ನಕಲಿ/ ಅನರ್ಹ ಬಿಪಿಎಲ್ ಕಾರ್ಡ್ ಮಾಹಿತಿ ನೀಡಿ 400 ರೂ ಬಹುಮಾನ ಗೆಲ್ಲಿ
ಮ0ಗಳೂರು : ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಬಲಪಡಿಸುವ ಉದ್ದೇಶದಿಂದ ಅನಧಿಕೃತ ದಾಸ್ತಾನು/ಸಾಗಾಣಿಕೆ ಬಗ್ಗೆ ಮಾಹಿತಿ ನೀಡುವವರಿಗೆ ಮತ್ತು ನಕಲಿ/ ಅನರ್ಹ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರ ಬಗ್ಗೆ ಮಾಹಿತಿ ನೀಡುವವರಿಗೆ ಬಹುಮಾನ ಯೋಜನೆ ಜ್ಯಾರಿಗೊಳಿಸಲಾಗಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಪಡಿತರ ವಸ್ತುಗಳನ್ನು ಅನಧಿಕೃತ ದಾಸ್ತಾನು/ ಸಾಗಾಣಿಕೆ ಮಾಡುವವರ ಬಗ್ಗೆ ಮಾಹಿತಿ ನೀಡುವ ಮಾಹಿತಿದಾರರಿಗೆ ವಶಪಡಿಸಿಕೊಳ್ಳುವ ಅನಧಿಕೃತ ದಾಸ್ತಾನು ಮೌಲ್ಯದ ಶೇಖಡಾ 5% ರಂತೆ ಬಹುಮಾನವನ್ನು ನೀಡಲಾಗುತ್ತದೆ. ಅದರಂತೆ ನಕಲಿ/ ಅನರ್ಹ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರ ಮಾಹಿತಿ ನೀಡುವವರಿಗೆ ಪ್ರತಿ ಕಾರ್ಡಿಗೆ ರೂ. 400/- ರಂತೆ ಬಹುಮಾನ ನೀಡಲಾಗುತ್ತದೆ. ಮಾಹಿತಿ ನೀಡುವ ಮಾಹಿತಿದಾರರ ವಿವರವನ್ನು ಗೌಪ್ಯವಾಗಿ ಇಡಲಾಗುತ್ತದೆ.
ಸದ್ರಿ ಯೋಜನೆಯಡಿ ಸರ್ಕಾರೇತರ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಂಬಂಧಪಟ್ಟ ತಹಶೀಲ್ದಾರರ ಕಾರ್ಯಾಲಯದಿಂದ ಅರ್ಹ ಕಾರ್ಡುದಾರರ ಪಟ್ಟಿಯನ್ನು ಪಡೆದು ಅದರಲ್ಲಿ ಅನರ್ಹ, ನಕಲಿ ಪಡಿತರ ಚೀಟಿ ಹೊಂದಿರುವವರು ಕಂಡು ಬಂದಲ್ಲಿ ಇ ಮಾಹಿತಿಯನ್ನು ಸಂಬಂಧಿಸಿದ ತಾಲೂಕು ಕಚೇರಿ / ಉಪನಿರ್ದೇಶಕರು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ದ.ಕ ಮಂಗಳೂರು ಕಚೇರಿಗೆ ತಿಳಿಸುವಂತೆ ಜಿಲ್ಲಾಧಿಕಾರಿ ಇವರ ಪ್ರಕಟಣೆ ತಿಳಿಸಿದೆ.
ನಕಲಿ/ ಅನರ್ಹ ಬಿಪಿಎಲ್ ಕಾರ್ಡ್ ಮಾಹಿತಿ ನೀಡಿ 400 ರೂ ಬಹುಮಾನ ಗೆಲ್ಲಿ
Spread the love
Spread the love