ನಕಲಿ ನಂಬರ್ ಪ್ಲೇಟ್ ಬಳಸಿ ದರೋಡೆ ಯತ್ನ; 5 ಅಂತರಾಜ್ಯ ಕಳ್ಳರ ಬಂಧನ

Spread the love

ನಕಲಿ ನಂಬರ್ ಪ್ಲೇಟ್ ಬಳಸಿ ದರೋಡೆ ಯತ್ನ; 5 ಅಂತರಾಜ್ಯ ಕಳ್ಳರ ಬಂಧನ

ಮಂಗಳೂರು: ನಕಲಿ ನಂಬರ್ ಪ್ಲೇಟ್ ಅಳವಡಿಸಿ ದರೋಡೆ ನಡೆಸಲು ತಯಾರಿ ನಡೆಸಿದ್ದ 5 ಜನ ಅಂತರ್ ರಾಜ್ಯ ಆರೋಪಿಗಳನ್ನು ಬಂಧಿಸಿ ಅವರುಗಳಿಂದ ಮಾರಕಾಯುಧಗಳನ್ನು, ವಾಹನ ಸಮೇತ ಸ್ವಾಧಿನಪಡಿಸಿಕೊಳ್ಳುವಲ್ಲಿ ಉಳ್ಳಾಲ ಪೊಲೀಸ್ ಠಾಣಾ ಅಧಿಕಾರಿಗಳು ಮತ್ತು ದಕ್ಷಿಣ ಉಪವಿಭಾಗದ ರೌಡಿ ವಿಗ್ರಹ ದಳದ ಸಿಬಂದಿಗಳು ಯಶಸ್ವಿಯಾಗಿರುತ್ತಾರೆ.

ಬಂಧಿತರನ್ನು ಕೇರಳ ರಾಜ್ಯದ ತ್ರಿಶೂರ್ ನಿವಾಸಿ ಮೊಹಮ್ಮದ್ ಪಾಝೀಲ್ (24), ಮೊಹಮ್ಮದ್ ಶರೀಪ್ (25), ಅನಾಸ್ (21), ಸಲೀಂ (30), ಸುಜೀತ್ (24) ಎಂದು ಗುರುತಿಸಲಾಗಿದೆ.

ಆರೋಪಿಗಳನ್ನು ತನಿಖೆಗೆ ಒಳಪಡಿಸಿದಾಗ ಆರೋಪಿತರ ಪೈಕಿ ಮೊಹಮ್ಮದ್ ಪಾಝೀಲ್ ಎಂಬವನ ಮೇಲೆ ಕೇರಳದ ತ್ರಿಶೂರ್ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಒಟ್ಟು 4 ಕಳ್ಳತನ ಪ್ರಕರಣಗು ದಾಕಲಾಗಿವೆ.

ಬಂಧಿತ ಆರೋಪಿಗಳು ಫೆಬ್ರವರಿ 26ರಂದು ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿ ಬಳಿ ಮಾರಕಾಯುಧ ಚೂರಿಗಳನ್ನು ರಾಡ್, ದೊಣ್ಣೆ, ಗಮ್ ಟ್ಯಾಪರ್ ರೋಲ್ ಗಳನ್ನು ವಶದಲ್ಲಿಟ್ಟುಕೊಂಡು ವ್ಯಾಗನರ್ ಕಾರಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿ ಕೇರಳ ಕಡೆಯಿಂದ ಬಂದು ದರೋಡೆ ನಡೆಸಲು ಸಿದ್ದತೆ ನಡೆಸಿರುತ್ತಾರೆ. ಆರೋಪಿಗಳು ಶೋಕಿ ಜೀವನ ನಡೆಸಲು ಕೃತ್ಯ ನಡೆಸಿರುತ್ತಾರೆ. ಕೃತ್ಯ ನಡೆಸಲು ಬಳಸಿದ ವ್ಯಾಗನರ್ ಕಾರಿಗೆ ಅದರ ಒರಿಜಿನಲ್ ನೋಂದಣಿ ಸಂಖ್ಯೆ ಕೆ ಎಲ್ 08ಬಿಆರ್ 8439 ಸಂಖ್ಯೆ ಬದಲಿಗೆ ಕೆಎಲ್ 54-ಜೆ8892 ಎಂಬ ನಕಲಿ ನಂಬರ್ ಪ್ಲೇಟ್ ಗಳನ್ನ ಅಳವಡಿಸಕೊಂಡಿರುತ್ತಾರೆ. ಎಂಬುದು ಪ್ರಕರಣದ ತನಿಖೆಯ ಸಮಯ ತಿಳಿದುಬಂದಿರುತ್ತದೆ. ಆರೋಪಿಗಳ ವಶದಿಂದ 4 ಲಕ್ಷ ರೂ ಮೌಲ್ಯದ ಸ್ವತ್ತನ್ನು ಸ್ವಾದೀನಪಡಿಸಿಕೊಳ್ಳಲಾಗಿದೆ.

ಸದ್ರಿ ಪತ್ತೆ ಕಾರ್ಯದಲ್ಲಿ ಮೇಲಾಧಿಕಾರಿಗಳ ಆದೇಶದಂತೆ ಮಂಗಳೂರು ದಕ್ಷಿಣ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹದಳದ ತಂಡ ಮತ್ತು ಉಳ್ಳಾಲ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬಂದಿಗಳು ಭಾಗವಹಿಸಿರುತ್ತಾರೆ.


Spread the love