ನಕಲಿ ಪರಶುರಾಮ ಮೂರ್ತಿ ಪ್ರಕರಣ : ಶೀಘ್ರ ತನಿಖೆಗೆ ಆಗ್ರಹಿಸಿ ಎಸ್ಪಿಯವರಿಗೆ ಮನವಿ

Spread the love

ನಕಲಿ ಪರಶುರಾಮ ಮೂರ್ತಿ ಪ್ರಕರಣ : ಶೀಘ್ರ ತನಿಖೆಗೆ ಆಗ್ರಹಿಸಿ ಎಸ್ಪಿಯವರಿಗೆ ಮನವಿ

ಉಡುಪಿ: ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ (ರಿ) ಗೌರವ ಅಧ್ಯಕ್ಷರಾದ ಕೆ ಕೃಷ್ಣ ಮೂರ್ತಿ ಆಚಾರ್ಯರವರು ಉಡುಪಿ ಜಿಲ್ಲೆಯ ಪೊಲೀಸ್ ಅಧೀಕ್ಷಕರವರಿಗೆ ಪರಶುರಾಮ ಥೀಮ್ ಪಾರ್ಕ್ ನಲ್ಲಿ ನಿರ್ಮಿಸಿರುವ ಪರಶುರಾಮರ ನಕಲಿ ಮೂರ್ತಿಯ ಬಗ್ಗೆ ಆರೋಪಿಯನ್ನು ತ್ವರಿತಗತಿಯ ತನಿಖೆ ನಡೆಸುವಂತೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಕೆಲವು ಸ್ವಯಂ ಘೋಷಿತ ಕಿಡಿಗೇಡಿಗಳು ಏನು ಹಗರಣ ಇಲ್ಲ ಅಂತ ಸರಕಾರದ ವಿರುದ್ಧ ಸುಖಾ-ಸುಮ್ಮನೆ ಅಪಪ್ರಚಾರ ಮಾಡುತ್ತಾ ಇರುವಾಗ ಸರಕಾರದ ಭಾಗವಾಗಿರುವ ಪೊಲೀಸ್ ಇಲಾಖೆಯು ಕಾರ್ಕಳ ನಗರ ಠಾಣೆಯಲ್ಲಿ ದಾಖಲಾಗಿರುವ ಈ ಥೀಮ್ ಪಾರ್ಕ್ ಹಗರಣದ ಪ್ರಕರಣದಲ್ಲಿ ಆರೋಪಿಯಾಗಿರುವ ಕೃಷ್ಣನಾಯಕ್- ಕ್ರಿಶ್ ಆರ್ಟ್ ವರ್ಲ್ಡ್ ರವರನ್ನು ಕೂಡಲೆ ತನಿಖೆ ಮಾಡಿ ಅಕ್ರಮವಾಗಿ ಸರಕಾರದಿಂದ ಬಿಡುಗಡೆಯಾಗಿರುವ ಹಣದಿಂದ GST ತೆರಿಗೆ ವಂಚನೆ ಮಾಡಿ, ಅಕ್ರಮ ಹಣ ವರ್ಗಾವಣೆಯನ್ನು ಯಾರಿಗೆಲ್ಲ ಮಾಡಿದ್ದಾರೆ ಎನ್ನುವ ಸತ್ಯವನ್ನು ಜಿಲ್ಲೆಯ ಜನರ ಮತ್ತು ನ್ಯಾಯಾಲಯದ ಮುಂದೆ ತರಬೇಕೆಂದು ಮನವಿ ಪತ್ರವನ್ನು ನೀಡಿದ್ದಾರೆ.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಉಡುಪಿ ಅಧೀಕ್ಷಕರು ಇನ್ನು ಕೆಲವೆ ದಿನಗಳಲ್ಲಿ ಈ ಪ್ರಕರಣದ ಕುರಿತು ನಿಜಾಂಶವನ್ನು ಕಲೆಹಾಕಿ ಪ್ರಕರಣದ ಬಗ್ಗೆ ಮಾಹಿತಿ ನೀಡಲಾಗುವುದು ಹಾಗೂ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂಧರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಬಜಗೋಳಿ ಕೃಷ್ಣ ಶೆಟ್ಟಿ, , ಸಮಿತಿಯ ಉಪಾಧ್ಯಕ್ಷರಾದ ನವೀನ್ ಸಾಲಿಯಾನ್ ಉಪಸ್ಥಿತರಿದ್ದರು.


Spread the love