ಧರ್ಮಗಳ ನಡುವಿನ ಸೌಹಾರ್ದತೆಗೆ ಸ್ನೇಹಕೂಟ ಆಯೋಜನೆ ಮಾಡುವುದು ನಿಶ್ಚಿತ; ಪೇಜಾವರ ಸ್ವಾಮೀಜಿ

Spread the love

ಧರ್ಮಗಳ ನಡುವಿನ ಸೌಹಾರ್ದತೆಗೆ ಸ್ನೇಹಕೂಟ ಆಯೋಜನೆ ಮಾಡುವುದು ನಿಶ್ಚಿತ; ಪೇಜಾವರ ಸ್ವಾಮೀಜಿ

ಉಡುಪಿ: ಪೂರ್ವ ನಿಗದಿತ ಕಾರ್ಯಕ್ರಮಗಳು ಇದ್ದ ಕಾರಣ ಈ ಬಾರಿ ಇಫ್ತಾರ್ ಕೂಟವನ್ನು ಆಯೋಜಿಸಿಲು ಸಾಧ್ಯವಾಗಲಿಲ್ಲ. ಪರಸ್ಪರ ಧರ್ಮಗಳಲ್ಲಿ ಸೌಹಾರ್ದತೆಯನ್ನು ಇಫ್ತಾರ್ ಕೂಟವೇ ಮಾಡಬೇಕು ಎಂದಿಲ್ಲ ಅದರ ಬದಲಾಗಿ ಸ್ನೇಹ ಕೂಟವನ್ನು ಆಯೋಜಿಸಲಾಗುವುದು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಅವರು ಶುಕ್ರವಾರ ಈದ್-ಉಲ್-ಫಿತ್ರ್ ಹಬ್ಬದ ಪ್ರಯುಕ್ತ ತಮ್ಮನ್ನು ಭೇಟಿಯಾದ ಮುಸ್ಲಿಂ ಭಾಂಧವರೊಂದಿಗೆ ಶುಭಾಶಯವ ವಿನಿಮಯ ಮಾಡಿಕೊಂಡು ಮಾಧ್ಯಮಗಳೊಂದಿಗೆ ಮಾತನಾಡಿದರು.

ಈ ಬಾರಿಯ ರಮ್ಜಾನ್ ಸಮಯದಲ್ಲಿ ಹೆಚ್ಚಿನ ದಿನ ನಾನು ಉತ್ತರ ಭಾರತದಲ್ಲಿದ್ದು ಇಫ್ತಾರ್ ಕೂಟ ಆಯೋಜನೆ ಸಾಧ್ಯವಾಗಿಲ್ಲಿಲ್ಲ. ಮುಂದಿನ ದಿನಗಳಲ್ಲಿ ಒಂದು ಯೋಗ್ಯ ಸಂದರ್ಭವನ್ನು ನೋಡಿ ಸ್ನೇಹ ಕೂಟವನ್ನು ಪೇಜಾವರ ಮಠದ ವತಿಯಿಂದಲೇ ಆಯೋಜಿಸಲಾಗುವುದು. ಇದಕ್ಕೆ ಕೇವಲ ಮುಸಲ್ಮಾನ್ ಬಂಧುಗಳನ್ನು ಮಾತ್ರವಲ್ಲದೆ ಕ್ರೈಸ್ತ ಸಮುದಾಯದವರನ್ನು ಕೂಡ ಆಹ್ವಾನಿಸಲಾಗುವುದು.

ಈ ಬಾರಿ ಇಫ್ತಾರ್ ಸ್ನೇಹ ಕೂಟ ಆಯೋಜಿಸಲು ಯಾರೂ ಕೂಡ ವಿರೋಧ ಮಾಡಿಲ್ಲ. ಸಂಘದ ಪ್ರಮುಖರೆ ನಮ್ಮ ವಿರೋಧವಿಲ್ಲ ಎಂಬುದಾಗಿ ಹೇಳಿದ್ದರು. ಆದರೆ ಹಿಂದೂಗಳಲ್ಲೇ ಕೆಲವರು ನೀವು ಮಾಡಿದ್ದು ತಪ್ಪು ಎಂದು ಹೇಳಿದ್ದರು. ಆದರೆ ನಾನು ನನ್ನ ನೀರ್ಧಾರಲ್ಲಿ ಯಾವುದೇ ರೀತಿಯಲ್ಲಿ ಬದಲಾವಣೆ ಮಾಡಲ್ಲ. ಇತರ ಧರ್ಮದವರನ್ನು ಕರೆದು ಊಟವನ್ನು ಬಡಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂಬುದು ನನ್ನ ವಾದವಾಗಿದೆ. ನಮ್ಮ ಪರಮ ಗುರುಗಳು ಕೂಡ ಪರ್ಯಾಯ ಪೂರ್ವದಲ್ಲಿ ಹಾಜಿ ಅಬ್ದುಲ್ಲಾ ಅವರಿಂದ ಪಾದಪೂಜೆಯನ್ನು ಸ್ವೀಕಾರ ಮಾಡಿದ್ದಾರೆ. ಎಲ್ಲಾ ಸಮಾಜದ ಜೊತೆ ಸ್ನೇಹ ಭಾಂಧವ್ಯ ಬೆಳೆಯಬೇಕು ಎಂಬುದು ನನ್ನ ವಾದವಾಗಿದೆ. ದೇಶದಲ್ಲಿ ಪರಸ್ಪರ ಶಾಂತಿ, ಪ್ರೀತಿ, ಸಹಕಾರ, ಸಾಮರಸ್ಯ ನಿರ್ಮಾಣವಾಗಬೇಕು. ದೇಶದಲ್ಲಿ ಹಿಂದೂ, ಕ್ರೈಸ್ತರು ಮತ್ತು ಮುಸ್ಲಿಂರು ಎಲ್ಲರೂ ಕೂಡ ಶಾಂತಿ ಸೌಹಾರ್ದವನ್ನು ಬೆಳೆಸಲ ಸಹಕಾರ ನೀಡಬೇಕು ಎಂದರು.

ಸ್ನೇಹ ಕೂಟ ಆಯೋಜಿಸುವ ದಿನಾಂಕ ಇನ್ನೂ ನಿಗದಿಯಾಗಿಲ್ಲ ಒಂದು ಒಳ್ಳೆಯ ಸಂದರ್ಭವನ್ನು ನೋಡಿ ಸ್ನೇಹಕೂಟವನ್ನು ಆಯೋಜಿಸಲಾಗುವುದು. ಹಿಂದೂಗಳು ಮತ್ತು ಮುಸ್ಲಿಂರು ಪರಸ್ಪರ ಸೌರ್ದತೆಯನ್ನು ಕಾಪಾಡುವತ್ತ ಪ್ರಯತ್ನ ನಡೆಸಬಬೇಕು. ಸ್ನೇಹಕೂಟಗಳಿಂದ ಹೆಚ್ಚು ಸಮನ್ವಯತೆ ಸಾಧಿಸಲು ಸಹಕಾರಿಯಾಗುತ್ತದೆ. ನಮ್ಮ ಸ್ನೇಹ ಕೂಟದಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ. ರಾಜಕಾರಣಿಗಳು ಮಾಡಿದರೆ ಅದು ಕೇವಲ ಮಸ್ಲಿಂರ ಮತಗಳ ತುಷ್ಟಿಕರಣಕ್ಕಾಗಿ ಆಗಿರುತ್ತದೆ. ನಮ್ಮ ಉದ್ದೇಶ ದೇಶದಲ್ಲಿ ಸೌಹಾರ್ದತೆ ನೆಲೆಸಬೇಕು ಎಂದರು.


Spread the love