ದುಬೈ : ಪೈಯಕ್ಕಿ ಇಸ್ಲಾಮಿಕ್ ಅಕಾಡೆಮಿ ಸಂಸ್ಥೆಯ ಪ್ರಚಾರಾರ್ಥ ಯು ಎ ಇ ಗೆ ಆಗಮಿಸಿದ ಪಯಕ್ಕಿ ಉಸ್ತಾದ್ ಮತ್ತ್ತು ಪಯ್ಯಕ್ಕಿ ಇಸ್ಲಾಮಿಕ್ ಅಕಾಡೆಮಿ ಮ್ಯಾನೇಜರ್ ಮಜೀದ್ ದಾರಿಮಿ ಯವರನ್ನು ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕೇಂದ್ರ ಸಮಿತಿ ಹಾಗೂ ಅಧೀನ ಸಮಿತಿಗಳ ವತಿಯಿಂದ ರಫೀ ಹೋಟೆಲ್ ಸಭಾಂಗಣದಲ್ಲಿ ಸನ್ಮಾನಿಸಲಾಯಿತು. ಕೆ ಐ ಸಿ ಕೇಂದ್ರ ಸಮಿತಿ ಅಧ್ಯಕ್ಷರಾದ ಹಾಜಿ ಮೊಹಿಯುದ್ದೀನ್ ಕುಟ್ಟಿ ದಿಬ್ಬರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಸಮಿತಿ ಗೌರವ ಸಲಹೆಗಾರರು , ರಾಸ್ ಅಲ್ ಖೈಮಾ ಸಮಿತಿ ಗೌರವಾಧ್ಯಕ್ಷರಾದ ಪ್ರೋಫ್ಫೆಸ್ಸರ್ ಅಬೂಬಕ್ಕರ್ ತುಂಬೆ ರವರು ಖಿರಾಅತ್ ಪಠಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪಯ್ಯಕ್ಕಿ ಉಸ್ರಾದ್ ಎಂದೇ ಚಿರಪರಿಚಿತರು , ಪ್ರಮುಖ ಪಂಡಿತ ಶ್ರೇಷ್ಟರು , ಸೂಫಿವರ್ಯರು ಆದ ಪಯ್ಯಕ್ಕಿ ಅಬ್ದುಲ್ ಖಾದರ್ ಮುಸ್ಲಿಯಾರ್ ರವರು ಪ್ರಾರ್ಥಿಸಿ ಮಾತನಾಡಿದ ಅವರು , ದೀನೀ ಸಂಘ ಸಂಸ್ಥೆಗಳನ್ನು ಪೋಷಿಸುವುದರಿಂದ ನಮ್ಮ ಜೀವನದಲ್ಲಿ ಯಶಸ್ಸನ್ನು ಕಾಣಬಹುದು. ಅನಾಚಾರ , ಅಧರ್ಮಗಳು ಯತೇಚ್ಛವಾಗಿ ನಡೆಯುತ್ತಿರುವ ಇಂದಿನ ಕಾಲಗಟ್ಟದಲ್ಲಿ ಪ್ರವಾಸಿಜೀವನದ ಬಿಡುವಿನ ಸಮಯದಲ್ಲಿ ಸಮುದಾಯದ ಪ್ರಗತಿಗಾಗಿ ಶ್ರಮವಹಿಸುವ ತಮ್ಮಂತಹ ದೀನೀ ಪ್ರೇಮಿಗಳಿಗೆ ನಾಳೆ ಪರಲೋಕದಲ್ಲಿ ಯಶಸ್ಸು ಕಾಣಲು ಸಾಧ್ಯವಿದ್ದು , ಪರಸ್ಪರ ಕಚ್ಚಾಟ ಹಿಯಾಳಿಕೆ , ತೆಗಳುವಿಕೆಗಳನ್ನು ಮೈಗೂಡಿಸಿಕೊಳ್ಳದೆ, ಆತ್ಮಾಭಿಮಾನದಿಂದ ವಿಧ್ಯಾ ಸಂಸ್ಥೆಗಳನ್ನು ಬೆಳೆಸಿ ಪ್ರೋತ್ಸಾಹಿಸುವಂತೆ ಕೇಳಿಕೊಂಡರು. ಕೆ ಐ ಸಿ ಅಕಾಡೆಮಿ ಭೇಟಿಯ ಕುರಿತು ಉಲ್ಲೇಖಿಸಿ ಮಾತನಾಡಿದ ಅವರು ಅಲ್ಲಿ ಕಲಿತ ವಿಧ್ಯಾರ್ಥಿಗಳು ಇಂದು ಸಮಾಜದ ಅಭಿಮಾನದ ಸ್ವಾತ್ತುಗಳಾಗಿ ಪರಿವರ್ತಿತಗೋಳ್ಳುತ್ತಿದ್ದು ಇವೆಲ್ಲವೂ ತಮ್ಮಂತಹ ದೀನೀ ಸ್ನೇಹಿಗಳ ಅವಿರತ ಪರಿಶ್ರಮದ ಫಲವಾಗಿದ್ದು