Home Mangalorean News Kannada News ಧಾರ್ಮಿಕ ಹಬ್ಬಗಳ ನಿರ್ಭಂಧಿತ ರಜೆ: ಸುಶೀಲ್ ನೊರೊನ್ಹ ವಿರೋಧ

ಧಾರ್ಮಿಕ ಹಬ್ಬಗಳ ನಿರ್ಭಂಧಿತ ರಜೆ: ಸುಶೀಲ್ ನೊರೊನ್ಹ ವಿರೋಧ

Spread the love

ಧಾರ್ಮಿಕ ಹಬ್ಬಗಳ ನಿರ್ಭಂಧಿತ ರಜೆ: ಸುಶೀಲ್ ನೊರೊನ್ಹ ವಿರೋಧ

6ನೇ ವೇತನ ಅಯೋಗ ಶಿಫಾರಸು ಮಾಡಿದ ಸರ್ಕಾರಿ ರಜೆಗಳು ಎಕಪಕ್ಷೀಯ ನಿರ್ಧಾರವಾಗಿದ್ದು ಇದು ಕೇವಲ ಸರ್ಕಾರಿ ನೌಕರರ ಬಗ್ಗೆ ಹಿತಾಸಕ್ತಿ ಪರಿಗಣಿಸಿದ್ದು ಉಳಿದಂತೆ ಅರೆ ಸರ್ಕಾರಿ, ಖಾಸಗಿ ಸಂಸ್ಥೆಗಳು ಜನಸಾಮಾನ್ಯರ ಬಗ್ಗೆ ಯಾವುದೇ ಕಾಳಜಿವಿಲ್ಲದ್ದು ಎಂದು ಎದ್ದು ಕಾಣುತ್ತದೆ. ಇದು ರಾಜ್ಯದ 90% ನೌಕರರ ಅಕ್ರೋಶಕ್ಕೆ ಕಾರಣವಾಗುವುದು. ಮುಖ್ಯವಾಗಿ ಗುಡ್ ಫ್ರೈಡೇ, ಈದ್ ಮಿಲಾದ್, ಮಹಾಲಯ ಅಮಾವÁಸ್ಯೆ ಆ ಧರ್ಮಗಳ ವಿಶೇóಷ ಮಹತ್ವ ಪಡೆದ ಹಬ್ಬಗಳಾಗಿದ್ದು ಧಾರ್ಮಿಕ ಆಚರಣೆಗಳಿಗೆ ಆಡಚಣೆ ಆಗಿರುತ್ತದೆ. ಈ ಹಬ್ಬಗಳಿಗೆ ಸರಕಾರಿ ನೌಕರರಿಗೆ ನಿರ್ಭಂದಿತ ರಜೆ ದೊರಕಿದರೂ ಅರೇ ಸರಕಾರಿ ಖಾಸಾಗಿ ನೌಕರರಿಗೆ ಈ ರಜೆಯಿಂದ ವಂಚಿತರಾಗುತ್ತಾರೆ. ಮತ್ತು ಹಬ್ಬಗಳನ್ನು ಆಚರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ರಜೆಗಳನ್ನು ಯಾವುದೇ ಕಾರಣಕ್ಕೂ ರದ್ದು ಪಡಿಸಕೂಡದು. ಅದೇ ರೀತಿ ವಿವಿಧ ಜಯಂತಿಗಳು ಹಾಗೂ ಕಾರ್ಮಿಕರಗೋಸ್ಕರ ಆಚರಿಸುವ ಮಹತ್ವದ ದಿನ ಕಾರ್ಮಿಕ ದಿನಾಚರಣೆ ರದ್ದುಗೊಳಿಸಿ ಕೇವಲ 5 ರಿಂದ 10% ನೌಕರರ ಹಿತಗೋಸ್ಕರ ಸರಕಾರ ತಪ್ಪು ಹೆಜ್ಜೆಯನ್ನು ಇಟ್ಟಂತಾಗುತ್ತದೆ. ಅದಕ್ಕಿಂತ ಈ ಯಾವುದೇ ರಜೆಗಳನ್ನು ರದ್ದು ಪಡಿಸದೇ ಸರಕಾರಿ ನೌಕರರು ದಿನಕ್ಕೆ 1 ಘಂಟೆ ಹೆಚ್ಚು ಕೆಲಸ ಮಾಡಿ 4ನೇ ಶನಿವಾರ ಸರಕಾರಿ ರಜೆ ಎಂದು ಘೋಷಿಸುವ ನಿರ್ಧಾರ ಮಾನ್ಯ ಮುಖ್ಯಮಂತ್ರಿಗಳು ಸಂಪುಟ ದರ್ಜೆಯಲ್ಲಿ ಕೈಗೊಳ್ಳಬೇಕೆಂದು ಕಥೊಲಿಕ್ ಕೌನ್ಸಿಲ್ ಆಫ್ ಕರ್ನಾಟಕ ಕಾರ್ಯಕಾರಿ ಸಮಿತಿ ಸದಸ್ಯರಾದ ಸುಶೀಲ್ ನೊರೊನ್ಹ ವಿನಂತಿಸಿದ್ದಾರೆ.


Spread the love

Exit mobile version