“ನಂದಿನಿ ಕಿರಿಯ ಕಲಾವಿದ ಚಿತ್ರಕಲಾ ಸ್ಪರ್ಧೆ”
ಮ0ಗಳೂರು : ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಆಶ್ರಯದಲ್ಲಿ ನಂದಿನಿ ಕಿರಿಯ ಕಲಾವಿದ ಚಿತ್ರಕಲೆ ಸ್ಪರ್ಧೆಯನ್ನು ಮಂಗಳೂರಿನ ಮಿಲಾಗ್ರೀಸ್ ಚರ್ಚ್ ಹಾಲ್ನಲ್ಲಿ ಜ.23ರಂದುಏರ್ಪಡಿಸಲಾಗಿರುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ 5 ರಿಂದ 7ನೇ ತರಗತಿಯವರೆಗಿನ ಮಕ್ಕಳಿಗೆ “ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆ” ಎಂಬ ವಿಷಯದ ಬಗ್ಗೆ ಮತ್ತು 8 ರಿಂದ ಮತ್ತು 10 ನೆಯ ತರಗತಿಯ ಮಕ್ಕಳಿಗೆ “ ಹೈನುಗಾರಿಕೆಯಿಂದ ಸ್ವ ಉದ್ಯೋಗ” ಎಂಬ ವಿಷಯದ ಬಗ್ಗೆ ಶಾಲಾ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಲಾಗಿರುತ್ತದೆ. ಪ್ರತೀ ಶಾಲೆಯಿಂದ 5ನೇ ತರಗತಿಯಿಂದ 7ನೇ ತರಗತಿಯವರೆಗೆ 2 ಮಕ್ಕಳು ಮತ್ತು 8ನೇ ತರಗತಿಯಿಂದ 10ನೇ ತರಗತಿಯವರೆಗೆ 2 ಮಕ್ಕಳು ಭಾಗವಹಿಸಲು ಅವಕಾಶ ಕಲ್ಷಿಸಲಾಗಿದೆ ಪ್ರಶಸ್ತಿಯನ್ನು ಎರಡು ಗುಂಪುಗಳಿಗೆ ಪ್ರತ್ಯೇಕವಾಗಿ ನೀಡಲಾಗುವುದು. ಪ್ರಶಸ್ತಿ ವಿಜೇತ ಮಕ್ಕಳಿಗೆ ನಗದಾಗಿ ಪ್ರಥಮ ಬಹುಮಾನ ರೂ.10,000/- ದ್ವಿತೀಯ ಬಹುಮಾನ ರೂ.6,000/- ಹಾಗೂ ತೃತೀಯ ಬಹುಮಾನ ರೂ.3,000/- ಅಲ್ಲದೆ 5 ಸಮಾಧಾನಕರ ಬಹುಮಾನವಾಗಿ ರೂ.1,000/- ನೀಡಲಾಗುವುದು. ಜತೆಗೆ ಸ್ಮರಣಿಕೆ ಹಾಗೂ ನಂದಿನಿ ಸಿಹಿತಿಂಡಿ ನೀಡಲಾಗುವುದು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಲಾಗುವುದು.
ಜ.23ರಂದು10.45 ಘಂಟೆಯಿಂದ ಮಧ್ಯಾಹ್ನ 12.15 ರವರೆಗೆ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಲಿರುತ್ತದೆ. ನಂತರ ಅಂತರಾಷ್ಟ್ರೀಯ ಕಲಾವಿದ ವಿಲಾಸ ನಾಯಕ್ ಇವರಿಂದ ಚಿತ್ರಕಲೆ ಪ್ರದರ್ಶನ ನಡೆಯಲಿದೆ. ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಆಶ್ರಯದಲ್ಲಿ ನಂದಿನಿ ಕಿರಿಯ ಕಲಾವಿದ ಚಿತ್ರಕಲೆ ಸ್ಪರ್ಧೆಯನ್ನು ನಡೆಸುವ ಸಂಬಂಧ ಉಪ ನಿರ್ದೇಶಕರು, ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ, ಇವರು ಹೊರಡಿಸಿರುವ ಸುತ್ತೋಲೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕು ಶಿಕ್ಷಣಾಧಿಕಾರಿಗಳು ಇ-ಮೇಲ್ ಮುಖಾಂತರ ಶಾಲೆಗಳಿಗೆ ಕಳುಹಿಸಿರುತ್ತಾರೆ. ಆದ್ದರಿಂದ ಚಿತ್ರಕಲೆಯನ್ನು ಯಶಸ್ವಿಗೊಳಿಸಲು ಎಲ್ಲಾ ಶಾಲೆಯಿಂದ ಚಿತ್ರಕಲೆ ಆಸಕ್ತಿ ಇರುವ ಆಯ್ದ 2 ಮಕ್ಕಳನ್ನು ಆಯ್ಕೆ ಮಾಡಿ ಕಳುಹಿಸಿಕೊಡುವಂತೆ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.