ರ ಮೋಕ್ಷ ” ಯಕ್ಷಗಾನ 

ದುಬೈ :  ಭಾರತೀಯ ಧೂತಾವಾಸದ ಸಹಯೋಗದೊಂದಿಗೆ ಭಾರತದ 71 ನೇ ಗಣರಾಜ್ಯೋತ್ಸವ ಮತ್ತು ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಉಡುಪಿಯ ಯಕ್ಷಾಂಭುದಿ ಯಕ್ಷಗಾನ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ” ಗಜೇಂದ್ರ ಮೋಕ್ಷ ” ಎಂಬ ಯಕ್ಷಗಾನವನ್ನು ಜೆ. ಎಸ್ .ಎಸ್ ಇಂಟರ್ನ್ಯಾಷನಲ್ ಸ್ಕೂಲ್ ದುಬೈ ಯಲ್ಲಿ ಪ್ರದರ್ಶಿಸಿದರು .

ಸಮಾರಂಭದಲ್ಲಿ ಅತಿಥಿಗಳಾಗಿ ಭಾರತೀಯ ದೂತಾವಾಸದ ಅಧಿಕಾರಿಯಾದ ಶ್ರೀಮತಿ ನೀಲು ರೊಹ್ರಾ , ಉದ್ಯಮಿ ಶ್ರೀ ಪ್ರವೀಣ್ ಶೆಟ್ಟಿ , ಸಮಾಜ ಸೇವಕ ಮೋಹನ್ .ಏನ್ ಹಾಗು ಸತೀಶ್ ಮಯ್ಯರವರು ಭಾಗವಹಿಸಿದ್ದರು. ಕರಾವಳಿಯ ಬಹುಮುಖ ಪ್ರತಿಭೆಯ ಕಲಾವಿದ ದಿ . ಪಣಂಬೂರು ವೆಂಕಟ್ರಾಯ ಐತಾಳರ ಸ್ಮರಣಾರ್ಥ ಅವರ ಹೆಸರಿನಲ್ಲಿ ಆರಂಭವಾದ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ , ಯಕ್ಷಗುರು ರಾಕೇಶ್ ರೈ ಯವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಯಕ್ಷಗಾನ ಶಿಕ್ಷಣ ಕೇಂದ್ರವೇ ಉಡುಪಿಯ “ಯಕ್ಷಾಂಭುದಿ “. ಸುಮಾರು 75 ಕ್ಕೂ ಹೆಚ್ಚು ಆಸಕ್ತ ವಿದ್ಯಾರ್ಥಿಗಳು ಇಲ್ಲಿ ಯಕ್ಷಗಾನವನ್ನು ಅಭ್ಯಾಸ ಮಾಡುತ್ತಾರೆ . ಇಲ್ಲಿಂದ ದುಬೈಗೆ ಸುಮಾರು 15 ಕಲಾವಿದರ ತಂಡವೊಂದು ಆಗಮಿಸಿ ಅಧ್ಭುತ ಮತ್ತು ಪರಿಪೂರ್ಣ ಯಕ್ಷಗಾನ ಪ್ರದರ್ಶನವನ್ನಿತ್ತು ಜನಮೆಚ್ಚುಗೆ ಗಳಿಸಿತು .

ಹಿಮ್ಮೇಳದಲ್ಲಿ ಸಿರಿಬಾಗಿಲು ರಾಮಕೃಷ್ಣ ಮಯ್ಯರ ಸಿರಿ ಕಂಠದ ಭಾಗವತಿಗೆ , ಮದ್ದಳೆಯಲ್ಲಿ ಪ್ರಶಾಂತ್ ಕುಮಾರ್ ವಗೆನಾಡು ,ಚೆಂಡೆಯಲ್ಲಿ ಮುರಾರಿ ಕಡಂಬಳಿತ್ತಾಯ ,ಚಕ್ರ ತಾಳದಲ್ಲಿ ಕೃಷ್ಣ ಪ್ರಸಾದ್ ರಾವ್ ಹಾಗು ಮುಮ್ಮೇಳದಲ್ಲಿ ರಾಕೇಶ್ ರೈ ,ಮಿಲನ್ ಕುಮಾರ್ ,ಶರತ್ ಶೆಟ್ಟಿ ,ಅಶ್ವಿತ್ ಸರಳಾಯ ,ಸುಧನ್ವ ,ಸುಮನ್ಯು ,ರವೀಂದ್ರ ಭಟ್ ,ವಿಂಧ್ಯ ಆಚಾರ್ಯ ವನ್ಯಶ್ರೀ , ಡಾ . ಸುನೀಲ್ ಉಡುಪ ಮತ್ತು ಸಂದೀಪ್ ಶೆಟ್ಟಿಗಾರ್ ರವರು ರಾರಾಜಿಸಿದರು. ರಂಗದ ಹಿಂದೆ ಕಿಶೋರ್ ಗಟ್ಟಿ , ವಿಶ್ವೇಶ್ವರ ಅಡಿಗ ,ಜಗನ್ನಾಥ್ ಬೆಳ್ಳಾರೆ ಇನ್ನೂ ಮುಂತಾದವರು ಸಹಕಾರ ನೀಡಿದರು.

ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಾಯೋಜಕರು ಹಾಗು ಕಾರ್ಯಕ್ರಮದ ಆಯೋಜಕರಾದ ಶ್ರೀಮತಿ ಗೋಪಿಕಾ ಮಯ್ಯರವರು ಎಲ್ಲ ಕಲಾವಿದರನ್ನು ಪರಿಚಯಿಸಿದರು , ಶ್ರೀಮತಿ ಎ .ವಿ. ಅಡಿಗ ರವರು ಸ್ವಾಗತಿಸಿ ವಂದಿಸಿದರು . ಕಾರ್ಯಕ್ರಮವನ್ನು ಚಿನ್ಮಯಿ ಮಯ್ಯರವರು ನಿರೂಪಿಸಿದರು .


Spread the love

Exit mobile version