Home Mangalorean News Kannada News ನಕಲಿ ಅಂಕಪಟ್ಟಿ ಜಾಲ ಭೇಧಿಸಿದ ಪೋಲಿಸರು; ಇನ್ನಿಬ್ಬರ ಬಂಧನ

ನಕಲಿ ಅಂಕಪಟ್ಟಿ ಜಾಲ ಭೇಧಿಸಿದ ಪೋಲಿಸರು; ಇನ್ನಿಬ್ಬರ ಬಂಧನ

Spread the love

ನಕಲಿ ಅಂಕಪಟ್ಟಿ ಜಾಲ ಭೇಧಿಸಿದ ಪೋಲಿಸರು; ಇನ್ನಿಬ್ಬರ ಬಂಧನ

ಮಂಗಳೂರು: ಮಂಗಳೂರು ನಗರ ತೊಕ್ಕೊಟ್ಟು ಟಿ ಸಿ ರಸ್ತೆಯಲ್ಲಿರುವ Mangalore Institute of Technological Science(MITS) ಎಂಬ ಹೆಸರಿನ ಸಂಸ್ಥೆಯಲ್ಲಿ ನಕಲಿ ಅಂಕಪಟ್ಟಿಯನ್ನು ತಯಾರಿಸಿ ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಆರೋಪಿಗಳಿಬ್ಬರನ್ನು ದಸ್ತಗಿರಿ ಮಾಡುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಬಂಧಿತರನ್ನು ತೊಕ್ಕೊಟ್ಟು ಚೆಂಬುಗುಡ್ಡೆ ನಿವಾಸಿ ಅಸ್ಮಾನ್ ಶೇಖ್ (25) ಮತ್ತು ಅಸ್ರಾರುದ್ದಿನ್ (26) ಎಂದು ಗುರುತಿಸಲಾಗಿದೆ.

ಇತ್ತೀಚೆಗೆ ಮಂಗಳೂರು ನಗರ ತೊಕ್ಕೊಟ್ಟು ಟಿ ಸಿ ರಸ್ತೆಯಲ್ಲಿರುವ Mangalore Institute of Technological Science(MITS) ಎಂಬ ಸಂಸ್ಥೆಯಲ್ಲಿ ನಕಲಿ ಅಂಕಪಟ್ಟಿಯನ್ನು ತಯಾರಿಸಿ ರೂ. 10,000/- ರಿಂದ 45,000/- ಹಣಕ್ಕೆ ನಕಲಿ ಅಂಕಪಟ್ಟಿ ಹಾಗೂ ಸರ್ಟಫೀಕೇಟ್ ಗಳನ್ನು ತಯಾರಿಸಿ ಹಣಕ್ಕಾಗಿ ಮಾರಾಟ ಮಾಡಿ ವಂಚಿಸುತ್ತಿದ್ದ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಪತ್ತೆಹಚ್ಚಿ ಈ ಪ್ರಕರಣದಲ್ಲಿ ಭಾಗಿಯಾದ ತೊಕ್ಕೊಟ್ಟು ನಿವಾಸಿ ಗೋಡ್ವಿನ್ ಡಿ ಸೋಜಾ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದವರ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಈ ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಆರೋಪಿಗಳಾದ ಅಸ್ಮಾನ್ ಶೇಖ್ ಮತ್ತು ಅಸ್ರಾರುದ್ದೀನ್ ಎಂಬವರನ್ನು ವಶಕ್ಕೆ ಪಡೆದುಕೊಂಡು ಅವರನ್ನು ಮುಂದಿನ ಕ್ರಮಕ್ಕಾಗಿ ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಆರೋಪಿ ಅಸ್ಕಾನ್ ಶೇಖ್ Mangalore Institute of Technological Science(MITS) ಈ ಸಂಸ್ಥೆಯನ್ನು ನಡೆಸುತ್ತಿದ್ದು, ಈತನು 2016 ನೇ ಇಸವಿಯಿಂದ ಸಂಸ್ಥೆಯನ್ನು ನಡೆಸುತ್ತಲೇ ಎಸ್ಎಸ್ಎಲ್ ಸಿ, ಪಿಯುಸಿ, ಡಿಗ್ರಿ, ಡಿಪ್ಲೋಮಾ ಹೀಗೆ ವಿವಿಧ ಪದವಿಯ ನಕಲಿ ಅಂಕಪಟ್ಟಿಗಳನ್ನು ತಯಾರಿಸುತ್ತಾ ರೂ. 10,000/- ರಿಂದ ರೂ. 45,000/- ಮೊತ್ತಕ್ಕೆ ಮಾರಾಟ ಮಾಡುತ್ತಿದ್ದನು. ಆರೋಪಿಗಳ ವಶದಿಂದ 2 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿ ಅಸ್ಕಾನ್ ಶೇಖ್ ಎಂಬಾತನ ವಿರುದ್ಧ ಈ ಹಿಂದೆ 2016 ನೇ ಇಸವಿಯಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಪಂಪ್ ವೆಲ್ ಬಳಿ Mangalore Institute of Management Engineering ಎಂಬ ಸಂಸ್ಥೆಯಲ್ಲಿ Eduexcel Consultancy ಎಂಬ ಸಂಸ್ಥೆಯನ್ನು ತೆರೆದು ಇದೇ ರೀತಿ ನಕಲಿ ಅಂಕಪಟ್ಟಿಗಳನ್ನು ತಯಾರಿಸುವ ಕೃತ್ಯವನ್ನು ನಡೆಸುತ್ತಿದ್ದ ಸಮಯ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ನಕಲಿ ಅಂಕಪಟ್ಟಿಗಳನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು.

ಆರೋಪಿಗಳ ಪತ್ತೆ ಕಾರ್ಯದಲ್ಲಿ ಮಂಗಳೂರು ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್‌ ಶಾಂತಾರಾಮ್, ಪಿಎಸ್ಐ ಶ್ಯಾಮ್ ಸುಂದರ್, ಕಬ್ಬಾಳ್ ರಾಜ್ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.


Spread the love

Exit mobile version