Home Mangalorean News Kannada News ದ.ಕ  ಜಿಲ್ಲೆಯಾದ್ಯಂತ ಜ್ವರ ಚಿಕಿತ್ಸಾಲಯ ಆರಂಭ

ದ.ಕ  ಜಿಲ್ಲೆಯಾದ್ಯಂತ ಜ್ವರ ಚಿಕಿತ್ಸಾಲಯ ಆರಂಭ

Spread the love

ದ.ಕ  ಜಿಲ್ಲೆಯಾದ್ಯಂತ ಜ್ವರ ಚಿಕಿತ್ಸಾಲಯ ಆರಂಭ

ಮಂಗಳೂರು: ಜ್ಷರ, ಕೆಮ್ಮು, ಗಂಟಲು ಕೆರೆತ ಅಥವಾ ಉಸಿರಾಟದ ತೊಂದರೆಯಂತಹಾ ಕೊರೋನಾ ವೈರಸ್‍ ರೋಗ ಲಕ್ಷಣಗಳನ್ನು ಹೊಂದಿರುವ ಯಾವುದೇ ಶಂಕಿತ ವ್ಯಕ್ತಿ ಮೊದಲು ತಪಾಸನೆಗಾಗಿ ದ.ಕ ಜಿಲ್ಲೆಯಾದ್ಯಂತ ಜ್ವರ ಚಿಕಿತ್ಸಾಲಯಗಳನ್ನು ಆರಂಭಿಸಲಾಗಿದೆ. ಸಾರ್ವಜನಿಕರು ಈ ಕೇಂದ್ರಗಳಿಗೆ ಭೇಟಿ ನೀಡಿ, ತಮ್ಮ ವೈದ್ಯಕೀಯತಪಾಸಣೆ ನಡೆಸಬಹುದಾಗಿದೆ.

ದ.ಕ ಜಿಲ್ಲೆಯಲ್ಲಿರುವ ಜ್ವರ ಕ್ಲಿನಿಕ್‍ಗಳ ವಿವರ ಇಂತಿವೆ: ಎ.ಜೆ ಮೆಡಿಕಲ್‍ಕಾಲೇಜು, ಕುಂಟಿಕಾನ, ಫಾದರ್ ಮುಲ್ಲರ್‍ ಆಸ್ಪತ್ರೆ, ಕಂಕನಾಡಿ, ಕೆ.ಎಂ.ಸಿ. ಆಸ್ಪತ್ರೆಅತ್ತಾವರ, ಮಂಗಳೂರು, ಯೆನೆಪೊಂiÀiಆಸ್ಪತ್ರೆ, ದೇರಳಕಟ್ಟೆ,  ಶ್ರೀನಿವಾಸ್ ಮೆಡಿಕಲ್‍ಕಾಲೇಜು, ಮುಕ್ಕ ಸುರತ್ಕಲ್, ಕೆ.ಎಸ್. ಹೆಗ್ಡೆ ಆಸ್ಪತ್ರೆ, ದೇರಳಕಟ್ಟೆ,  ಕೆ.ವಿ.ಜಿಆಸ್ಪತ್ರೆ, ಸುಳ್ಯ, ಕಣಚೂರುಆಸ್ಪತ್ರೆ, ಮುಖ್ಯರಸ್ತೆ, ಮುಡಿಪು ವೆನ್ಲಾಕ್‍ಆಸ್ಪತ್ರೆ, ಹಂಪನಕಟ್ಟೆ ಮಂಗಳೂರು,ತಾಲೂಕು ಸರ್ಕಾರಿಆಸ್ಪತ್ರೆ, ಬೆಳ್ತಂಗಡಿ, ಸರ್ಕಾರಿಆಸ್ಪತ್ರೆ, ಪುತ್ತೂರು, ತಾಲೂಕುಆಸ್ಪತ್ರೆ ಬಂಟ್ವಾಳ, ಸಮುದಾಯಆಸ್ಪತ್ರೆ, ಸುಳ್ಯ.

