ದೇಶದ್ರೋಹಿಗಳನ್ನು ಬಂಧಿಸಿ : ಎಬಿವಿಪಿ
ಮಂಗಳೂರು : ಬೆಂಗಳೂರಿನ ಯುನೈಟೆಡ್ ಥಿಯೋಲಾಜಿಕಲ್ ಕಾಲೇಜಿನಲ್ಲಿ ಕೇಳಿಬಂದಿರುವ ದೇಶದ್ರೋಹಿ ಘೋಷಣೆಗಳನ್ನು ಹಾಗೂ ವಿದ್ಯಾರ್ಥಿಗಳ ಮೇಲೆ ಪೋಲಿಸ್ ದೌರ್ಜನ್ಯವನ್ನು ಖಂಡಿಸಿ ಇಂದು ಮಂಗಳೂರಿನಲ್ಲಿ ಹೋರಾಟವನ್ನು ಹಮ್ಮಿ ಕೊಂಡಿದೆ. ನಗರದ ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಛೇರಿಯತನಕದ ರ್ಯಾಲಿಯಲ್ಲಿ ಸಹಸ್ರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ನವೀನ್, “ನಮ್ಮದೇ ರಾಜ್ಯದ ಹೃದಯ ಭಾಗದಲ್ಲಿ ದೇಶದ್ರೋಹಿಗಳು ದೇಶ್ದದ ವಿರುದ್ಧ ಘೋಷನೆ ಹಾಕಿದ್ದು ಕರ್ನಾಟಕದ ಜನತೆ ತಲೆ ತಗ್ಗಿಸುವಂತೆ ಮಾಡಿದೆ, ಇದನ್ನು ಘೋಷಿಸುವ ರೀತಿಯಲ್ಲಿ ರಾಜ್ಯಸರ್ಕಾರ ನಿಂತಿರುವುದು ನಾಚಿಕೆಗೇಡಿನ ಸಂಗತಿಯಾಗಿದ್ದು, ತಕ್ಷಣ ದೇಶದ್ರೋಹಿಗಳನ್ನು ಬಂಧಿಸಬೇಕು, ಇಲ್ಲದಿದ್ದಲ್ಲಿ ರಾಜ್ಯಸರ್ಕಾರದ ಪ್ರತಿನಿಧಿಗಳು ದೇಶ ಬಿಟ್ಟು ತೊಲಗಿ”, ಎಂದು ಎಚ್ಚರಿಸಲಾಯಿತು. ದೇಶದ ರಕ್ಷಣಾ ಹಿತದೃಷ್ಟಿಯಿಂದ ದೇಶಪ್ರೇಮಿ ವಿದ್ಯಾರ್ಥಿಗಳ ರ್ಯಾಲಿನಡೆಸುವ ಸಂದರ್ಭದಲ್ಲಿ ಏಕಾಏಕಿ ಲಾಠಿಪ್ರಹಾರ, ವಿದ್ಯಾರ್ಥಿನಿಯರನ್ನು ಎಳೆದಿರುವುದು ಮನಸೋ ಇಚ್ಛೆ ಥಳಿಸುವುದು ಹೇಯ ಕೃತ್ಯವಾಗಿದೆ. ಇದನ್ನು ಖಂಡಿಸುತ್ತಾ ಅಮ್ನೆಸ್ಟಿ ಇಂಟರ್‍ನ್ಯಾಷನಲ್ ಸಂಸ್ಥೆಯನ್ನು ನಿಶೇಧಿಸುವಂತೆ ಆಗ್ರಹಿಸಿದರು.
