ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ

Spread the love

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ

ಉಜಿರೆ: ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಅಂಗವಾಗಿ ಭಾನುವಾರ ರತ್ನಗಿರಿಯಲ್ಲಿ ವಾಸ್ತುಪೂಜಾ ವಿಧಾನ, ನವಗ್ರಹ ಮಹಾಶಾಂತಿ, ದಿಕ್ಪಾಲಕ ಬಲಿ, ಯಜ್ಞ ಶಾಲೆಯಲ್ಲಿ ಯಕ್ಷಾರಾಧನೆ ಪೂರ್ವಕ ಯಕ್ಷ ಪ್ರತಿಷ್ಠೆ, ಅಭಿಜಿನ್ ಮುಹೂರ್ತದಲ್ಲಿ ಗಂಟೆ 12.35ಕ್ಕೆ ಧ್ವಜಾರೋಹಣ ನಡೆಯಿತು.

ಬಳಿಕ ಜಲ, ಹಾಲು, ಗಂಧ, ಚಂದನ, ಅರಿಶಿನ ಮೊದಲಾದ ಮಂಗಲದ್ರವ್ಯಗಳಿಂದ ಬಾಹುಬಲಿ ಸ್ವಾಮಿಗೆ ಐವತ್ತ ನಾಲ್ಕು ಕಲಶಗಳಿಂದ ಪಾದಾಭಿಷೇಕ ನಡೆಯಿತು.

ಸಂಜೆ ಗಂಟೆ ಮೂರರಿಂದ ಶ್ರೀ ಪೀಠ ಯಂತ್ರಾರಾಧನೆ, ಧ್ವಜಪೂಜೆ, ಶ್ರೀ ಬಲಿ ವಿಧಾನ ಮತ್ತು ಮಹಾ ಮಂಗಳಾರತಿ ನಡೆಯಿತು.

ಇಂದಿನ ಕಾರ್ಯಕ್ರಮ: ಇಂದು ಸೋಮವಾರ 108 ಕಲಶಗಳಿಂದ ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ ನಡೆಯುತ್ತದೆ.

ಬಾಹುಬಲಿ ಪಂಚಮಹಾವೈಭವ: ಅಮೃತವರ್ಷಿಣಿ ಸಭಾ ಭವನದ ಪಕ್ಕದಲ್ಲಿರುವ ಪಂಚಮಹಾವೈಭವ ಮಂಟಪದಲ್ಲಿ ಸೋಮವಾರ ಬೆಳಿಗ್ಗೆ ಗಂಟೆ 9.30 ರಿಂದ ಆದಿನಾಥ ಮಹಾರಾಜರ ಆಡಳಿತದಲ್ಲಿ ನವಯುಗ ಆರಂಭ, ಪ್ರಜೆಗಳಿಗೆ ಅಸಿ.ಮಸಿ, ಕೃಷಿ ಬಗ್ಯೆ ಮಾರ್ಗದರ್ಶನದ ರೂಪಕ ಪ್ರದರ್ಶನ ನಡೆಯುತ್ತದೆ.

ಸಂಜೆ ಗಂಟೆ 4 ರಿಂದ ಆದಿನಾಥರ ಮಕ್ಕಳ ಬಾಲಲೀಲೋತ್ಸವ ನಡೆಯುತ್ತದೆ.


Spread the love