ನಂತೂರು ಓವರ್‌ಪಾಸ್‌ ನಿಧಾನಗತಿ: ಮಿಯಾವಾಕಿ ಅರಣ್ಯ ತೆರವಿಗೆ ಹೈಕೋರ್ಟ್ ತಡೆಯಾಜ್ಞೆ

Spread the love

ನಂತೂರು ಓವರ್‌ಪಾಸ್‌ ನಿಧಾನಗತಿ: ಮಿಯಾವಾಕಿ ಅರಣ್ಯ ತೆರವಿಗೆ ಹೈಕೋರ್ಟ್ ತಡೆಯಾಜ್ಞೆ

ಮಂಗಳೂರು: ನಂತೂರು ಜಂಕ್ಷನ್‌ ಸಮೀಪವಿದ್ದ 99 ಮರಗಳನ್ನು ಅರಣ್ಯ ಇಲಾಖೆ ಅನುಮತಿ ಪಡೆದು, ತೆರವು ಮಾಡಲಾಗಿದೆ. ಜಂಕ್ಷನ್‌ ಸಮೀಪದ ಅಪಾರ್ಟ್‌ಮೆಂಟ್‌ ಬಳಿ 2 ಮೀ. ಬಿಟ್ಟು ಭೂಮಿ ಸಮತಟ್ಟು ಮಾಡಲಾಗಿದೆ. ಕುಡಿಯುವ ನೀರಿನ ಪೈಪ್‌ಲೈನ್‌ ತೆರವಿಗೆ ಮಹಾನಗರ ಪಾಲಿಕೆ 2.5 ಕೋಟಿ ರೂ. ಬೇಡಿಕೆ ಇಟ್ಟಿದ್ದು, ಅದೀಗ 70 ಲಕ್ಷ ರೂ.ಗೆ ಒಪ್ಪಿಗೆ ಸೂಚಿಸಿ, ಸ್ಥಳಾಂತರ ಮಾಡಲಿದೆ . ಮೆಸ್ಕಾಂನ ವಿದ್ಯುತ್‌ ಕಂಬ ಮತ್ತು ತಂತಿ ತೆರವಿಗೂ 4.5 ಕೋಟಿ ರೂ. ಬೇಡಿಕೆ ಸಲ್ಲಿಸಲಾಗಿತ್ತು. ಅದೂ ಬಹಳಷ್ಟು ಚರ್ಚೆಯಾದ ಬಳಿಕ 60 ಲಕ್ಷ ರೂ.ನಲ್ಲಿ ತೆರವುಗೊಳಿಸಿ, ಸ್ಥಳಾಂತರ ಮಾಡಲು ಒಪ್ಪಿದೆ.

ಮಂಗಳೂರಿನ ಸುಗಮ ಸಂಚಾರಕ್ಕೆ ತೊಡಕಾಗಿರುವ ನಂತೂರು ಜಂಕ್ಷನ್‌ನಲ್ಲಿ ಓವರ್‌ಪಾಸ್‌ ನಿರ್ಮಿಸುವ ಯೋಜನೆಗೆ ಒಂದು ಹಂತದಲ್ಲಿ ವೇಗ ಸಿಕ್ಕಿದರೂ, ಮಿಯಾವಾಕಿ ಅರಣ್ಯ ತೆರವು ಮಾಡದಂತೆ ಹೈಕೋರ್ಟ್‌ ನೀಡಿರುವ ತಡೆಯಾಜ್ಞೆಯಿಂದ ಇಡೀ ಪ್ರಕ್ರಿಯೆ ನಿಧಾನವಾಗಿದೆ.

ಅಕ್ಟೋಬರ್‌ನಲ್ಲಿ ಕಾಮಗಾರಿ ಆರಂಭಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪಕ್ಕದ ಮರಗಳು, ಮೂರು ಕಡೆಯ ಗುಡ್ಡ ತೆರವು ಮಾಡುತ್ತಿರುವಾಗಲೇ, ಮುಂದಿನ ವಿಚಾರಣೆ ತನಕ ಮಿಯಾವಾಕಿ ಅರಣ್ಯ ತೆರವು ಮಾಡದಂತೆ ಪ್ರಾಧಿಕಾರಕ್ಕೆ ಅ.9ರಂದು ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ


Spread the love