ಎಬಿವಿಪಿ ತಾಲೂಕು ಸಂಚಾಲಕ ಸುಧಿತ್ ಶೆಟ್ಟಿ ಮಾತನಾಡಿ ಕಾಶ್ಮೀರದಲ್ಲಿ ಹಿಂದೂ ಪಂಡಿತರ ನರಮೇಧ ನಡೆದಾಗ, ವಂಧಮಾದಲ್ಲಿ ಆರು ತಿಂಗಳ ಹಸುಳೆಯನ್ನು ಉಗ್ರರು ಗುಂಡಿಕ್ಕಿ ಕೊಂದಾಗ ಸೊಲ್ಲೆತ್ಕದ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಉಗ್ರ ಬುರ್ಹಾನ್ ವಾನಿಯನ್ನು ನಮ್ಮ ಸೇನೆ ಕೊಂದಾಗ ಮಾನವ ಹಕ್ಕುಗಳ ಬಗ್ಗೆ ಮಾತನಾಡುತ್ತದೆ. ಪಾಕಿಸ್ಥಾನ ಸೈನ್ಯ ಬಲೋಚಿಸ್ಥಾನ್ ಹಾಗೂ ಗಿಲ್ಗಿಟ್-ಬಾಲ್ಟಿಸ್ಥಾನ್ ಅಮಾಯಕ ಜನರ ಮೇಲೆ ದೌರ್ಜನ್ಯದ ಬಗ್ಗೆ ಮೊದಲು ಅಮ್ನೆಸ್ಟಿ ಇಂಟರ್ ನ್ಯಾಷನಲ್ ಮಾತನಾಡಲಿ. ಕಾಶ್ಮೀರದಲ್ಲಿ ಭೀಕರ ಪ್ರವಾಹ ಬಂದಾಗ ಕಾಶ್ಮೀರಿಗರನ್ನು ರಕ್ಷಿಸಿದ್ದು ಇದೇ ಭಾರತೀಯ ಸೇನೆ. ಇದೀಗ ಈ ದೇಶದ್ರೋಹಿಗಳಿಗೆ ಟೀಕಿಸಲು ಸಿಕ್ಕಿದ್ದು ಇದೇ ಭಾರತೀಯ ಸೇನೆ ಎಂದು ದೇಶ ದ್ರೋಹಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ವಿದ್ಯಾರ್ಥಿ ಮುಖಂಡರಾದ ಕೀರ್ತನ್ ಹಾಗೂ ಅಕ್ಷಯ್ ಮಾತನಾಡಿದರು. ಪ್ರತಿಭಟನಾ ತರುವಾಯ ಜಿಲ್ಲಾಧಿಕಾರಿಗಳೇ ಮನವಿ ಸ್ವೀಕರಿಸಬೇಕೆಂದು ವಿದ್ಯಾರ್ಥಿಗಳು ಪಟ್ಟು ಹಿಡಿದಾಗ ಕೊನೆಗೆ ಜಿಲ್ಲಾಧಿಕಾರಿ ಡಾ||ಜಗದೀಶ್ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.
ಪ್ರತಿಭಟನೆಯ ನೇತೃತ್ವವನ್ನು ವಿಭಾಗದ ಸಹ ಸಂಚಾಲಕ ಚೇತನ್ ಪಡೀಲ್, ತಾಲೂಕು ಸಹಸಂಚಾಲಕ ಜಯೇಶ್, ನಗರ ಕಾರ್ಯದರ್ಶಿ ಹಿತೇಶ್ ಹಾಗೂ ವಿದ್ಯಾರ್ಥಿ ಮುಖಂಡರಾದ ಮೋಹಿತ್, ಪ್ರೇಕ್ಷಾ, ಅಭಿಷೇಕ್, ಚೈತನ್ಯ, ಹರ್ಷಿತಾ, ವಿನಯ, ರಚನ್, ಪ್ರಜ್ವಲ್, ಋತ್ವಿಕ್, ಮನಿಷಾ, ಆಶಿಷ್, ಸಾಹಿಲ್, ನೀಮಾ, ಧನುಷ್, ಅನುಷ್ಕಾ ಕೊಟ್ಟಾರಿ, ಜೀವನ್, ಅವಿನಾಶ್, ಅನುಷಾ, ಶಿವರಾಜ್, ಅಕ್ಷಯ್ ಮುಂತಾದವರು ಉಪಸ್ಥಿತರಿದ್ದರು.