
Spread the love
ದೋಣಿಯಲ್ಲಿ ಅಕ್ರಮವಾಗಿ ಕೇರಳದಿಂದ ಮಂಗಳೂರು ಪ್ರವೇಶಿಸಿದ 7 ಜನರ ಮೇಲೆ ಪ್ರಕರಣ
ಮಂಗಳೂರು: ದೋಣಿಯ ಮೂಲಕ ಅಕ್ರಮವಾಗಿ ಕೇರಳದಿಂದ ಮಂಗಳೂರಿಗೆ ಆಗಮಿಸಿದ 7 ಜನರ ತಂಡವನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಮಂಗಳೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇವರನ್ನು ವಶಕ್ಕೆ ಪಡೆದಿದ್ದು, ಅಕ್ರಮವಾಗಿ ಮಂಗಳೂರು ಪ್ರವೇಶಿಸಿದವರನ್ನು ಸೇರಿಸಲಾಗಿದೆ.
ಎಲ್ಲರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗಿದ್ದು ಜಿಲ್ಲಾಸ್ಪತ್ರೆ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಾಕ್ ಡೌನ್ ಸಂಬಂಧ ಕರ್ನಾಟಕ- ಕೇರಳ ಗಡಿ ಬಂದ್ ಆಗಿದ್ದು ಈ ಕಾರಣದಿಂದ, ಈ ಜನರು ದೋಣಿ ಮೂಲಕ ಅಕ್ರಮವಾಗಿ ಕೇರಳದಿಂದ ಮಂಗಳೂರಿನ ಅಡ್ಡೂರಿಗೆ ಬಂದಿತ್ತು.
Spread the love