ಪರಸ್ಪರ ಕೈಜೋಡಿಸಿಕೊಂಡು ಉತ್ತಮ ರೀತಿಯಲ್ಲಿ ಸಂಸ್ಥೆಯು ಮುಂದೆ ಸಾಗಲಿ ಎಂದು ಶುಭ ಹಾರೈಸಿದರು . ಈ ಸಂಧರ್ಭದಲ್ಲಿ ಕೆ ಐ ಸಿ ಕೇಂದ್ರ ಸಮಿತಿ ಪಧಾಧಿಕಾರಿಗಳ ಪರವಾಗಿ ನೇತಾರರು ಪಯ್ಯಕ್ಕಿ ಉಸ್ತಾದ್ ರವರನ್ನು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.
ಯು ಎ ಇ ಗೆ ಆಗಮಿಸಿದ ಇನ್ನೋರ್ವ ಮುಖ್ಯ ಅತಿಥಿ ಪಯ್ಯಕಿ ಇಸ್ಲಾಮಿಕ್ ಅಕಾಡೆಮಿ ಮ್ಯಾನೇಜರ್ ಮಜೀದ್ ದಾರಿಮಿ ಯವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ , ಜೀವನದಲ್ಲಿ ಅತ್ಯಂತ ಹೆಚ್ಚು ಪ್ರತಿಫಳವುಲ್ಲ ಕಾರ್ಯಗಳಲ್ಲಿ ಒಂದಾಗಿದೆ ದೀನೀ ಸಂಘ ಸಂಸ್ಥೆಗಳನ್ನು ಪೋಷಿಸುವುದು. ಮರಣಾನಂತರ ಸೃಷ್ಟಿ ಕರ್ತನು ಸತ್ಯವಿಶ್ಯಾಸಿಯ ಯವ್ವನ ಹಾಗೂ ಸಂಪತ್ತಿನ ಕುರಿತು ಪ್ರಶ್ನಿಸಲಿದ್ದು ಅಂತಹ ಸಂಧರ್ಭದಲ್ಲಿ ತಮ್ಮಂತಹ ದೀನೀ ಸ್ನೇಹಿಗಳಿಗೆ ಇರುವ ಸೌಭಾಗ್ಯವಾಗಿದೆ ಇಂತಹ ಸಂಘ ಸಂಸ್ಥೆಗಳನ್ನು ಪೋಷಿಸುವುದು. ಇದರಿಂದ ಪರಲೋಕ ಪ್ರಾಪ್ತಿಯು ಲಭಿಸಲಿದ್ದು , ಕೇವಲ ಗ್ರಾಮಕ್ಕೆ ಮಾತ್ರ ಅವಲಂಬಿತವಾಗಿ ಪರಿಚಿತವಾಗಿದ್ದ ಕೆ ಐ ಸಿ ಎಂಬ ಈ ಸಂಸ್ಥೆಯು ಇಂದು ರಾಜ್ಯವನ್ನೇ ದಾಟಿ ನಿಂತಿದೆ. ಖುರ್-ಆನ್ ಕಂಠ ಪಾಠಕ್ಕೆ ಮಾತ್ರ ಸೀಮಿತ ಗೊಂಡಿದ್ದ ಈ ಸಂಸ್ಥೆಯು ಇಂದು ದಾರ್ಮಿಕ ಹಾಗೂ ಲೌಕಿಕ ಶೈಕ್ಷಣಿಕ ರಂಗದಲ್ಲಿ ಮಹತ್ತರವಾದ ಸಾಧನೆಯನ್ನು ಗೈದಿದ್ದು ಸಹೋದರ ಧರ್ಮೀಯರೂ ಕೂಡ ನಮ್ಮ ಸಂಸ್ಥೆಯತ್ತ ಪ್ರಶಂಸಿಸುತ್ತಿದ್ದು ಇವೆಲ್ಲವೂ ತಮ್ಮಂತಹ ನೇತಾರರ ಪರಿಶ್ರಮಕ್ಕೆ ಸರ್ವಶಕ್ತನು ಕರುಣಿಸಿದ ಅನುಗ್ರಹವಾಗಿದೆ. ಅಲ್ಲದೆ ಗೌರವಾನ್ವಿತರು ಕೆ ಐ ಸಿ ಅಕಾಡೆಮಿ ಆಧ್ಯ ಕಾಲಘಟಗಳಲ್ಲಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಸಮಯವನ್ನು ಉಲ್ಲೇಖಿಸಿದ ಅವರು, ಅತ್ಯಂತ ಕ್ಲಿಷ್ಟಕರ ಸಂಧರ್ಭವನ್ನು ಎದುರಿಸುತ್ತಾ, ಹಲವಾರು ಏರಿಳಿತಗಳನ್ನು ಕಂಡ ಈ ಸಂಸ್ಥೆಯು ಪುಣ್ಯದಾಯಕ ಸಂಸ್ಥೆಯಾಗಿದ್ದು , ಈ ಸಂಸ್ಥೆಯಲ್ಲಿ ಸೇವೆಸಲ್ಲಿಸಿದ ಅಧ್ಯಾಪಕ ವೃಂದ , ವಿಧ್ಯಾರ್ಜನೆ ಗೈದ ವಿಧ್ಯಾರ್ಥಿಗಳು ಸಮುದಾಯದಲ್ಲಿ ಉನ್ನತಸ್ಥಾನದಲ್ಲಿ ಗುರುತಿಸಿಕೊಂಡಿದ್ದು ಇವೆಲ್ಲವೂ ನಮ್ಮ ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ. ಕರ್ನಾಟಕ ರಾಜ್ಯದಲ್ಲೇ ಮಾದರಿ ಸಂಸ್ಥೆಯಾಗಿ ಬೆಳೆದು ಬರುತ್ತಿರುವ ಈ ಸಂಸ್ಥೆ ಮುಂದೆಯೂ ಉನ್ನತ ಮಟ್ಟದಲ್ಲಿ ಯಶಸ್ಸನ್ನು ಸಾಧಿಸಲೀ ಎಂದು ಶುಭಹಾರೈಸಿದರು. ಇದೇ ಸಂಧರ್ಬದಲ್ಲಿ ಮಜೀದ್ ದಾರಿಮಿ ಯವರನ್ನು ಕೇಂದ್ರ ಸಮಿತಿ ಪಧಾಧಿಕಾರಿಗಳು ಶಾಲು ಹೊದಿಸಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಕೆ ಐ ಸಿ ಕೇಂದ್ರ ಸಮಿತಿ ಗೌರವಾಧ್ಯಕ್ಷರಾದ ಸಯ್ಯದ್ ಅಸ್ಕರಲಿ ತಂಙಲ್ ಕೊಲ್ಪೆ , ದುಬೈ ಸಮಿತಿ ಅದ್ಯಕ್ಷರಾದ ಅಶ್ರಫ್ ಖಾನ್ ಮಾಂತೂರ್ , ಅಬುದಾಬಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ಸಲಾಂ ಸೂರತ್ಕಲ್ , ಶಾರ್ಜಃ ಸಮಿತಿ ಅದ್ಯಕ್ಷರಾದ ಅಬ್ದುಲ್ ರಝಾಕ್ ಮಣಿಲ, ಅಲ್ ಸಮಿತಿ ಕೋಶಾಧಿಕಾರಿ ಸುಲೈಮಾನ್ ಬೈತಡ್ಕ , ರಫೀ ಹೋಟೆಲ್ ಆಡಳಿತಾಧಿಕಾರಿ ಯೂಸುಫ್ ಸುಬ್ಬಯ್ಯಕಟ್ಟೆ , ಅಬುದಾಬಿ ಸಮಿತಿ ಗೌರವಾದ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ ಕಾರ್ಕಳ . ರಾಸ್ ಖೈಮಾ ಸಮಿತಿ ಅಧ್ಯಕ್ಷರಾದ ಶಾಫಿ ಮುಲಾರ್ ಪಟ್ನ , ರಾಸ್ ಅಲ್ ಖೈಮಾ ಸಮಿತಿ ಕಾರ್ಯಾಧ್ಯಕ್ಷರಾದ ಮುಹಮ್ಮದ್ ಮಾಡಾವು , ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ನೂರ್ ಮುಹಮ್ಮದ್ ನೀರ್ಕಜೆ , ಕೋಶಾಧಿಕಾರಿ ಅಬ್ದುಲ್ ಸಲಾಂ ಬಪ್ಪಲಿಗೆ , ಕಾರ್ಯಾಧ್ಯಕ್ಷರಾದ ಶರೀಫ್ ಕಾವು ಹಾಗೂ ಅಧೀನ ಸಮಿತಿ ಪಧಾಧಿಕಾರಿಗಳು, ನೇತಾರರು ಉಪಸ್ತಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿ ಕಾರ್ಯದರ್ಶಿ ರಫೀಕ್ ಅತೂರ್ ಸ್ವಾಗತಿಸಿ , ಅಝೀಝ್ಃ ಸೊಂಪಾಡಿ ವಂದಿಸಿದರುಅಶ್ರಫ್ ಪರ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.