Home Mangalorean News Kannada News ದೇವಸ್ಥಾನ, ಚರ್ಚ್, ಮಸೀದಿ ಏಕಕಾಲದಲ್ಲಿ ತೆರೆಯಲಿ – – ಮಾಜಿ ಶಾಸಕ ಜೆ.ಆರ್.ಲೋಬೊ

ದೇವಸ್ಥಾನ, ಚರ್ಚ್, ಮಸೀದಿ ಏಕಕಾಲದಲ್ಲಿ ತೆರೆಯಲಿ – – ಮಾಜಿ ಶಾಸಕ ಜೆ.ಆರ್.ಲೋಬೊ

Spread the love

ದೇವಸ್ಥಾನ, ಚರ್ಚ್, ಮಸೀದಿ ಏಕಕಾಲದಲ್ಲಿ ತೆರೆಯಲಿ – – ಮಾಜಿ ಶಾಸಕ ಜೆ.ಆರ್.ಲೋಬೊ

ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ಸರಕಾರ ದೇವಸ್ಥಾನ, ಚರ್ಚು, ಮಸೀದಿಗಳು ಏಕಕಾಲದಲ್ಲಿ ತೆರೆಯುವಂತೆ ಮಾಜಿ ಶಾಸಕ ಜೆ.ಆರ್.ಲೋಬೊ ಆಗ್ರಹಿಸಿದ್ದಾರೆ.

ಇತ್ತೀಚೆಗೆ ದಿನಪತ್ರಿಕೆಗಳಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯದ ಮುಜರಾಯಿ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಯವರು ರಾಜ್ಯದಲ್ಲಿ ಜೂನ್ 1 ರಿಂದ ಎಲ್ಲಾ ದೇವಸ್ಥಾನಗಳು ತೆರೆಯಲಿವೆ ಎಂದು ಹೇಳಿಕೆ ನೀಡಿರುತ್ತಾರೆ. ಅದೇ ಸಮಯದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ.ಯಡಿಯೂರಪ್ಪನವರು , ರಾಜ್ಯದಲ್ಲಿರುವ ಎಲ್ಲಾ ದೇವಸ್ಥಾನಗಳು, ಮಸೀದಿಗಳು ಹಾಗೂ ಚರ್ಚ್ಗಳನ್ನು ತೆರೆಯಲಿಕ್ಕೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿರುವುದಾಗಿ ಹೇಳಿಕೆಯನ್ನು ನೀಡಿರುವುದು ನನ್ನ ಗಮನಕ್ಕೆ ಬಂದಿರುತ್ತದೆ.

ನಾನು ಈ ಸಮಯದಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತೇನೆಂದರೆ , ರಾಜ್ಯದಲ್ಲಿರುವ ಎಲ್ಲಾ ದೇವಸ್ಥಾನಗಳು , ಮಸೀದಿಗಳು ಹಾಗೂ ಚರ್ಚ್ಗಳು ಒಂದೇ ಆಗಿರುತ್ತದೆ. ಇವತ್ತಿನ ಸಂದಿಗ್ದ ಪರಿಸ್ಥಿತಿಯಲ್ಲಿ ನಾವೆಲ್ಲಾ ದೇವರ ಮೊರೆ ಹೋಗಲೇಬೇಕು ,ಆದರೆ ಮುಜರಾಯಿ ಸಚಿವ ಶ್ರೀನಿವಾಸ್ ಪೂಜಾರಿಯವರ ಹೇಳಿಕೆ ಕೇವಲ ದೇವಸ್ಥಾನಗಳು ಸಮಾಜಿಕ ಅಂತರವನ್ನು ಕಾಪಾಡಿಕೊಂಡು, ಭಕ್ತರಿಗೆ ದೇವರ ದರ್ಶನ ಮಾಡಲು ಅವಕಾಶ ಕಲ್ಪಿಸಲಿದೆ ಎಂಬ ಹೇಳಿಕೆ ಸರಿಯಲ್ಲ. ದೇವಸ್ಥಾನಗಳೊಂದಿಗೆ ರಾಜ್ಯದಲ್ಲಿರುವ ಎಲ್ಲಾ ಮಸೀದಿಗಳು , ಚರ್ಚ್ಗಳು, ಬೌದ್ಧ ,ಜೈನ ಧರ್ಮದ ಮಂದಿರಗಳು ಏಕಕಾಲದಲ್ಲಿ ತೆರೆಯುವಂತೆ ರಾಜ್ಯದ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಲಿ.

ನಮ್ಮದು ಪ್ರಜಾಪ್ರಭುತ್ವ ದೇಶ ಎಲ್ಲರನ್ನೂ ಸಮಾನ ದೃಷ್ಠಿಯಿಂದ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಎಲ್ಲಾ ಧರ್ಮದವರ ಆಚಾರ , ವಿಚಾರಗಳು ಬೇರೆ ಬೇರೆ ಇರಬಹುದು. ಆದರೆ ಇಂದಿನ ಸಂಕಷ್ಟದ ಸಮಯದಲ್ಲಿ ನಾವಿರುವಾಗ , ಎಲ್ಲರ ಜವಾಬ್ದಾರಿಯನ್ನು ಅರಿತು , ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು , ಸ್ವಸ್ಥ ಸಮಾಜದ ನಿರ್ಮಾಣದ ಅರಿವಿನಿಂದ ಸರಕಾರವು ರಾಜ್ಯದ ಎಲ್ಲಾ ದೇವಸ್ಥಾನ ,ಮಸೀದಿ ಹಾಗೂ ಚಚ್ ್ಗಳನ್ನು ಏಕಕಾಲದಲ್ಲಿ ತೆರೆಂಯುವಂತೆ ಕ್ರಮ ಕೈಗೊಂಡು ಎಲ್ಲಾ ಭಕ್ತರಿಗೆ ಅವಕಾಶ ಮಾಡಿಕೊಡುವಂತೆ ಮಾಜಿ ಶಾಸಕ .ಜೆ.ಆರ್.ಲೋಬೊರವರು ಮುಖ್ಯಮಂತ್ರಿಯವರನ್ನು ಆಗ್ರಹಿಸಿದ್ದಾರೆ.


Spread the love

Exit mobile version