Home Mangalorean News Kannada News ದೆಹಲಿ ಕನ್ನಡಿಗರನ್ನು ರಂಜಿಸಿದ ನೃತ್ಯನಿಕೇತನ ಕೊಡವೂರು ತಂಡ

ದೆಹಲಿ ಕನ್ನಡಿಗರನ್ನು ರಂಜಿಸಿದ ನೃತ್ಯನಿಕೇತನ ಕೊಡವೂರು ತಂಡ

Spread the love

ದೆಹಲಿ ಕನ್ನಡಿಗರನ್ನು ರಂಜಿಸಿದ ನೃತ್ಯನಿಕೇತನ ಕೊಡವೂರು ತಂಡ

ದೆಹಲಿ: ದೆಹಲಿ ಕರ್ನಾಟಕ ಸಂಘವು ಇದೇ ಫೆಬ್ರವರಿ 12ರಂದು ಸಂಘದ ಸಭಾಂಗಣದಲ್ಲಿ ‘ನೃತ್ಯನಿಕೇತನ’ ಕೊಡವೂರು, ಉಡುಪಿ ತಂಡದ ಕಲಾವಿದರಿಂದ ‘ನೃತ್ಯ ಸಿಂಚನ’ ಎಂಬ ಅದ್ಭುತವಾದ ವಿವಿಧ ಸಾಹಿತ್ಯ ಕೃತಿಗಳನ್ನು ಆಧಾರಿತ ನೃತ್ಯ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ‘ಹಚ್ಚೇವು ಕನ್ನಡದ ದೀಪ’, ಜಿ.ಪಿ.ರಾಜರತ್ನಂ ಅವರ ‘ಹೆಂಡ ಹೆಂಡ್ತಿ ಕನ್ನಡ ಪದಗಳು’, ‘ಡೆನ್ನಡೆನ್ನಾನ’ ತುಳು ಹಾಡುಗಳಿಗೆ ಹಾಗೂ ಶಿವ, ಗಣಪತಿ ಹಾಗೂ ಶ್ರೀದೇವಿಯ ಮಹಿಮೆಯನ್ನು ಕೊಂಡಾಡುವ ಶಾಸ್ತ್ರೀಯ ಭರತನಾಟ್ಯ ಅದಲ್ಲದೆ ‘ಒಂದು ಎರಡು… ಹತ್ತರವರೆಗಿನ ಶ್ರೀಕೃಷ್ಣ ಕಂಸವಧೆ’ ಹಾಡುಗಳಿಗೆ ಮನಮೋಹಕವಾದ ನೃತ್ಯ ಪ್ರದರ್ಶನ ನೀಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

ಸಂಘದ ಹಿರಿಯ ಸದಸ್ಯರಾದ ಬಿ.ವಿ. ಬಲ್ಲಾಳ್ ಹಾಗೂ ದೆಹಲಿ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷರಾದ ಕೆ.ಎಸ್. ಸೋಮಶೇಖರ್, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಸೇರಿ ನಿರ್ದೇಶಕರಾದ ವಿದ್ವಾನ್ ಸುಧೀರ ರಾವ್ ಕೊಡವೂರು ಮತ್ತು ವಿದುಷಿ ಮಾನಸಿ ಸುಧೀರರನ್ನು ಶಾಲು ಹೊದಿಸಿ, ಪುಷ್ಪಗುಚ್ಚ ಮತ್ತು ಸಂಘದ ಸ್ಮರಣಿಕೆ ನೀಡಿ ಅಭಿನಂದಿಸಿದರು.

ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಅವರು ಈ ಸಂದರ್ಭದಲ್ಲಿ ಮಾತನಾಡುತ್ತಾ, ಕರ್ನಾಟಕದ ಒಂದು ಪುಟ್ಟ ಹಳ್ಳಿ, ಕೊಡವೂರಿನಲ್ಲಿ ಇಂತಹ ಅಮೂಲ್ಯ ಪ್ರತಿಭೆಗಳು ಅಡಗಿವೆ ಎಂಬುದು ನಮ್ಮೆಲ್ಲರನ್ನು ಇಂದು ಆಶ್ಚರ್ಯಚಕಿತರನ್ನಾಗಿ ಮಾಡಿದೆ. ಕನ್ನಡ ಮತ್ತು ತುಳು ಭಾಷೆಯ ವಿವಿಧ ಸಾಹಿತ್ಯ ಪ್ರಕಾರಗಳಿಗೆ ಅತ್ಯಮೋಘವಾಗಿರಾಗ ಹಾಗೂ ನೃತ್ಯ ಸಂಯೋಜನೆ ಮಾಡಿ ಹಿರಿಯ-ಕಿರಿಯ ವಿದ್ಯಾರ್ಥಿನಿಗಳಿಂದ ಇಂತಹ ಒಂದು ಮರೆಯಲಾಗದ ಕಾರ್ಯಕ್ರಮವನ್ನು ನೀಡಿದ್ದಕ್ಕಾಗಿ ‘ನೃತ್ಯನಿಕೇತನ’ ಕೊಡವೂರು ತಂಡದ ನಿರ್ದೇಶಕರು ಮತ್ತು ವಿದುಷಿಯರನ್ನು ಸಮಸ್ತ ದೆಹಲಿ ಕನ್ನಡಿಗರ ಪರವಾಗಿ ಅಭಿನಂದಿಸಿದರು. ಪ್ರಧಾನ ಕಾರ್ಯದರ್ಶಿ ಸಿ.ಎಂ. ನಾಗರಾಜ ಅವರು ವಂದನಾರ್ಪಣೆ ಸಲ್ಲಿಸಿದರು.

ನೃತ್ಯನಿಕೇತನ ಕೊಡವೂರು, ಸಂಸೆಯು ತನ್ನ 25ನೇ ಸಂಭ್ರಮಾಚರಣೆಯನ್ನು ‘ರಜತಪಥ’ ಎಂಬ ಹೆಸರಿನಡಿ ಆಚರಿಸಿದ್ದು, ಈ ಶುಭ ಸಂದರ್ಭದಲ್ಲಿ ಸಂಸ್ಥೆಯ ವಿದ್ಯರ್ಥಿಗಳಿಗೆ ರಂಗಭೂಮಿಯ ಪಾಠಗಳನ್ನು ಕಲಿಸುವ ಹಾಗೂ ನೃತ್ಯ ನಾಟಕವನ್ನು ಆಯೋಜಿಸುವ ನಿಟ್ಟಿನಲ್ಲಿ ಮಹಾನ್ ಕವಿ ರವೀಂದ್ರರ ‘ಚಿತ್ರಾ’ ನಾಟಕವನ್ನು ನೃತ್ಯ ಪ್ರಕಾರ ಹಾಗೂ ನಾಟ್ಯರೂಪಕವನ್ನು ಸಮಾನಗೊಳಿಸಿ ಪ್ರಯೋಗಿಸಿದೆ. ಇದು ದೆಹಲಿಯ ಎನ್.ಎಸ್.ಡಿ. ಪ್ರಸ್ತುತಗೊಳ್ಳಲಿದ್ದು, ಹೆಣ್ಣಿನ ಆಸ್ಮಿತತೆಯನ್ನು ಸಾರುವ ಈ ನೃತ್ಯ ನಾಟಕದಲ್ಲಿ ಸಂಸ್ಥೆಯ 18 ವಿದ್ಯಾರ್ಥಿನಿಯರು ಪಾಲ್ಗೊಳ್ಳುತ್ತಾರೆ. ಈ ಸಂದರ್ಭದಲ್ಲಿದೆಹಲಿ ಕರ್ನಾಟಕ ಸಂಘವು ಸಂಸ್ಥೆಯ ಕಾರ್ಯಕ್ರಮವೊಂದನ್ನು ಉತ್ತಮ ರೀತಿಯಲ್ಲಿ ಆಯೋಜಿಸಿದ್ದಕ್ಕಾಗಿ ನಿರ್ದೇಶಕರಾದ ವಿದ್ವಾನ್ ಸುಧೀರರಾವ್ ಕೊಡವೂರು ಸಂಘಕ್ಕೆ ಕೃತಜ್ಞತೆ ಸಲ್ಲಿಸಿದರು.


Spread the love

Exit mobile version