ಧರ್ಮಸ್ಥಳ : ಅಕ್ರಮ ಕಸಾಯಿ ಖಾನೆಗೆ ದಾಳಿ – ಆರೋಪಿಗಳು ಪರಾರಿ

Spread the love

ಧರ್ಮಸ್ಥಳ : ಅಕ್ರಮ ಕಸಾಯಿ ಖಾನೆಗೆ ದಾಳಿ – ಆರೋಪಿಗಳು ಪರಾರಿ

ಧರ್ಮಸ್ಥಳ :ಅಕ್ರಮವಾಗಿ ಜಾನುವಾರುಗಳನ್ನು ತಂದು ಕೊಂದು ಮಾಂಸ ಮಾಡುತ್ತಿದ್ದ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ದಾಳಿ ನಡೆಸಿದ್ದಾರೆ

ಏಪ್ರಿಲ್ 24ರಂದು ಧರ್ಮಸ್ಥಳ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರು. ಠಾಣಾ ಸಿಬ್ಬಂದಿಗಳೊಂದಿಗೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ನೆರಿಯಾ ಗ್ರಾಮದ ಇಟ್ಟಾಡಿ ಎಂಬಲ್ಲಿರುವ ನಿಸಾರ್ ಎಂಬಾತನು ಮನೆಯ ಸಮೀಪದ ತಾತ್ಕಾಲಿಕ ಶೆಡ್ಡಿನಲ್ಲಿ ಎಲ್ಲಿಂದಲೋ ಜಾನುವಾರುಗಳನ್ನು ಕಳವು ಮಾಡಿಕೊಂಡು ಬಂದು ಯಾವುದೇ ಪರವಾನಿಗೆ ಇಲ್ಲದೇ ಮಾರಾಟ ಮಾಡುವ ಸಲುವಾಗಿ ಜಾನುವಾರುಗಳನ್ನು ಕೊಂದು ಮಾಂಸ ಮಾಡುತ್ತಿದ್ದಲ್ಲಿಗೆ ದಾಳಿ ನಡೆಸಿದ್ದಾರೆ.

ದಾಳಿ ನಡೆಸಿದ ಸ್ಥಳದಿಂದ ಸುಮಾರು 15,000/- ರೂಪಾಯಿ ಮೌಲ್ಯದ ಮಾಂಸ, ಮತ್ತು ಇತರ ಅವಯವಗಳು, ಮರದ ತುಂಡು, ಕತ್ತಿ, ಚೂರಿ, ತಕ್ಕಡಿ ಮತ್ತು ತೂಕದ ಬಟ್ಟುಗಳನ್ನು ಸ್ವಾಧೀನಪಡಿಸಿಕೊಂಡಿದ್ದು ಆರೋಪಿ ನಿಸಾರ್ ಮತ್ತು ಇನ್ನಿಬ್ಬರು ಪರಾರಿಯಾಗಿರುತ್ತಾರೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


Spread the love