ಕ್ವಾರೇಂಟೈನ್ ಮೇಲ್ವಿಚಾರಣೆ ಕೇಂದ್ರಗಳ ವಿವರ ಇಂತಿವೆ: ಯಾವುದೇರೋಗ ಲಕ್ಷಣಇಲ್ಲದಿದ್ದರೂ, ಕೋವಿಡ್ 19 ಸಂಪರ್ಕ ಸಾಧ್ಯತೆಇರುವವರನ್ನು ನಿಗಾವಣೆಯಲ್ಲಿಡಲುಕ್ವಾರೆಂಟೈನ್ ಮೇಲ್ವಿಚಾರಣಾ ಕೇಂದ್ರಗಳನ್ನು ತೆರೆಯಲಾಗಿದೆ.ಇ.ಎಸ್.ಐಆಸ್ಪತ್ರೆ, ಮಂಗಳೂರು, ಇಂಡಿಯಾನಆಸ್ಪತ್ರೆ, ಪಂಪುವೆಲ್, ಎನ್.ಐ.ಟಿ.ಕೆ ಹಾಸ್ಟೆಲ್ ಸುರತ್ಕಲ್, ಯೆನೆಪೊಯ ಹಾಸ್ಟೆಲ್ ದೇರಳಕಟ್ಟೆ

ಪ್ರತ್ಯೇಕ ಮೇಲ್ವಿಚಾರಣೆ ಕೇಂದ್ರಗಳು : ಶಂಕಿತಕರೋನಾ ರೋಗಿಗಳನ್ನು ಪ್ರತ್ಯೇಕವಾಗಿಡಲುಜಿಲ್ಲೆಯ 13 ಆಸ್ಪತ್ರೆಗಳಲ್ಲಿ ಪ್ರತ್ಯೇಕ ನಿಗಾವಣೆ ಕೇಂದ್ರಗಳನ್ನುತೆರೆಯಲಾಗಿದೆ. ಎ.ಜೆ ಮೆಡಿಕಲ್‍ಕಾಲೇಜು, ಆಸ್ಪತ್ರೆ, ಮಂಗಳೂರು, ಫಾದರ್ ಮುಲ್ಲರ್‍ಆಸ್ಪತ್ರೆ, ಕಂಕನಾಡಿ, ಕೆ.ಎಂ.ಸಿ. ಆಸ್ಪತ್ರೆಅತ್ತಾವರ, ಯೆನೆಪೋಯಆಸ್ಪತ್ರೆ, ದೇರಳಕಟ್ಟೆ, ಶ್ರೀನಿವಾಸ್ ಮೆಡಿಕಲ್‍ಕಾಲೇಜುಆಸ್ಪತ್ರೆ, ಮುಕ್ಕ, ಸುರತ್ಕಲ್, ಕೆ.ಎಸ್. ಹೆಗ್ಡೆ ಆಸ್ಪತ್ರೆ, ದೇರಳಕಟ್ಟೆ, ಕೆ.ವಿ.ಜಿಆಸ್ಪತ್ರೆ, ಸುಳ್ಯ, ಕಣಚೂರುಆಸ್ಪತ್ರೆ, ವೆನ್ಲಾಕ್‍ಆಸ್ಪತ್ರೆ, ,ತಾಲೂಕುಸರ್ಕಾರಿಆಸ್ಪತ್ರೆ, ಬೆಳ್ತಂಗಡಿ, ಸರ್ಕಾರಿಆಸ್ಪತ್ರೆ, ಪುತ್ತೂರು, ತಾಲೂಕುಆಸ್ಪತ್ರೆ ಬಂಟ್ವಾಳ, ಸಮುದಾಯಆಸ್ಪತ್ರೆ, ಆಸ್ಪತ್ರೆ ಸುಳ್ಯ.

ಜಿಲ್ಲಾ ವೆನ್ಲಾಕ್‍ ಆಸ್ಪತ್ರೆಯು ಕೋವಿಢ್‍ ದೃಢಪಟ್ಟು, ತುರ್ತುಚಿಕಿತ್ಸೆ ಹಾಗೂ ಗಂಭೀರಾವಸ್ಥೆಯಲ್ಲಿರುವ ರೋಗಿಗಳಿಗೆ ಚಿಕಿತ್ಸೆ ನೀಡಲಿದೆ.

ರಾಜ್ಯಕೋವಿಡ್ 19 ತುರ್ತು ಕ್ರಿಯಾ ಯೋಜನೆಯಂತೆ ಈ ಎಲ್ಲಾ ಸೌಲಭ್ಯಗಳ ಬಗ್ಗೆ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‍ ಅಧಿಸೂಚನೆ ಹೊರಡಿಸಿದ್ದಾರೆ.


Spread the love

Exit mobile version