ದೇವರು ನಮ್ಮೊಳಗೆ ಇದ್ದಾನೆ: ಫಾದರ್ ಫ್ರಾನ್ಸಿಸ್ ಝೇವಿಯರ್ ಗೋಮ್ಸ್
ಸುರತ್ಕಲ್: ದೇವರು ನಮ್ಮೊಳಗಡೆ ಇದ್ದಾನೆ, ನಾನು ಯಾವ ಕೆಲಸವನ್ನೂ ಮಾಡಬಲ್ಲೆ ಎಂಬ ವಿಶ್ವಾಸ, ನಾನ್ಯಾವತ್ತೂ ಜಯಶೀಲ, ಈ ದಿನ ನನ್ನದು ಎಂಬ ಭಾರತದ ಶ್ರೇಷ್ಠ ವಿಜ್ಞಾನಿ ಅಬ್ದುಲ್ ಕಲಾಂನಂತೆ ಮಹಾತ್ವಾಕಾಂಕ್ಷೆಯಿಂದ ಬದುಕಿದರೆ ನಾವು ಜೀವನದಲ್ಲಿ ಗೆದ್ದೇಗೆಲ್ಲುತ್ತೇವೆ ಎಂದು ಮೂಲ್ಕಿ ಚರ್ಚ್ ನ ಧರ್ನಗುರುಗಳಾದ ಫಾದರ್ ಫ್ರಾನ್ಸಿಸ್ ಝೇವಿಯರ್ ಗೋಮ್ಸ್ ತಿಳಿಸಿದರು.
ಅವರು ಕ್ಯಾಥೊಲಿಕ್ ಸಭಾ ಮಂಗಳೂರು ವತಿಯಿಂದ ಕ್ಯಾಥೋಲಿಕ್ ಸಭಾ ಮಂಗಳೂರು ಪ್ರಾಂತ್ಯ ಸುರತ್ಕಲ್ನ ಸೆಕ್ರೆಡ್ ಹಾರ್ಟ್ ಚರ್ಚ್ ಸಭಾಂಗಣದಲ್ಲಿ ನಡೆದ ಸಾರ್ವಜನಿಕರಿಗೆ ಸರಕಾರಿ ಸಾಕರಿ ಹಾಗೂ ಸವಲತ್ತುಗಳ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿ ಮಾತಾಡುತ್ತಿದ್ದರು.
ವಿಧಾನ ಪರಿಷತ್ ಸದಸ್ಯ, ಮುಖ್ಯ ಸಚೇತಕರಾದ ಐವನ್ ಡಿಸೋಜಾ ಮಾತಾಡಿ, ನಾವು ಸಾಹಸದ ಕೆಲಸವನ್ನು ಮಾಡಬೇಕು. ಯಾಕೆಂದರೆ ಇಂದು ಸಾಧನೆ ಮಾಡಿದವರು ಮಾತ್ರ ಸಾಧಕರಾಗಿದ್ದಾರೆ ಪ್ರತಿಯೋರ್ವರೂ ಸುಖ ದುಖ ನೋವು ನಲಿವನ್ನು ಕಂಡಿದ್ದಾರೆ ಆದರೆ ಪರಿಶ್ರಮದಿಂದ ಯಶಸ್ಸು ಸಾಧಿಸಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ದ.ಕ ಇದರ ಅಧ್ಯಕ್ಷರಾದ ಜೀವನ್ ಸಲ್ಡಾನಾ ಹಾಗೂ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷರು ಹೆನ್ರಿ ಬ್ರಿಟ್ಟೋ ಅವರನ್ನು ಸನ್ಮಾನಿಸಲಾಯಿತು.
ಸುರತ್ಕಲ್ ವಾರಡೊ ಹಂತದಲ್ಲಿ ಯುವಕರಿಗೆ ಹಾಗೂ ಸಾರ್ವಜನಿಕರಿಗೆ ಸರಕಾರಿ ನೌಕರಿ ಹಾಗೂ ಸವಲತ್ತುಗಳ ಬಗ್ಗೆ ಮಾಹಿತಿ ನೀಡಲಾಯಿತು. 8,9,10, ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸದ ಆಯ್ಕೆಯ ತಿಳುವಳಿಕೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರತ್ಕಲ್ ವಾರಡೊ ವಿಗಾರ್ವಾರ್ ಇದರ ಫಾ.ಪಾವ್ಲ್ ಪಿಂಟೋ ವಹಿಸಿದ್ದರು. ಕ್ಯಾಥೊಲಿಕ್ ಸಭಾ ಸುರತ್ಕಲ್ ಆಧ್ಯಾತ್ಮಿಕ ನಿರ್ದೇಶಕರಾದ ಫಾ ಒಲ್ವಿನ್ ಡಿಕುನ್ನಾ ಕಾರ್ಯಕ್ರಮ ಉದ್ಘಾಟಿಸಿದರು.
ಮುಕ್ಕ ಚರ್ಚ್ ಧರ್ಮಗುರುಗಳಾದ ಫಾ. ನೋಬರ್ಟ್ ಲೊಬೋ ಹಾಗೂ ತೋಕೂರು ಚರ್ಚ್ ಧರ್ಮಗುರುಗಳಾದ ಫಾ. ಪೀಟರ್ ಫೆರ್ನಾಂಡಿಸ್ ಸಾಧಕರನ್ನು ಸನ್ಮಾನಿಸಿದರು.
ಕ್ಯಾಥೊಲಿಕ್ ಸಭಾ ಮಂಗಳೂರು ಪ್ರದೇಶ ಇದರ ಕೇಂದ್ರೀಯ ಅಧ್ಯಕ್ಷರಾದ ಅನಿಲ್ ಲೊಬೋ ಪೆರ್ಮಾಯಿ ಮುಖ್ಯ ಅತಿಥಿಗಳಾಗಿದ್ದರು. ಎ.ಜೆ. ಆಸ್ಪತ್ರೆ ಮಂಗಳೂರು ಫೊರೆನ್ಸಿಕ್ ವಿಭಾಗದ ಡಾ. ಪ್ರಕಾಶ್ ಮೊಂತೆರೊ, ಜಿಲ್ಲಾ ಕೈಗಾರಿಕ ಕೇಂದ್ರದ ಸಹ ನಿರ್ದೇಶಕರಾದ ವಿವೇಕಾನಂದ, ಶಿಕ್ಷಣ ತಜ್ಞ ಪ್ರೊ. ರೊನಾಲ್ಡ್ ಪಿಂಟೊ, ಓಎಂಪಿಎಲ್ ಸುರತ್ಕಲ್ ಇದರ ಎಚ್.ಆರ್.ರಾಜೇಶ್ ಡಿಕೋಸ್ತ, ಐಟಿಐ ಟ್ರೈನಿಂಗ್ ಆಫೀಸರ್ ಒಲ್ವಿನ್ ಡಿಕುನ್ಹಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಸಮಿತಿಯ ಅಧ್ಯಕ್ಷರಾದ ಜಿ.ಪಂ.ನ ಮಾಜಿ ಸದಸ್ಯ ರೊಲ್ಫಿ ಡಿಕೋಸ್ತ, ಕಾರ್ಯದರ್ಶಿ ಸವಿಯ ರೊಡ್ರಿಗಸ್ ಉಪಸ್ಥಿತರಿದ್ದರು.