ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮಿಥುನ್ ರೈ ಆಯ್ಕೆ
ಮಂಗಳೂರು: ತ್ರೀವ್ರ ಕುತೂಹಲ ಕೆರಳಿಸಿದ್ದ ದಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಮಿಥುನ್ ರೈ 650 ಮತಗಳ ಅಂತರದಲ್ಲಿ ಜಯಗಳಿಸುವುದರೊಂದಿಗೆ ಪುನರಾಯ್ಕೆಗೊಂಡಿದ್ದಾರೆ.
ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಿಥುನ್ ರೈ ಮತ್ತು ಲುಕ್ಮಾನ್ ನಡುವೆ ತೀವ್ರ ಬಿರುಸಿನ ಸ್ಪರ್ಧೆ ಏರ್ಪಟ್ಟಿತ್ತು.
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಮಿಥುನ್ ರೈ ಅವರ ಬೆಂಬಲಿತ ಪ್ರಶಾಂತ್ ಕುಮಾರ್ ಜಯಗಳಿಸಿದ್ದರೆ, ಮಂಗಳೂರು ಉತ್ತರದಲ್ಲಿ ಗಿರೀಶ್ ಆಳ್ವಾ, ಬೆಳ್ತಂಗಡಿಯಲ್ಲಿ ಅಭಿನಂದನ್, ಪುತ್ತೂರಿನಲ್ಲಿ ತೌಸಿಫ್, ಸುಳ್ಯದಲ್ಲಿ ಸಿದ್ಧೀಕ್, ಮಂಗಳೂರು ದಕ್ಷಿಣದಲ್ಲಿ ಮೆರಿಲ್ ರೆಗೊ, ಮೂಡಬಿದ್ರಿಯಲ್ಲಿ ಚಂದ್ರಹಾಸ ಸನೀಲ್ ಗೆದ್ದಿದ್ದಾರೆ. ಈ ನಡುವೆ ಉಳ್ಳಾಲ ಕ್ಷೇತ್ರದಲ್ಲಿ ಮಿಥುನ್ ರೈ ಅವರ ಬೆಂಬಲಿತ ಅಭ್ಯರ್ಥಿ ಸೋಲನ್ನು ಅನುಭವಿಸಿದ್ದಾರೆ.
ಪ್ರಧಾನ ಕಾರ್ಯದರ್ಶಿ ಹುದ್ದೆಗೆ 15 ಮಂದಿ ಸ್ಪರ್ಧಿಸಿದ್ದು, 7 ಮಂದಿ ಆಯ್ಕೆಯಾಗಿದ್ದಾರೆ. ಆಯ್ಕೆಯಾದವರು ಕಿರಣ್ ರಾಜ್ ಗುಡಲ್ ಗುತ್ತು, ಪ್ರಸಾದ್ ಮಲ್ಲಿ ಮೂಡುಶೆಡ್ಡೆ, ಸುಹೇಬ್ ಸುರತ್ಕಲ್, ನವೀದ್ ಅಬ್ದುಲ್ ಸಮದ್, ಶಫೀಲ್ ರಾಜ್ ಮತ್ತು ವರುಣ್ ರಾಜ್ ಅಂಬಟ್.
ಚುನಾವಣೆಯ ನಡೆಯುವ ಕೆಲವು ದಿನಗಳ ಮುಂಚೆ ನಡೆದ ಘಟನೆಗಳನ್ನು ಗಮನದಲ್ಲಿರಿಸಿಕೊಂಡು ಪೋಲಿಸರು ಸೂಕ್ತ ಬಂದೋಬಸ್ತು ವ್ಯವಸ್ಥೆಯನ್ನು ಕೈಗೊಂಡಿದ್ದರು.