Spread the love
ದ್ವಿತೀಯ ಪಿಯುಸಿ: ಸಂಸ್ಕೃತದಲ್ಲಿ 96ಅಂಕ ಪಡೆದ ಆಶಿಫಾ
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬರು ಸಂಸ್ಕೃತದಲ್ಲಿ 100 ಕ್ಕೆ 96 ಅಂಕಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾಳೆ.
ಬೆಂಗಳೂರಿನ ನಾರಾಯಣ ಟೆಕ್ನೋ ಸ್ಕೂಲ್‌ನಲ್ಲಿ ಪಿಯುಸಿ ವಿಜ್ಞಾನ ಪಿಸಿಎಂಬಿ ವಿಭಾಗದಲ್ಲಿ ಅಧ್ಯಯನ ಮಾಡಿದ ಆಶಿಫಾ ಹುಸೈನ್ ಅವರು ಸಂಸ್ಕೃತವನ್ನು ದ್ವಿತೀಯ ಭಾಷೆಯಾಗಿ ಆಯ್ಕೆ ಮಾಡಿಕೊಂಡಿದ್ದಳು. ದ್ವಿತೀಯ ಪಿಯುಸಿಯಲ್ಲಿ ಒಟ್ಟು 563 ಅಂಕ ಗಳಿಸಿದ್ದಾಳೆ.
ಮೂಲತ: ಪುತ್ತೂರು ತಾಲೂಕಿನ ಕಾವು ಅಮ್ಚಿನಡ್ಕ ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿ ಕೇಂದ್ರ ಸಂಪರ್ಕ ಇಲಾಖೆಯಲ್ಲಿ ಅಧಿಕಾರಿಯಾಗಿರುವ ಖೈರುನ್ನೀಸಾ ಮತ್ತು ಜಾಕಿರ್ ದಂಪತಿಯ ಮಗಳು.
Spread the love