Spread the love
ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.
ಪರೀಕ್ಷೆಗೆ ಹಾಜರಾದ 3,09,535 ಬಾಲಕಿಯರ ಪೈಕಿ 2,00,529 (ಶೇಕಡ 64.78) ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ತೆಗೆದುಕೊಂಡ 3,26,833 ಬಾಲಕರ ಪೈಕಿ 1,63,484 (ಶೇಕಡ 50.02) ಬಾಲಕರು ಉತ್ತೀರ್ಣರಾಗಿದ್ದಾರೆ.
ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಪ್ರಥಮ (ಶೇಕಡ 90.48), ಉಡುಪಿ ದ್ವಿತೀಯ (ಶೇಕಡ 90.35), ಕೊಡಗು ಜಿಲ್ಲೆ ತೃತೀಯ (ಶೇಕಡ 79.35) ಸ್ಥಾನದಲ್ಲಿದ್ದರೆ ಯಾದಗಿರಿ ಜಿಲ್ಲೆ ಕೊನೆಯ (ಶೇಕಡ 44.16) ಸ್ಥಾನದಲ್ಲಿದೆ.
ಈ ಬಾರಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗಿಂತ ನಗರ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಒಟ್ಟು 91 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ. 88 ಅನುದಾನ ರಹಿತ, 1 ಅನುದಾನಿತ, 1 ಸರ್ಕಾರಿ ಮತ್ತು 1 ವಿಭಜಿತ ಪಿಯು ಕಾಲೇಜಿನಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ.
Spread the love