ದ್ವಿಚಕ್ರ ವಾಹನದಲ್ಲಿ ಗಾಂಜಾ ಮಾರಾಟ ಯತ್ನ – ಒರ್ವನ ಬಂಧನ
ಮಂಗಳೂರು: ದ್ವಿಚಕ್ರ ವಾಹನದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ನರಿಮೊಗರು ಗ್ರಾಮದ ಸಾಝಿಲ್ ಅಹಮ್ಮದ್ ಪ್ರಾಯ(24) ಎಂದು ಗುರುತಿಸಲಾಗಿದೆ.
ಸೆಪ್ಟೆಂಬರ್ 22 ರಂದು 5:30 ಗಂಟೆಗೆ ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ನೈತಾಡಿ -ಬೆದ್ರಾಳ ಭಗತ್ ಸಿಂಗ್ ಸಾರ್ವಜನಿಕ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳು ಕಪ್ಪು ಬಣ್ಣದ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕರು ಠಾಣಾ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದು, ಈ ವೇಳೆ ಒರ್ವ ವ್ಯಕ್ತಿ ಪರಾರಿಯಾಗಿರುತ್ತಾನೆ.
ಇನ್ನೋರ್ವ ಆರೋಪಿ ನರಿಮೊಗರು ಗ್ರಾಮದ ಸಾಝಿಲ್ ಅಹಮ್ಮದ್ ಬಂಧಿಸಿದ್ದು, , ಪರಾರಿಯಾದ ವ್ಯಕ್ತಿ ಪುತ್ತೂರು ಕೆಮ್ಮಿಂಜೆ ಗ್ರಾಮದ ಮಹಮ್ಮದ್ ಅಶ್ರಫ್ ಎಂದು ತಿಳಿದುಬಂದಿರುತ್ತದೆ.
ಬಂಧಿತ ಆರೋಪಿಯನ್ನು ಮತ್ತು ಆತನ ಬಳಿಯಿದ್ದ ದ್ವಿಚಕ್ರ ವಾಹನನ್ನು ತಪಾಸಣೆ ನಡೆಸಲಾಗಿ ಆತನಿಂದ ಅಂದಾಜು ಸುಮಾರು ರೂ 3000 ಮೌಲ್ಯದ 166 ಗ್ರಾಂ ಗಾಂಜಾ, ಸುಮಾರು ರೂ 40,000 ಮೌಲ್ಯದ ದ್ವಿಚಕ್ರ ವಾಹನ ಮತ್ತು ಸುಮಾರು ರೂ 12,000 ಮೌಲ್ಯದ ಮೊಬೈಲ್ ಪೋನ್ ನ್ನು ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.