Home Mangalorean News Kannada News ದ.ಕ ಜಿಲ್ಲಾ ಎಸ್ಪಿಯಾಗಿ ನೇಮಕ ಕುರಿತ ವಿಚಾರ ಕೇವಲ ಗಾಳಿ ಸುದ್ದಿ ; ಅಣ್ಣಾಮಲೈ ಸ್ಪಷ್ಷನೆ

ದ.ಕ ಜಿಲ್ಲಾ ಎಸ್ಪಿಯಾಗಿ ನೇಮಕ ಕುರಿತ ವಿಚಾರ ಕೇವಲ ಗಾಳಿ ಸುದ್ದಿ ; ಅಣ್ಣಾಮಲೈ ಸ್ಪಷ್ಷನೆ

Spread the love

ದ.ಕ ಜಿಲ್ಲಾ ಎಸ್ಪಿಯಾಗಿ ನೇಮಕ ಕುರಿತ ವಿಚಾರ ಕೇವಲ ಗಾಳಿ ಸುದ್ದಿ ; ಅಣ್ಣಾಮಲೈ ಸ್ಪಷ್ಷನೆ

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ ಪೋಲಿಸ್ ವರಿಷ್ಠಾಧಿಕಾರಿಯಾಗುವಂತೆ ನನಗೆ ಇದುವರೆಗೆ ಯಾರಿಂದಿಲೂ ಕೂಡ ಸೂಚನೆ ಬಂದಿಲ್ಲ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿರುವ ವಿಷಯ ಕೇವಲ ಗಾಳಿ ಸುದ್ದಿಯಾಗಿದೆ ಎಂದು ಖಡಕ್ ಐಪಿಎಸ್ ಅಧಿಕಾರಿ ಪ್ರಸ್ತುತ ಚಿಕ್ಕಮಗಳೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಅವರು ಸ್ಪಷ್ಟಪಡಿಸಿದ್ದಾರೆ.

ಕಲ್ಲಡ್ಕದ ಘಟನೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯ ಸರಕಾರವು ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಅವರನ್ನು ಶೀಘ್ರದಲ್ಲೇ ದಕ ಜಿಲ್ಲೆಗೆ ವರ್ಗಾಯಿಸುತ್ತಾರೆ ಎನ್ನುವುದಾಗಿ ಮತ್ತು ಅವರನ್ನು ಎಸ್ಪಿಯಾಗಿ ನೇಮಕಗೊಳಿಸುವುದಕ್ಕೆ ಭಾರೀ ಬೆಂಬಲ ವ್ಯಕ್ತಪಡಿಸಿ ಸಾಕಷ್ಟು ಸಂದೇಶ ಬರಹಗಳು ಹರಿದಾಡುತ್ತಿವೆ.

ಈ ನಡುವೆ ದಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಭೂಷಣ್ ಜಿ ಬೊರಸೆ ಅವರೊಂದಿಗೆ ನಡೆಸಿದ ವಿವಾದಾತ್ಮಕ ಮಾತುಕತೆ ವೀಡಿಯೋ ಬಹಿರಂಗಗೊಂಡ ಬಳಿಕ ಅಣ್ಣಾಮಲೈ ಅವರು ಜಿಲ್ಲೆಗೆ ಆಗಮಿಸಲಿದ್ದಾರೆ ಎಂಬ ಗಾಳಿ ಸುದ್ದಿಗೆ ಇನ್ನಷ್ಟು ರೆಕ್ಕೆ ಪುಕ್ಕ ಬಂದಿದ್ದು, ಜಿಲ್ಲೆಯಲ್ಲಿನ ಸಮಸ್ಯೆಗಳನ್ನು ಹತೋಟಿಗೆ ತರಲು ಅಣ್ಣಾಮಲೈ ಅವರೇ ಸೂಕ್ತ ವ್ಯಕ್ತಿ ಎಂಬ ಅಭಿಪ್ರಾಯಗಳು ಕೂಡ ಜಿಲ್ಲೆಯಲ್ಲಿ ವ್ಯಕ್ತವಾಗಿವೆ.

ಈ ಕುರಿತಾಗಿ ಅಣ್ಣಾಮಲೈ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದಾಗ ಇದು ಕೇವಲ ಗಾಳಿ ಸುದ್ದಿಯಾಗಿದ್ದು, ನನಗೆ ಆ ರೀತಿಯ ಯಾವುದೇ ಆದೇಶ ಇದುವರೆಗೆ ಬಂದಿಲ್ಲ ಸರಕಾರವೂ ಕೂಡ ಕುರಿತು ನನ್ನಲ್ಲಿ ಮಾತುಕತೆ ನಡೆಸಿಲ್ಲ ಅಥವಾ ಸೂಚನೆಯನ್ನೂ ಸಹ ಕೊಟ್ಟಿಲ್ಲ.  ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದ್ದು ಇದಕ್ಕೆ ಮಹತ್ವ ನೀಡಬೇಕಾಗಿಲ್ಲ. ಸರಕಾರದಿಂದ ಆದೇಶ ಬರುವ ವರೆಗೆ ಈ ಕುರಿತು ನಾನು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ಜನರು ಗಾಳಿ ಸುದ್ದಿಗೆ ಕಿವಿಗೊಡುವುದು ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.

ಉಡುಪಿಯ ಜಿಲ್ಲಾ ಎಸ್ಪಿಯಾಗಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ್ದ ಅಣ್ಣಾಮಲೈ ಅವರು ಡ್ರಗ್ಸ್ ಮಾಫಿಯಾದ ಮೇಲೆ ಕಡಿವಾಣ, ಹೆಲ್ಮೇಟ್ ಕಡ್ಡಾಯ, ಅಪರಾಧಗಳ ಸಂಖ್ಯೆ ಇಳಿಯುವಲ್ಲಿ ಸಾಕಷ್ಟು ಶ್ರಮಿಸಿ ಹೆಸರುವಾಸಿಯಾಗಿದ್ದರು. ಬಳಿಕ ಸ್ವತಃ ಗೃಹ ಸಚಿವ ಜಿ ಪರಮೇಶ್ವರ್ ಅವರು ಅಪೇಕ್ಷೆಪಟ್ಟು ಮುಖ್ಯಮಂತ್ರಿಗಳ ಮನವೊಲಿಸಿ ಅವರನ್ನು ಚಿಕ್ಕಮಗಳೂರಿಗೆ ಎಸ್ಪಿಯಾಗಿ ಹಾಕಿಸಿಕೊಂಡಿದ್ದರು. ಚಿಕ್ಕಮಗಳೂರಿನಲ್ಲಿ ಎಸ್ಪಿಯಾಗಿ ಅಧಿಕಾರ ವಹಿಸಿದ ಕೆಲವೇ ತಿಂಗಳುಗಳಲ್ಲಿ ಇಲಾಖೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡುವಲ್ಲಿ ಅಣ್ಣಾಮಲೈ ಯಶಸ್ವಿಯಾಗಿದ್ದರು.  ಮತ್ತೆ ಪುನಃ ದಕ ಜಿಲ್ಲೆಯ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡರೆ ಜಿಲ್ಲೆಯಲ್ಲಿನ ಪ್ರಮುಖ ಸಮಸ್ಯೆಯಾದ ಕೋಮು ಹಿಂಸಾಚಾರಕ್ಕೆ ಬ್ರೇಕ್ ಬೀಳುವುದಂತು ಖಂಡಿತ.


Spread the love
1 Comment
Inline Feedbacks
View all comments
Mohammed Ali Jawhar
7 years ago

Haudu …!
Annamalai awaru DK he barbeku…!

wpDiscuz
Exit mobile version