ದ.ಕ ಜಿಲ್ಲಾ ಆಯುಷ್ ಇಲಾಖೆಯ ವತಿಯಿಂದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಮ0ಗಳೂರು:

Spread the love

ದ.ಕ ಜಿಲ್ಲಾ ಆಯುಷ್ ಇಲಾಖೆಯ ವತಿಯಿಂದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ

ಮ0ಗಳೂರು: ದ.ಕ ಜಿಲ್ಲಾ ಆಯುಷ್ ಇಲಾಖೆಯ ವತಿಯಿಂದ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಆರ್‍ಎಪಿಸಿಸಿ ಸಭಾಂಗಣದಲ್ಲಿ ಇಂದು ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಕವಿತಾ ಸನೀಲ್ ನೆರವೇರಿಸಿ ಮಾತನಾಡಿದ ಅವರು, ಆಯುರ್ವೇದ ಭಾರತೀಯ ಚಿಕಿತ್ಸಾ ವಿಧಾನವಾಗಿದೆ.ಆದರೆ ಇಂದು ಅನೇಕರು ಇಂಗ್ಲೀಷ್ ಔಷದಗಳನ್ನು ಹೆಚ್ಚಾಗಿ ಬಳಸುವುದರಿಂದ ಇದರ ಪ್ರಾಮುಖ್ಯತೆ ಕಡಿಮೆಯಾಗುತ್ತಿದ್ದು ಇದರ ಕುರಿತು ಅರಿವನ್ನು ಮೂಡಿಸಬೇಕು ಎಂದರು ಅಲ್ಲದೇ ಮುಂದಿನ ದಿನಗಳಲ್ಲಿ ಪಾಲಿಕೆಯ 60 ವಾರ್ಡ್‍ಗಳಲ್ಲಿಯೂ ಕೂಡ ಆಯುರ್ವೇದದ ಕುರಿತು ಜಾಗ್ರತಿಯನ್ನು ಮೂಡಿಸಲು ಶ್ರಮಿಸುವುದಾಗಿ ಅವರು ತಿಳಿಸಿದರು.

ದ,ಕ.ಜಿಲ್ಲಾ ಪಂಚಾಯತ್‍ನ ಮುಖ್ಯಕಾರ್ಯನಿರ್ವಾಹಕಾಧಿಕಾರಿಯಾದ ಡಾ. ಎಮ್ ಆರ್ ರವಿಯವರು ಮಾತನಾಡಿ, ಆಯುರ್ವೇದಕ್ಕೆ ನೋವು ನಿರ್ವಹಣೆ ಮಾಡುವ ಶಕ್ತಿ ಇದ್ದು ಜೀವನಕ್ಕೆ ಶಿಸ್ತನ್ನು ಕಲಿಸಿಕೊಡುವುದರ ಜೊತೆಗೆ ಉತ್ತಮ ಜೀವನಶೈಲಿಯನ್ನು ರೂಪಿಸಲು ಸಹಕಾರಿಯಾಗಿದೆ ಎಂದರು. ಅದರ ಜೊತೆಗೆ ಆಯುರ್ವೇದವನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಬೋಧಕರು ಆಯುರ್ವೇದದ ಕುರಿತು ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ಕರೆಕೊಟ್ಟರು. ಗುಜರಾತ್ ಆಯುರ್ವೇದ ವಿಶ್ವ ವಿದ್ಯಾನಿಲಯದ ಪ್ರೊಪೆಸರ್ ಡಾ.ಶ್ರೀನಿವಾಸ ಆಚಾರ್ಯ ಹೆಜಮಾಡಿ ಇವರು ವರ್ತಮಾನದ ಆರೋಗ್ಯ ಸಮಸ್ಯೆಗಳು ಮತ್ತು ಆಯುರ್ವೇದ ಚಿಕಿತ್ಸೆಯ ಯಶಸ್ಸು ಎಂಬ ವಿಷಯದ ಕುರಿತು ಉಪನ್ಯಾಸವನ್ನು ನೀಡಿದರು.

ಸಮಾರಂಭದಲ್ಲಿ ಅರ್ಹ ಫಲಾನುಭವಿಗಳಿಗೆ ಆಯುಷ್ ಔಷಧ ಕಿಟ್ ನ್ನು ವಿತರಿಸಲಾಯಿತು. ಹಾಗೂ ಆಯುರ್ವೇದಲ್ಲಿ ಅತೀ ಹೆಚ್ಚು ಅಂಕ ಪಡೆದ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳನ್ನು ಹಿಮಾಲಯ ಆಯುರ್ವೇದದ ವತಿಯಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ.ಲಿಫಾನ್‍ರೊಷನಾ (ಜೀವಕ ಆವಾರ್ಡ್,) ಡಾ . ಭವ್ಯ (ಆಯುಷ್ ವಿಶಾರದ ಆವಾರ್ಡ). ಈ ಪ್ರಶಸಿಯು ಕ್ರಮವಾಗಿ 15,000/- ಮತ್ತು 10,000/- ನಗದನ್ನು ಹೊಂದಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕಜಿಲ್ಲಾ ಪಂಚಾಯತ್‍ನ ಉಪಾಧ್ಯಕ್ಷರಾಧ ಕಸ್ತೂರಿ ಪಂಜ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾದ ಡಾ.ಎಂ.ರಾಮಕೃಷ್ಣ ರಾವ್, ಜಿಲ್ಲಾ ಆಯುಷ್ ಅಧಿಕಾರಿಯಾಧ ಡಾ.ಮಹಮ್ಮದ್ ಇಕ್ಬಾಲ್ ಕೆ, ಮತ್ತು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಶಸ್ರ್ತ ಚಿಕಿತ್ಸಕರು, ಅಧೀಕ್ಚಕರಾದ ಡಾ.ರಾಜೇಶ್ವರಿ ದೇವಿ ಮತ್ತಿತರರು ಉಪಸ್ಥಿತರಿದ್ದರು.


Spread the love