ಧರ್ಮ ಸಂಸದ್ ಮತ್ತು ರಾಜಕೀಯಕ್ಕೆ ಸಂಬಂಧವಿಲ್ಲ; ಹಿಂದೂ ಸಮಾಜದ ಏಳಿಗೆಯಷ್ಟೆ ಉದ್ದೇಶ : ತೊಗಾಡಿಯಾ
ಉಡುಪಿ: ಧರ್ಮ ಸಂಸತ್ ಸಮಾಜದ ಮೇಲೆ ಪರಿಣಾಮ ಬೀರಲಿದ್ದು, ರಾಜಕೀಯಕ್ಕೂ ಸಮಾವೇಶಕ್ಕೂ ಸಂಬಂಧವಿಲ್ಲ ಎಂದು ವಿಹಿಂಪ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ಭಾಯಿ ತೊಗಾಡಿಯಾ ಹೇಳಿದರು.
ರಾಯಲ್ ಗಾರ್ಡನ್‍ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧರ್ಮ ಸಂಸತ್‍ನಲ್ಲಿ ಅಸ್ಪೈಶ್ಯತೆ ದೇಶದಿಂದ ಸಂಪೂರ್ಣವಾಗಿ ಹೋಗಲಾಡಿಸುವುದು, ಗೋ ರಕ್ಷಣೆಗೆ ಕೇಂದ್ರೀಯ ಕಾನೂನು, ರಾಮ ಮಂದಿರ ನಿರ್ಮಾಣ, ಮಠ, ಮಂದಿರಗಳ ಸರಕಾರಿಕರಣ ತಡೆಯುವುದು ಮುಂತಾದ ವಿಷಯಗಳಲ್ಲಿ ಸಂತರ ಮಾರ್ಗದರ್ಶನದಲ್ಲಿ ಕಾರ್ಯಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ಪ್ರತ್ಯೇಕ ಲಿಂಗಾಯಿತ ಧರ್ಮದ ಬಗ್ಗೆ ಮಾತನಾಡಿದ ತೊಗಾಡಿಯಾ ಹಿಂದುಗಳೆಲ್ಲರೂ ಸಹೋದರರು. ಸಹೋದರರನ್ನು ಬೇರೆ ಮಾಡಲಾಗದು. ಧರ್ಮ ಸಂಸತ್ ಈ ಬಗ್ಗೆ ನಿರ್ಣಯಕೈಗೊಳ್ಳಲಿದೆ ಎಂದು ಹೇಳಿದರು.