ದೊಡ್ಡ ಕರುಳಿನ ಉದರದರ್ಶಕ (ಲ್ಯಾಪ್‍ರೋಸ್ಕೋಪಿಕಿ) ಶಸ್ತ್ರಚಿಕಿತ್ಸೆಯ ಕಾರ್ಯಾಗಾರ
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಆಸ್ಪತ್ರೆಯ ಜನರಲ್ ಸರ್ಜರಿ ವಿಭಾಗವು, ಜೆಮ್ (ಉಇಒ) ಆಸ್ಪತ್ರೆ, ಕೊಂಯಬುತ್ತೂರು ಇವರ ಸಹಯೋಗದೊಂದಿಗೆ ಶಸ್ತ್ರಚಿಕಿತ್ಸೆಯ ನೇರ ಪ್ರಸಾರವನ್ನು ಡಿ.ಎಮ್.ಹಾಲ್, ನೋಲೇಜ್ ಸೆಂಟರ್‍ನಲ್ಲಿ ನೆರವೇರಿಸಿದರು. ಡಾ| ಸಿ. ಪಲನಿವೇಲು ಸುಪ್ರಸಿದ್ಧ ಸರ್ಜಿಕಲ್ ಗ್ಯಾಸ್ಟ್ರೋ ಎಂಟ್ರೋರೋಲೊಜಿಸ್ಟ್ (ಉಚಿsಣಡಿoeಟಿಣeಡಿoಟogisಣ) ಹಾಗೂ ವಿಶ್ವವಿಖ್ಯಾತಿ ಪಡೆದ ಲ್ಯಾಪೋರೋಸ್ಕೋಪಿಕ್ ಸರ್ಜನ್ ಅವರು ಶಸ್ತ್ರಚಿಕಿತ್ಸೆಯ ಮುಖ್ಯಸ್ಥಿಕೆಯನ್ನು ವಹಿಸಿದ್ದರು.
ಆಸುಪಾಸಿನ ಹಿರಿಯ ಶಸ್ತ್ರಚಿಕಿತ್ಸಾ ತಜ್ಞರು ಕಾರ್ಯಾಗಾರವನ್ನು ಮೊಡರೇಟ್ ಮಾಡಿದರು. ಡಾ| ಸಿ. ಪಲನಿವೇಲುರವರು ದೊಡ್ಡ ಕರುಳಿನ ವಿವಿಧ ಕಾಯಿಲೆಯ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಿ, ವಿವರಣೆ ನೀಡಿದರು. ಭಾಗಿಯಾದ ವೈದ್ಯರು ಅವರೊಂದಿಗೆ ನೇರವಾಗಿ ವಿಚಾರ ವಿನಿಮಯ ಮಾಡಿಕೊಂಡರು ಡಾ| ಗಣೇಶ್ ಎಮ್.ಕೆ. ಮತ್ತು ಡಾ| ನಾಗಾರ್ಜುನ್ ರಾವ್ ಎಚ್.ಟಿ. ಫಾದರ್ ಮುಲ್ಲರ್ ಆಸ್ಪತ್ರೆಯ ಸರ್ಜಿಕಲ್ ಗ್ಯಾಸ್ಟ್ರೋ ಎಂಟಿರೋಲೊಜಿಸ್ಟ್ ಅವರು ಕಾರ್ಯಾಗಾರವನ್ನು ಕೋವೊರ್ಡಿನೇಟ್ ಮಾಡಿದರು.
ಡಾ| ಲಿಯೋ ಫ್ರಾನ್ಸಿಸ್ ತಾವ್ರೋ, ಪ್ರೊಫೆಸರ್ ಹಾಗೂ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರು, ಕಾರ್ಯಾಗಾರದ ಕಾರ್ಯೋನ್ಮುಖ ಅಧ್ಯಕ್ಷರು ಹಾಗೂ ಡಾ| ರಾಕೇಶ್ ರೈ (ಔಡಿgಚಿಟಿisiಟಿg ಅhಚಿiಡಿmಚಿಟಿ), ಪ್ರೊಫೆಸರ್ ಅವರು ಕಾರ್ಯೋನ್ಮುಖ ಕಾರ್ಯದರ್ಶಿಯಾಗಿದ್ದರು. ಸಮಾರು 120 ಶಸ್ತ್ರ ಚಿಕಿತ್ಸಾ ತಜ್ಞ ವೈದ್ಯರು ಕಾರ್ಯಗಾರದಲ್ಲಿ ಭಾಗವಹಿಸಿದ್ದರು. ಡಾ| ಮೊನಾಲಿಸಾ ಡಿ’ಸೋಜ ಹಾಗೂ ಡಾ| ಸುಪ್ರಿಯಾ ಪಿಂಟೊ, ಸ್ನಾತಕೋತ್ತರ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಿರೂಪಿಸಿದರು.