ನಕಲಿ ಮತದಾನಕ್ಕೆ ಯತ್ನಿಸಿದಾತನ ಬಂಧನ
ಬಂಟ್ವಾಳ: ನಕಲಿ ಮತದಾನಕ್ಕೆ ಯತ್ನಿಸಿದ್ದ ವ್ಯಕ್ತಿಯನ್ನು ಬಂಟ್ವಾಳ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬಂಧಿತನನ್ನು ಅನ್ವರ್ (30) ಎಂದು ಗುರುತಿಸಲಾಗಿದೆ
2019 ರ ಮಂಗಳೂರು ಲೋಕಸಭೆ ಚುನಾವಣೆಯಲ್ಲಿ 205 ನೇ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 122 ಕ್ಕೆ ಭದ್ರತಾ ಸಿಬ್ಬಂದಿಯಾಗಿ ನೇಮಿಸಿದ್ದು, ಮತಗಟ್ಟಿ ಅಧಿಕಾರಿಗಳ ಜೊತೆ ದಿನಾಂಕ 18-04-2019 ರಂದು ಕರ್ತವ್ಯದಲ್ಲಿದ್ದರು. ಮತಗಟ್ಟೆಯ ಅಧಿಕಾರಿಯವರ ಆದೇಶದಂತೆ ಮತಗಟ್ಟೆಯ ಕೊಠಡಿಯ ಬಾಗಿಲ ಬಳಿ ನಿಂತು, ಮತದಾರರನ್ನು ಸಾಲಗಿ ಮತದಾನ ಮಾಡಲು ಕಳುಹಿಸುತ್ತಿರುವ ಸಮಯ ಸಂಜೆ 5.45 ಗಂಟೆಗೆ ಮತಗಟ್ಟೆಯ ಅಧಿಕಾರಿ ಅಶೋಕ್ ರೈ ರವರು ಪಿರ್ಯಾದಿದಾರರನ್ನು ಮತಗಟ್ಟೆಯ ಕೊಠಡಿ ಒಳಗೆ ಕರೆದು, ಒಬ್ಬನನ್ನು ತೋರಿಸಿ ಈತನು ಎರಡನೇ ಸಲ ಮತದಾನ ಮಾಡಲು ಬಂದಿರುತ್ತಾನೆ ಎಂದು ಸದ್ರಿ ಮತಗಟ್ಟೆಯಲ್ಲಿದ್ದ ಏಜೆಂಟ್ ರವರು ತಿಳಿಸಿರುತ್ತಾರೆ ಎಂದು ತಿಳಿಸಿದರು. ಅದರಂತೆ ಪಿರ್ಯಾದಿದಾರರು ಆತನನ್ನು ವಿಚಾರಿಸಲಾಗಿ ಈತನ ಹೆಸರು ಅನ್ವರ್ ಪ್ರಾಯ 30 ವರ್ಷ, ತಂದೆ ಬಾವು ಬ್ಯಾರಿ ಎಂದು ತಿಳಿದಿದ್ದು, ನಂತರ ಈತನು ತನ್ನ ಹೆಸರು ಮತದಾರರ ಪಟ್ಟಿಯಲ್ಲಿ ಎರಡು ಸಲ ಬಂದಿರುತ್ತದೆ. ಈಗಾಗಲೇ ನಾನು ಬೆಳಗ್ಗೆ 11.00 ಗಂಟೆಗೆ ಮತದಾನ ಮಾಡಿದ್ದೇನೆ ಎಂದು ತಿಳಿಸಿದನು. ಈತನ ಎಡ ಕೈ ತೋರು ಬೆರಳಿಗೆ ಶಾಹಿ ಹಾಕಿದ ಸ್ಥಳವನ್ನು ನೋಡಿದಾಗ ಎಡ ಕೈ ತೋರು ಬೆರಳು ಗಿರಿ ಗಾಯ ಮಾಡಿ ತೆಗೆದಿರುವುದು ಕಂಡು ಬರುತ್ತದೆ. ತೋರು ಬೆರಳಿನಲ್ಲಿ ಸ್ವಲ್ಪ ಶಾಹಿ ಇರುವುದು ಕಂಡು ಬರುತ್ತದೆ. ಒಮ್ಮೆ ಮತದಾನ ಮಾಡಿ ಮತ್ತೋಮ್ಮೆ ಮತದಾನ ಮಾಡಬಾರದು ಎಂದು ತಿಳಿದಿದ್ದು, ಉದ್ದೇಶ ಫೂರ್ವಕವಾಗಿ ಮತದಾನ ಮಾಡಲು ಮತದಾನ ಕೇಂದ್ರದ ಒಳಗೆ ಬಂದಿದ್ದು, ಚುನಾವಣೆ ನೀತಿ ಸಂಹಿತೆ ಉಲಂಘಿಸಿರುವುದಾಗಿದೆ. ಮತಗಟ್ಟೆಯ ಅಧಿಕಾರಿ ರವರು ಮತದಾನ ಮುಗಿದ ಬಳಿ ದೂರು ನೀಡುತ್ತೇನೆ, ಮತದಾನ ಮುಗಿಯುವ ತನಕ ಈತನನ್ನು ಪಿರ್ಯಾದಿದಾರರ ಬಳಿ ಇರಿಸಿಕೊಳ್ಳುವಂತೆ ತಿಳಿಸಿದಾಗ, ಪಿರ್ಯಾದಿದಾರರು ಸೆಕ್ಟರ್ ಅಧಿಕಾರಿಗಳಿಗೆ ತಿಳಿಸಿದ್ದು, ಸೆಕ್ಟರ್ ಅಧಿಕಾರಿಗಳು ಈತನನ್ನು ಠಾಣೆಗೆ ಕರೆದುಕೊಂಡು ಹೋಗಿರುತ್ತಾರೆ. ಮತದಾನ ಪ್ರಕ್ರಿಯೆ ಮುಗಿದ ಬಳಿಕ ಡಿ ಮಸ್ಟರಿಂಗ್ ಸ್ಥಳದಲ್ಲಿ ಪಿರ್ಯಾದಿದಾರರು ಮತಗಟ್ಟೆಯ ಅಧಿಕಾರಿರವರ ಬಳಿ ದೂರು ನೀಡಲು ತಿಳಿಸಿದಾಗ, ಅವರು ಯಾವುದೇ ಪ್ರತಿಕ್ರೀಯೆ ನೀಡದೇ ಹೋಗಿರುತ್ತಾರೆ. ಈ ವಿಚಾರಕ್ಕೆ ಸಂಬಂದಿಸಿದಂತೆ ANNEXURE 6 ನ್ನು ಕೂಡ ನೀಡಿರುವುದಿಲ್ಲ. ನಕಲಿ ಮತದಾನ ಮಾಡಿದವರ ವಿರುದ್ದ ಮತಗಟ್ಟೆಯ ಅಧಿಕಾರಿರವರು ಕ್ರಮ ಕೈಗೊಳ್ಳದೇ ಇರುವ ಬಗ್ಗೆ ಹಾಗೂ ನಕಲಿ ಮತದಾನ ಮಾಡಲು ಬಂದ ಅನ್ವರ್ ಎಂಬುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೆಂಕೆಬಿತ್ಯಾದಿ ನೀಡಿದ ದೂರನ್ನು ಪ್ರಕರಣ ದಾಖಲಿಸಿ ಆರೋಪಿಯನ್ನು ದಸ್ತಗಿರಿ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.