Spread the love
ದ.ಕ. ಜಿಲ್ಲೆಯಲ್ಲಿ 11 ಮಂದಿಗೆ ಕೊರೋನ ಪಾಸಿಟಿವ್
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಬುಧವಾರ ಮೂರು ವರ್ಷದ ಮಗು ಸೇರಿದಂತೆ ಒಟ್ಟು 11 ಮಂದಿಗೆ ಕೊರೋನ ಸೋಂಕು ತಗುಲಿರುವುದು ದೃಢಪಟ್ಟಿದೆ.
ಏಳು ಮಹಿಳೆಯರು, ನಾಲ್ವರು ಪುರುಷರಿಗೆ ಸೋಂಕು ತಗಲಿದ್ದು, ಇವರೆಲ್ಲರೂ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಸೋಂಕಿತರಲ್ಲಿ 3 ವರ್ಷ, 11 ಹಾಗೂ 17 ವರ್ಷದ ಬಾಲಕಿ, 59, 45, 37 ಹಾಗೂ 36 ವರ್ಷದ ಮಹಿಳೆ ಮತ್ತು 46, 39, 35 ಮತ್ತು 22 ವರ್ಷದ ಪುರುಷರು ಸೇರಿದ್ದಾರೆ.
ಜಿಲ್ಲೆಯ ವಿವಿಧೆಡೆ ಕ್ವಾರೆಂಟೈನ್ನಲ್ಲಿದ್ದ ಇವರನ್ನು ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿಯ ಪ್ರಕಟನೆ ತಿಳಿಸಿದೆ.
Spread the love