ದೇಶದಲ್ಲಿ ಕೊರೋನಾ ಜಿಹಾದ್ ನಡೆಸುವವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು – ಶೋಭಾ ಕರಂದ್ಲಾಜೆ
ಉಡುಪಿ: ರಾಜ್ಯದ ಕೆಲವು ಕಡೆಗಳಲ್ಲಿ ಕೊರೋನ ಪರೀಕ್ಷೆಗೆ ಸೂಚಿಸಿದರೆ ಕರೋನಾ ರೋಗಿ ವೈದ್ಯರನ್ನು ತಬ್ಬಿಕೊಳ್ಳುವ, ರೋಗ ಹಬ್ಬಿಸುವ ಬೆದರಿಕೆ ಹಾಕುತ್ತಿರುವುದು ಕಂಡರೆ ದೇಶದಲ್ಲಿ ಕೊರೋನಾ ಜಿಹಾದ್ ನಡೆಯುತ್ತಿರುವುದು ಸ್ಪಷ್ಟವಾಗುತ್ತಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ನಿಜಾಮುದ್ದೀನ್ ತಬ್ಲೀಗ್ ಸಭೆಯಲ್ಲಿ ಭಾಗವಹಿಸಿದ್ದವರು ದೇಶದಾದ್ಯಂತ ಕೊರೊನಾ ಹಬ್ಬಸುತ್ತಿದ್ದಾರೆ. ಈ ಸಭೆಯಲ್ಲಿ ಪಾಲ್ಗೊಂಡಿದ್ದ ಹಲವರು ನಾಪತ್ತೆಯಾಗಿದ್ದು ಇದೊಂದು ಜಿಹಾದಿ ಭಯೋತ್ಪಾದನೆಯ ಮುಂದುವರೆದ ಭಾಗವಾಗಿದ್ದು, ಪ್ರಸ್ತುತ ಆ ಸಭೆಯಲ್ಲಿ ಭಾಗವಹಿಸಿ ಕ್ವಾರಂಟೈನ್ ನಲ್ಲಿ ಇರುವ ಜಿಹಾದಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಇದಕ್ಕಾಗಿ ದೇಶದಲ್ಲಿ ಕಠಿಣವಾದ ಕಾನೂನು ದೇಶದಲ್ಲಿ ಜಾರಿಗೆ ಬರಬೇಕು ಎಂದರು.
ಸರ್ಕಾರದ ಕಾನೂನಿಗೆ ಒಂದು ಸಮುದಾಯ ಸಹಕಾರ ನೀಡುತ್ತಿಲ್ಲ ಎನ್ನುವುದು ಇತ್ತೀಚೆಗೆ ಆಶಾ ಕಾರ್ಯಕರ್ತೆಯ ಮೇಲೆ ನಡೆದ ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಕೊರೋನಾ ದೃಢಪಟ್ಟ ಸಿದ್ದೀಕ್ ಬಡವಾಣೆಯ ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಹಿಳೆ ಎಲ್ಲೆಲ್ಲಿ ಕೆಲಸ ಮಾಡುತ್ತಿದ್ದರು ಎಂದು ಮಾಹಿತಿ ಪಡೆಯಲು ತೆರಳಿದ್ದ ಆಶಾ ಕಾರ್ಯಕರ್ತೆಯವರ ಮೇಲೆ ಹಲ್ಲೆ ಮಾಡಲಾಗಿದೆ ಸರ್ಕಾರದ ಜತೆಗೆ ಒಂದು ಸಮುದಾಯ ಸಹಕಾರ ನೀಡುತ್ತಿಲ್ಲ ೆನ್ನುವುದು ಸಾಬೀತಾಗುತ್ತಿದೆ ಎಂದರು.
ಕೊರೊನಾ ವಿಚಾರದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ರಾಜಕೀಯ ಮಾಡುತ್ತಿದ್ದಾರೆ ಎಂಬ ಮಾಜಿ ಸಚಿವ ಖಾದರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಶೋಭ ಕೊರೋನಾ ವಿಚಾರದಲ್ಲಿ ನಾನು ರಾಜಕೀಯ ಮಾಡುತ್ತಿಲ್ಲ ಆದರೆ ತಬ್ಲೀಗ್ ಸಭೆಯಲ್ಲಿ ಭಾಗವಹಿಸಿ ಕೊರೊನಾ ಹಬ್ಬಿಸುವ ದುರ್ಬುದ್ಧಿ ಯನ್ನು ಜನತೆಯ ಮುಂದೆ ತೆರೆದಿಡುತ್ತಿದ್ದೇನೆ ಎಂದು ಅವರು ಹೇಳಿದರು.