ದುಬೈ ಫಿಟ್ನೆಸ್ ಚಾಲೆಂಜ್ 2019 ಅಭಿಯಾನ

Spread the love

ದುಬೈ ಫಿಟ್ನೆಸ್ ಚಾಲೆಂಜ್ 2019 ಅಭಿಯಾನ

ದುಬೈ: ದುಬೈ ಯುವರಾಜ ಮತ್ತು ಸರಕಾರದ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಶೇಕ್ ಹಮ್ದಾನ್ ಬಿನ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಮ್ ರವರ ಮುಂದಾಳುತ್ವದಲ್ಲಿ ಆರಂಭಗೊಂಡ 30 ದಿನಗಳ ಕನಿಷ್ಠ 30 ನಿಮಿಷ ದೈಹಿಕ ಚಟುವಟಿಕೆಯಲ್ಲಿ ಭಾಗವಹಿಸಿ ದೈಹಿಕ ಕ್ಷಮತೆ ಹೆಚ್ಚಿಸಿಕೊಳ್ಳಲು ಪ್ರೋತ್ಸಾಹಿಸುವ ಸವಾಲಿನಂತೆ ದುಬೈ ಫಿಟ್ನೆಸ್ ಚಾಲೆಂಜ್ 2019 30×30 ಅಭಿಯಾನದ ಅಂಗವಾಗಿ ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ನ (ನೋಂದಾಯಿತ ದುಬೈ ಸರಕಾರದ ಕಮ್ಯುನಿಟಿ ಡೆವೆಲಪ್ ಮೆಂಟ್ ಅಥಾರಿಟಿ) ಮೊದಲ ಕಾರ್ಯಕ್ರಮ ಅಕ್ಟೋಬರ್ 18 ಶುಕ್ರವಾರ ಮುಂಜಾನೆ ದುಬೈಯ ಅಲ್ ಮಮ್ ಝರ್ ಬೀಚ್ ನಲ್ಲಿ ನಡೆಯಿತು.

ಕಾರ್ಯಕ್ರಮದ ಆರಂಭದಲ್ಲಿ ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ಅಧ್ಯಕ್ಷರಾದ ಮುಹಮ್ಮದ್ ಇಸ್ಮಾಯಿಲ್ ಅಬ್ದುರ್ರಝಕ್ ಅವರು ಅರೋಗ್ಯ ಕಾಪಾಡಿಕೊಳ್ಳುವ ಕುರಿತು ಮಾತನಾಡುತ್ತ ಈ ಒಂದು ತಿಂಗಳ ಅಭಿಯಾನದಿಂದ ಪ್ರೇರಿತರಾಗಿ ನಮ್ಮ ಈ ಯಾಂತ್ರಿಕ ಜೀವನದಲ್ಲಿ ನಿರಂತರವಾಗಿ ವ್ಯಾಯಾಮ ವನ್ನು ರೂಢಿಸಿಕೊಳ್ಳಲು ಕರೆ ನೀಡಿದರು, ಈ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಕೆಲವೊಂದು ಉಪಯುಕ್ತ ಮಾಹಿತಿಗಳನ್ನು ನೀಡಿದರು. ಬಳಿಕ ನೆರೆದವರಿಂದ ಯೋಗ, ಜೋಗಿಂಗ್ ಮತ್ತು ವ್ಯಾಯಾಮ ನಡೆಯಿತು.

ಸುಮಾರು 200 ರಷ್ಟು ಮಂದಿ ದುಬೈ ಫಿಟ್ನೆಸ್ ಚಾಲೆಂಜ್ 2019 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕ್ಲಬ್ ನ ಉಪಾಧ್ಯಕ್ಷ ಜಿಯಾವುದ್ದೀನ್ ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಇನ್ನೋರ್ವ ಸಂಚಾಲಕ ಮುಹಮ್ಮದ್ ಶಫಿ ಉಪಸ್ಥಿತರಿದ್ದರು.

ಈ ಅಭಿಯಾನದ ಇನ್ನು ಉಳಿದ ಕಾರ್ಯಕ್ರಮಗಳು ಇದೇ ಸ್ಥಳದಲ್ಲಿ ಅಕ್ಟೋಬರ್ 25, ನ.01, 08 ರಂದು ನಡೆಯಲಿದೆ. ನವಂಬರ್ 15 ರಂದು ಸಮಾರೋಪ ಸಮಾರಂಭ ಅತೀ ವಿಜ್ರಂಭಣೆಯಿಂದ ನಡೆಯಲಿದೆ. ಆದರಿಂದ ಹೆಚ್ಚಿನ ಜನರು ಭಾಗವಹಿಸಿ ಈ ಎಲ್ಲಾ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕೆಂದು ಸಂಘಟಕರು ತಿಳಿಸಿದ್ದಾರೆ.


Spread the love
1 Comment
Inline Feedbacks
View all comments
ಮಹಮ್ಮದ್ ಅಲಿ
5 years ago

ಕೆಲಸದ ಒತ್ತಡದ ನಡುವೆ ಆರೋಗ್ಯದ ಕಡೆ ಗಮನ ಹರಿಸದ ಅನಿವಾಸಿ ಭಾರತೀಯರಿಗೆ ಆರೋಗ್ಯ ದ ಬಗ್ಗೆ ಕಾಳಜಿವಹಿಸಲು ಪ್ರೇರಣೆ ನೀಡಿದ ಈ ಕಾರ್ಯಕ್ರಮ ಉತ್ತಮವಾಗಿತ್ತು.