ನಕಲಿ ಕೀ ಬಳಸಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ ಕಾಪು ಪೊಲೀಸರು

Spread the love

ನಕಲಿ ಕೀ ಬಳಸಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ ಕಾಪು ಪೊಲೀಸರು

ಉಡುಪಿ: ನಕಲಿ ಕೀ ಬಳಸಿ ವಾಹನ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಕಾಪು ಪೊಲೀಸರು ಬಂಧಿಸಿದ್ದು ಆತನಿಂದ ರೂ 1.06 ಮೌಲ್ಯದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ವ್ಯಕ್ತಿಯನ್ನು ಮಣಿಪಾಲ ಅನಂತನಗರ ಇಂದ್ರಾಳಿ, ಮಂಚಿ ನಿವಾಸಿ ರಾಜೇಶ್ ನಾಯ್ಕ ಯಾನೆ ರಾಜೇಶ್ ಪಾಮೆಡಿ (32) ಎಂದು ಗುರುತಿಸಲಾಗಿದೆ. ಪ್ರಸ್ತು ಆತ ಟೋಲನಾಕ ಧಾರವಾಡ ಜಿಲ್ಲೆಯಲ್ಲಿ ವಾಸಿಸುತ್ತಿದ್ದಾನೆ.

ಜಿಲ್ಲಾ ಪೊಲೀಸ್ ಅಧೀಕ್ಷ ಎನ್ ವಿಷ್ಣುವರ್ಧನ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಇವರ ನಿರ್ದೇಶನದಲ್ಲಿ ಜೈಶಂಕರ್ ಡಿವೈಎಸ್ಪಿ ಹಾಗೂ ಮಹೇಶ್ ಪ್ರಸಾದ್ ವೃತ್ತ ನಿರೀಕ್ಷಕರು ಕಾಪು ಇವರ ಮಾರ್ಗದರ್ಶನದಲ್ಲಿ ಜನವರಿ 20ರಂದು ಕಾಪು ಉಪನಿರೀಕ್ಷಕ ರಾಜಶೇಖರ್ ಬಿ ಸಾಗನೂರು ಮತ್ತು ಅಪರಾಧ ವಿಭಾಗದ ಪಿಎಸ್ ಐ ಜಯ ಕೆ ಹಾಗೂ ಪ್ರೊಬೇಷನರಿ ಪಿಎಸ್ ಐ ಉದಯ ರವಿ, ಮಹಾದೇವ್ ಬೋಸ್ಲೆ, ಸದಾಸಿವ ಗೋರೋಜಿ ಮತ್ತು ಸಿಬಂದಿಗಳಾದ ರಮೇಶ್, ಮಹಾಬಲ ಶೆಟ್ಟಿಗಾರ್, ಅಮೃತೇಶ್, ಸಂದೇಶ್, ಪರಶುರಾಮ, ಅರುಣ್ ಕುಮಾರ್, ಆನಂದ, ಅವಿನಾಶ್ ಅವರೊಂದಿಗೆ ಕಾಪು ಠಾಣಾ ವ್ಯಾಪ್ತಿಯಲ್ಲಿ ಸ್ಕೂಟರ್ ಗಳನ್ನು ಕಳ್ಳತನ ಮಾಡಿ, ಉಡುಪಿ ಕಡೆಯಿಂದ ಕಾಪು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ವೇಳೆ ಆರೋಪಿಯನ್ನು ಉದ್ಯಾವರ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ಮಾಡುವ ವೇಳೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಆತ ವಿವಿಧ ನಕಲಿ ಕೀಗಳನ್ನು ಬಳಸಿ ಈ ಹಿಂದೆ ಧಾರವಾಡ ಜಿಲ್ಲೆ ಜಗತ್ ನಗರ, ಮಣಿಪಾಲ ಇಂದ್ರಾಳಿಯ ದುರ್ಗಾನಗರ ಮಂಗಳೂರು ಅಳಪೆ ವಿಜಯನಗರ, ಕಾಪು ಹೊಸ ಮಾರಿಗುಡಿ ಸಮೀಪದಲ್ಲಿ ಲೈಟ್ ಹೌಸ್ ಅಪಾರ್ಟ್ ಮೆಂಟ್ ಸಮೀಪದಿಂದ ಒಟ್ಟು 5 ವಾಹನಗಳನ್ನು ಜಪ್ತಿ ಮಾಡಿದ್ದು ಆತನು ಒಟ್ಟು 6 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಆತನಿಂದ ಜಪ್ತಿ ಮಾಡಲಾದ 5 ವಾಹನಗಳ ಒಟ್ಟು ಅಂದಾಜು ಮೌಲ್ಯ ರೂ 1.06ಲಕ್ಷ ಆಗಿರುತ್ತದೆ ಎಂದು ಅಂದಾಜಿಸಲಾಗಿದೆ.

ಆರೋಪಿಯನ್ನು ನ್ಯಾಯಲಯಕ್ಕೆ ಹಾಜರು ಪಡಸಿದ್ದು, ಆರೋಪಿಗೆ ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು, ಪ್ರಕರಣ ತನಿಖೆಯಲ್ಲಿರುತ್ತದೆ.


Spread the love