ದ್ವಂದ್ವ ನೀತಿಯ ಬಿಜೆಪಿಗೆ ದ್ರಷ್ಟಿ ದೋಷವಿದೆಯೇ? – ಸುಶೀಲ್ ನೊರೊನ್ಹ
ರಾಜ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಸಮಿಶ್ರ ಸರಕಾರ ಆಡಳಿತ ನಡೆಸಲು ಮುಂದಾಗಿದನ್ನು ಅಪವಿತ್ರ ಮೈತ್ರಿ ಹಾಗೂ ಕರಾಳ ದಿನವಾಗಿ ಆಚರಿಸಿದ ಬಿಜೆಪಿಗೆ ಯಾವ ನೈತಿಕತೆವಿದೆ ಎಂಬುದು ಸ್ಪಷ್ಟ ಪಡಿಸ ಬೇಕಾಗಿದೆ.ಕೇಂದ್ರದಲ್ಲಿ ಆಗಿನ ಪ್ರದಾನಿ ಅಟಲ್ ಬಿಹಾರಿ ವಾಜಪಾಯಿರವರು ಎನ್.ಡಿ.ಎ ಸರಕಾರದಲ್ಲಿ ಸಮಿಶ್ರ ಸರಕಾರ ನಡೆಸಿಲ್ಲವೇ.
ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿರವರು 2014ರಲ್ಲಿ 29 ಪಕ್ಷಗಳೊಡನೆ ಮೈತ್ರಿ ಮಾಡಿ ಆಗ 11 ಪಕ್ಶಗಳ ಜನಪ್ರತಿನಿಧಿಗಳು ಲೋಕಸಭೆಗೆ ಆರಿಸಿ ಬಂದಾಗ ಆ ಪಕ್ಷದೊಡನೆ ಮೈತ್ರಿ ಮಾಡಿ ಸರಕಾರ ನಡೆಸುದಿಲ್ಲವೇ. ರಾಷ್ಟ್ರದಲ್ಲಿ ಮೇಘಾಲಯ, ನಾಗಲ್ಯಾಂಡ್, ತ್ರಿಪುರ, ಜಮ್ಮು ಕಾಶ್ಮೀರ, ಗೋವ ಮತ್ತು ಬಿಹಾರ ರಾಜ್ಯಗಳಲ್ಲಿ ಸಮಿಶ್ರ ಸರಕಾರ ನಡೆಸುವ ನೀವು ಏನು ಹೇಳಲು ಬಯಸುತ್ತೀರಿ.
ನಾವು ಬಹಳ ದೊಡ್ಡ ತಪ್ಪನ್ನು ಮಾಡಿದೇವೆ ನಾವು ನೀರಿನಲ್ಲಿ ಮುಳುಗಿದ್ದೇವೆ ಎಂದು ಹೇಳಲು ಬಯಸುತ್ತೀರ ? ಅಥವ ಈ ದ್ವಂದ್ವ ನೀತಿಯಲ್ಲಿ ತಮ್ಮ ದ್ರಷ್ಟಿ ದೋಷವಿದ್ದು ನಿಮ್ಮ ಕಣ್ಣಿನಲ್ಲಿ ತೊಲೆವಿರುವಾಗ ಬೇರೆಯವರ ಕಣ್ಣಿನಲ್ಲಿ ರವೆ ತೆಗೆಯಲು ನಿಮಗೆ ಹೇಳಲು ಯಾವ ನೈತಿಕತೆ ಇದೆ ಎಂದು ಸ್ಪಷ್ಟ ಪಡಿಸಿ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ ಪ್ರಶ್ನಿಸಿದ್ದಾರೆ