ದೇಶ ಆಳುವವರಿಗೆ ಸಮರ್ಥ ನಾಯಕತ್ವ ಗುಣ ಅಗತ್ಯ : ಅಣ್ಣಾಮಲೈ

Spread the love

ದೇಶ ಆಳುವವರಿಗೆ ಸಮರ್ಥ ನಾಯಕತ್ವ ಗುಣ ಅಗತ್ಯ : ಅಣ್ಣಾಮಲೈ

ಚಿಕ್ಕಮಗಳೂರು: ದೇಶವನ್ನು ಆಳುವವರಿಗೆ ಸಮರ್ಥ ನಾಯಕತ್ವದ ಗುಣವಿಲ್ಲದಿದ್ದರೆ ದೇಶ ಅಧಪತಃನವಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ. ಅಣ್ಣಾಮಲೈಯವರು ಹೇಳಿದರು.

ಅವರು ಇಂದು ಚೇತನಾ ಎಂಐಎಂಸ್ ಕಾಲೇಜಿನಲ್ಲಿ ನಡೆದ ದಾನ್ ಉತ್ಸವ್‍ನ ಅಂಗವಾಗಿ ಸ್ವಚ್ಚತಾ ಅಭಿಯಾನ ಮತ್ತು ಗಿಡ ನೆಡುವ ಕಾರ್ಯಕ್ರವನ್ನು ಉದ್ಘಾಟಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತ ಒಂದು ದೇಶ ಸಮರ್ಥ ನಾಯಕತ್ವದಿಂದ ಕುಂಠಿತವಾದರೆ ಅಧಃಪತನವಾಗುತ್ತದೆಯೋ ಅಂತೆಯೇ ನಾವುಗಳು ನಾಯಕತ್ವದ ಗುಣವಿಲ್ಲದಿದ್ದರೆ ನಮ್ಮ ಗುರಿ ಗೆಲುವನ್ನು ತಲುಪಲು ಸಾಧ್ಯವಿಲ್ಲ ಎಂದರು. ನಾವು ಪ್ರತಿಯೋಬ್ಬರು ನಾಯಕತ್ವದ ಗುಣವನ್ನು ಬೆಳೆಸಿಕೊಂಡು ಅನ್ಯಾಯದ ವಿರುದ್ದ ಧ್ವನಿ ಎತ್ತಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಬ್ರಿಕ್ಸ್ ಸಮ್ಮೇಳನದಲ್ಲಿ ಭಾರತ ಮತ್ತು ರಷ್ಯಾದ 39 ಸಾವಿರ ಕೋಟಿಯ ರಕ್ಷಣಾ ಒಪ್ಪಂದವನ್ನು ಕೇಂದ್ರವಾಗಿಟ್ಟುಕೊಂಡು ಒಬ್ಬ ದೇಶದ ನಾಯಕನು ತನ್ನ ತನ್ನ ವೈಯುಕ್ತಿಕ ವಿಚಾರಗಳನ್ನು ಬಿಟ್ಟು ದೇಶದವನ್ನು ಉನ್ನತ ಧೈಯದೊಡಿಗೆ ಕೊಂಡೊಯ್ಯಬೇಕೆಂದು ತಿಳಿಸಿದರು.

image001annamalai-chikmagaluru-swach-bharath-20161020 image002annamalai-chikmagaluru-swach-bharath-20161020 image003annamalai-chikmagaluru-swach-bharath-20161020 image004annamalai-chikmagaluru-swach-bharath-20161020 image005annamalai-chikmagaluru-swach-bharath-20161020 image006annamalai-chikmagaluru-swach-bharath-20161020 image007annamalai-chikmagaluru-swach-bharath-20161020 image008annamalai-chikmagaluru-swach-bharath-20161020 image009annamalai-chikmagaluru-swach-bharath-20161020 image010annamalai-chikmagaluru-swach-bharath-20161020 image011annamalai-chikmagaluru-swach-bharath-20161020 image012annamalai-chikmagaluru-swach-bharath-20161020 image013annamalai-chikmagaluru-swach-bharath-20161020 image014annamalai-chikmagaluru-swach-bharath-20161020 image015annamalai-chikmagaluru-swach-bharath-20161020 image016annamalai-chikmagaluru-swach-bharath-20161020

ದೇವರನ್ನು ನಾವು ನಮ್ಮಲಿಯೆ ಕಂಡುಕೊಳ್ಳಬೇಕು. ವ್ರತವನ್ನು ಮಾಡುವ ಮೂಲಕ ನಮ್ಮಲ್ಲಿರುವ ಕೆಟ್ಟ ಸಂಗತಿಗಳನ್ನು ಮರೆತು ಒಳ್ಳೆಯದರೆಡೆಗಡೆ ನಾವು ಸಾಗುತ್ತೇವೆ. ಮಾಲೆಯನ್ನು ಧರಿಸುವುದು ದೇವರಿದ್ದಾನೆ ಎಂಬ ಕಲ್ಪನೆಗೆ ಮಾತ್ರ ಒಳಗಾಗಿರಬಾರದು. ಇದರಲ್ಲಿ ನಾವು ನಮ್ಮನ್ನೆ ಬದಲಾಯಿಸಿಕೊಳ್ಳಲು ಒಂದು ಅವಕಾಶವಿರುತ್ತದೆ. ವ್ರತ, ನೇಮ ಬಂಧನವಾಗಿರದೆ ನಮ್ಮನ್ನು ಬದಲಾವಣೆಗೆ ಕೊಂಡೊಯ್ಯುವ ಸಾಧನವಾಗಿರುತ್ತದೆ ಎಂದು ಹೇಳಿದರು.

