ದೊಡ್ಡ ಕರುಳಿನ ಉದರದರ್ಶಕ (ಲ್ಯಾಪ್‍ರೋಸ್ಕೋಪಿಕಿ) ಶಸ್ತ್ರಚಿಕಿತ್ಸೆಯ ಕಾರ್ಯಾಗಾರ

Spread the love

ದೊಡ್ಡ ಕರುಳಿನ ಉದರದರ್ಶಕ (ಲ್ಯಾಪ್‍ರೋಸ್ಕೋಪಿಕಿ) ಶಸ್ತ್ರಚಿಕಿತ್ಸೆಯ ಕಾರ್ಯಾಗಾರ

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಆಸ್ಪತ್ರೆಯ ಜನರಲ್ ಸರ್ಜರಿ ವಿಭಾಗವು, ಜೆಮ್ (ಉಇಒ) ಆಸ್ಪತ್ರೆ, ಕೊಂಯಬುತ್ತೂರು ಇವರ ಸಹಯೋಗದೊಂದಿಗೆ ಶಸ್ತ್ರಚಿಕಿತ್ಸೆಯ ನೇರ ಪ್ರಸಾರವನ್ನು ಡಿ.ಎಮ್.ಹಾಲ್, ನೋಲೇಜ್ ಸೆಂಟರ್‍ನಲ್ಲಿ ನೆರವೇರಿಸಿದರು. ಡಾ| ಸಿ. ಪಲನಿವೇಲು ಸುಪ್ರಸಿದ್ಧ ಸರ್ಜಿಕಲ್ ಗ್ಯಾಸ್ಟ್ರೋ ಎಂಟ್ರೋರೋಲೊಜಿಸ್ಟ್ (ಉಚಿsಣಡಿoeಟಿಣeಡಿoಟogisಣ) ಹಾಗೂ ವಿಶ್ವವಿಖ್ಯಾತಿ ಪಡೆದ ಲ್ಯಾಪೋರೋಸ್ಕೋಪಿಕ್ ಸರ್ಜನ್ ಅವರು ಶಸ್ತ್ರಚಿಕಿತ್ಸೆಯ ಮುಖ್ಯಸ್ಥಿಕೆಯನ್ನು ವಹಿಸಿದ್ದರು.

ಆಸುಪಾಸಿನ ಹಿರಿಯ ಶಸ್ತ್ರಚಿಕಿತ್ಸಾ ತಜ್ಞರು ಕಾರ್ಯಾಗಾರವನ್ನು ಮೊಡರೇಟ್ ಮಾಡಿದರು. ಡಾ| ಸಿ. ಪಲನಿವೇಲುರವರು ದೊಡ್ಡ ಕರುಳಿನ ವಿವಿಧ ಕಾಯಿಲೆಯ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಿ, ವಿವರಣೆ ನೀಡಿದರು. ಭಾಗಿಯಾದ ವೈದ್ಯರು ಅವರೊಂದಿಗೆ ನೇರವಾಗಿ ವಿಚಾರ ವಿನಿಮಯ ಮಾಡಿಕೊಂಡರು ಡಾ| ಗಣೇಶ್ ಎಮ್.ಕೆ. ಮತ್ತು ಡಾ| ನಾಗಾರ್ಜುನ್ ರಾವ್ ಎಚ್.ಟಿ. ಫಾದರ್ ಮುಲ್ಲರ್ ಆಸ್ಪತ್ರೆಯ ಸರ್ಜಿಕಲ್ ಗ್ಯಾಸ್ಟ್ರೋ ಎಂಟಿರೋಲೊಜಿಸ್ಟ್ ಅವರು ಕಾರ್ಯಾಗಾರವನ್ನು ಕೋವೊರ್ಡಿನೇಟ್ ಮಾಡಿದರು.

ಡಾ| ಲಿಯೋ ಫ್ರಾನ್ಸಿಸ್ ತಾವ್ರೋ, ಪ್ರೊಫೆಸರ್ ಹಾಗೂ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರು, ಕಾರ್ಯಾಗಾರದ ಕಾರ್ಯೋನ್ಮುಖ ಅಧ್ಯಕ್ಷರು ಹಾಗೂ ಡಾ| ರಾಕೇಶ್ ರೈ (ಔಡಿgಚಿಟಿisiಟಿg ಅhಚಿiಡಿmಚಿಟಿ), ಪ್ರೊಫೆಸರ್ ಅವರು ಕಾರ್ಯೋನ್ಮುಖ ಕಾರ್ಯದರ್ಶಿಯಾಗಿದ್ದರು. ಸಮಾರು 120 ಶಸ್ತ್ರ ಚಿಕಿತ್ಸಾ ತಜ್ಞ ವೈದ್ಯರು ಕಾರ್ಯಗಾರದಲ್ಲಿ ಭಾಗವಹಿಸಿದ್ದರು. ಡಾ| ಮೊನಾಲಿಸಾ ಡಿ’ಸೋಜ ಹಾಗೂ ಡಾ| ಸುಪ್ರಿಯಾ ಪಿಂಟೊ, ಸ್ನಾತಕೋತ್ತರ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಿರೂಪಿಸಿದರು.


Spread the love