Home Mangalorean News Kannada News ಧರ್ಮಸ್ಥಳ : ಸಮವಸರಣ ಪೂಜಾ ವೈಭವ

ಧರ್ಮಸ್ಥಳ : ಸಮವಸರಣ ಪೂಜಾ ವೈಭವ

Spread the love

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಶುಕ್ರವಾರ ರಾತ್ರಿ ಮಹೋತ್ಸವ ಸಭಾ ಭವನದಲ್ಲಿ ಸಮವಸರಣ ಪೂಜಾ ವೈಭವವನ್ನು ಊರ-ಪರವೂರ ಶ್ರಾವಕ-ಶ್ರಾವಕಿಯರು ವೀಕ್ಷಿಸಿ ಪೂನ್ಯ ಸಂಚಯ ಮಾಡಿಕೊಂಡರು. ಉತ್ಸಾಹದಿಂದ ಭಾಗವಹಿಸಿದರು. ಬೀಡಿನಿಂದ (ಹೆಗ್ಗಡೆಯವರ ನಿವಾಸ) ಸಭಾ ಭವನಕ್ಕೆ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ತೀರ್ಥಂಕರರ ಭವ್ಯ ಮೆರವಣಿಗೆ ಬಳಿಕ ಮಹೋತ್ಸವ ಸಭಾ ಭವನದಲ್ಲಿ ಸಮವಸರಣ ಪೂಜೆ ನಡೆಯಿತು.

3

ಪಂಚ ನಮಸ್ಕಾರ ಮಂತ್ರ ಪಠಣ, ಅಷ್ಟವಿಧಾರ್ಚನೆ ಪೂಜೆ, ಸಂಗೀತ ಪೂಜೆ ಇತ್ಯಾದಿ ಧಾಮರ್ಿಕ ವಿಧಿ-ವಿಧಾನಗಳೊಂದಿಗೆ ಸಾಕ್ಷಾತ್ ಸಮವಸರಣವನ್ನು ಪ್ರತ್ಯಕ್ಷವಾಗಿ ವೀಕ್ಷಿಸಿದಂತಾಯಿತು. ಧಮರ್ಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ, ಹೇಮಾವತಿ ವಿ. ಹೆಗ್ಗಡೆಯವರು ಮತ್ತು ಸುಪ್ರಿಯಾ ಹಷರ್ೇಂದ್ರ ಕುಮಾರ್ ನೇತೃತ್ವದಲ್ಲಿ ನಡೆದ ಪೂಜಾ ಜಾರ್ಯಕ್ರಮದಲ್ಲಿ ಅನಿತಾ ಸುರೇಂದ್ರ ಕುಮಾರ್, ಶ್ರದ್ಧಾ ಅಮಿತ್, ಸೋನಿಯಾ ವರ್ಮ ಮೊದಲಾದವರು ಪೂಜೆಯಲ್ಲಿ ಭಾಗವಹಿಸಿದರು.

ಪಾಕಶಾಸ್ತ್ರ ಪರಿಣತರಾದ ಪಡಂಗಡಿಯ ವಜ್ರಕುಮಾರ್ ಮತ್ತು ಬೆಳ್ತಂಗಡಿಯ ಸಂತೋಷ್ ಕುಮಾರ್ ಅವರನ್ನು ಹೆಗ್ಗಡೆಯವರು ಸನ್ಮಾನಿಸಿದರು.

ಬಳಿಕ “ದಿವ್ಯ ದರ್ಶನ” ಎಂಬ ಕಿರು ನಾಟಕ ಪ್ರದರ್ಶನದ ಮೂಲಕ ತೀರ್ಥಂಕರರ ಜನನ ಮತ್ತು ಜೀವನದ ಸಂದರ್ಭದಲ್ಲಾಗುವ ಪರಿವರರ್ತನೆಗಳನ್ನು ಸಾದರಪಡಿಸಲಾಯಿತು. ಜಾನಪದ ದಾಟಿಯಲ್ಲಿ ಪ್ರದರ್ಶನಗೊಂಡ ನಾಟಕ ಅತ್ಯಂತ ಮನೋಜ್ಞವಾಗಿ ಮೂಡಿಬಂತು. ಮಹಾಮಂಗಳಾರತಿಯೊಂದಿಗೆ ಪೂಜೆ ಮುಕ್ತಾಯಗೊಂಡಿತು.

ಸ್ಥಳೀಯ ಬಾಹುಬಲಿ ಸೇವಾ ಸಮಿತಿಯ ಶ್ರಾವಕ-ಶ್ರಾವಕಿಯರು ಸಹಕರಿಸಿದರು.

ಕ್ಷುಲ್ಲಕ ನಿರ್ಮಾಣ ಸಾಗರ್ಜೀ ಮತ್ತು ಶ್ರವಣಬೆಳಗೊಳದ ಬ್ರಹ್ಮಚಾರಿಣಿ ಸುಮಂಗಲಾ ಉಪಸ್ಥಿತರಿದ್ದರು.

ಉಜಿರೆಯ ಎಸ್.ಡಿ.ಎಮ್. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಿ.ಪಿ. ಸಂಪತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.


Spread the love

Exit mobile version