ನಾವುಗಳು ತಪ್ಪುಗಳನ್ನು ಕಂಡಾಗ ಹೆದರದೆ, ಅವುಗಳನ್ನು ಪ್ರಶ್ನಿಸಿದಾಗ ಮಾತ್ರ ಭ್ರಷ್ಟಾಚಾರವನ್ನು ತಡೆಯಲು ಸಾಧ್ಯ. ಪ್ರತಿಯೊಬ್ಬ ವ್ಯಕ್ತಿಯು ನಿಷ್ಠಾವಂತ ಧೈರ್ಯವಂತನಾಗಿದ್ದು ಆತ ಪ್ರತಿಯೊಂದನ್ನು ಪ್ರಶ್ನಿಸುತ್ತಾ ಹೋದರೆ ಉತ್ತರಗಳು ಸಿಗುತ್ತದೆ. ಅದಕ್ಕೆ ಮೊದಲು ನಮ್ಮನ್ನು ನಾವು ವಿಮರ್ಶಿಸಿಕೊಳ್ಳಬೇಕೆಂದು ಹೇಳಿದರು.

ಹಣವನ್ನು ಗಳಿಸುವುದು ಮಾತ್ರವೇ ಗೆಲುವಲ್ಲ. ಶಾರಿರಿಕವಾಗಿ, ಬೌದ್ಧಿಕವಾಗಿ ಮತ್ತು ಧಾರ್ಮಿಕವಾಗಿ ಸಬಲರಾಗಿದ್ದರೆ ಅದೇ ನಮ್ಮ ಗೆಲುವು. ಗೆಲುವನ್ನು ನಾವು ಹುಡುಕಿಕೊಂಡು ಹೋಗಬೇಕೆ ವಿನಹ ಗೆಲುವು ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ. ಯುವ ಪೀಳಿಗೆಯಿಂದಲೆ ದೇಶವನ್ನು ಮುನ್ನಡೆಸಿಕೊಂಡು ಹೋಗಲು ಸಾಧ್ಯ. ಇವರಿಗೆ ವಿದೇಶಗಳಲ್ಲಿರುವಂತೆ ತಾರ್ಕಿಕವಾದ ಮುಂದುವರೆದ ಶಿಕ್ಷಣ ನೀಡಬೇಕು. ದೇಶ ನಿನಗೇನು ಕೊಟ್ಟಿದೆ ಎನ್ನುವುದಕ್ಕಿಂತ ನೀನು ದೇಶ ನಿನಗೇನು ಕೊಟ್ಟಿದೆ ಎಂಬುದು ಮುಖ್ಯ. ಒಬ್ಬ ಯಶಸ್ವಿ ವ್ಯಕ್ತಿ ತಮ್ಮ ಬುದ್ದಿವಂತಿಕೆಯಿಂದ ಮಾತ್ರವೆ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು. ವಿದ್ಯಾರ್ಥಿಗಳು ತಮ್ಮ ಕಣ್ಣೆದುರಿಗೆ ನಡೆಯುವ ತಪ್ಪುಗಳನ್ನು ಖಂಡಿಸಿ ದೇಶಕ್ಕೆ ಉತ್ತಮ ಪ್ರಜೆಗಳಾಗಿ ಎಂದು ಕಿವಿ ಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ  ಕಾಲೇಜಿನ ಪ್ರಾಂಶುಪಾಲರಾದ ಚೇತನ್ ಕುಮಾರ್ ಕೆ.ಟಿ ಮಾತನಾಡುತ್ತ ಪ್ರತಿಯೊಬ್ಬ ವ್ಯಕ್ತಿಯು ಧನಾತ್ಮಕವಾಗಿ ಚಿಂತನೆ ಮಾಡಬೇಕು. ಸಂಸ್ಥೆಯು ಇಂದು ಇಷ್ಟು ಬೆಳೆದು ನಿಂತಿದೆ ಎಂದರೆ ಧನಾತ್ಮಕ ಚಿಂತನೆ ಕಾರಣ. ಒಬ್ಬ ಯಶಸ್ವ ವ್ಯಕ್ತಿಯ ಮುಂದೆ ಗೆಲುವು ಇರುತ್ತದೆ ಎಂದು ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ. ಅಣ್ಣಾಮಲೈಯವರು ನಮ್ಮ ಯುವಕರಿಗೆ ಆದರ್ಶ ವ್ಯಕ್ತಿಯಾಗಿದ್ದು ಇವರಲ್ಲಿರುವ ಗುಣಗಳನ್ನು ನಮ್ಮಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗೋಣ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ತೊಗರಿ ಹಂಕಲ್ ವೃತ್ತದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ. ಅಣ್ಣಾಮಲೈ, ಪ್ರಾಂಶುಪಾಲರು, ವಿದ್ಯಾರ್ಥಿಗಳು, ಬೋಧಕರು ಹಾಗೂ ಬೋಧಕೇತರ ಸಿಬ್ಬಂಧಿಗಳು ಗಿಡವನ್ನು ನೆಟ್ಟರಲ್ಲದೆ, ಹಳೆಯ ಜಿಲ್ಲಾ ಕಾರಗೃಹ ಆವರಣ ಮತ್ತು ಬೋಳ ರಾಮೇಶ್ವರ ದೇವಾಲಯದ ಆವರಣದಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ನೆರವೆರಿದರು.

ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಆಂಡ್ ಗೈಡ್ಸ್‍ನ ಜಿಲ್ಲಾ ಮುಖ್ಯ ಆಯುಕ್ತರಾದ ಷಡಾಕ್ಷರಿ, ಕಾಲೇಜಿನ ಆಡಾಳಿತಾಧಿಕಾರಿಗಳಾದ ಸೀಮಾ ಅಹ್ಮದ್‍ರವರು ಉಪಸ್ಥಿತರಿದ್ದರು.


Spread the love