Spread the love
ನಕಲಿ ಮದ್ಯ ಘಟಕ ಪತ್ತೆ -ಪರಿಕರಗಳ ವಶ
ಮ0ಗಳೂರು : ನಕಲಿ ಮದ್ಯ ತಯಾರಿಸುತ್ತಿದ್ದ ಮನೆಯ ಮೇಲೆ ದಾಳಿ ನಡೆಸಿ ಅಬಕಾರಿ ಅಧಿಕಾರಿಗಳು ಪರಿಕರಗಳನ್ನು ವಶಪಡಿಸಿದ್ದಾರೆ.
ನಗರದ ಮೇರಿಹಿಲ್ ಗುರುನಗರದ ಮನೆಯೊಂದರಲ್ಲಿ ಅಕ್ರಮವಾಗಿ ನಕಲಿ ಮದ್ಯ ತಯಾರಿಸುವ ಉದ್ದೇಶದಿಂದ 227 ಲೀಟರ್ ಮದ್ಯಸಾರ, ಮದ್ಯ ತಯಾರಿಸುವ ಪರಿಕರಗಳಾದ ಎಸೆನ್ಸ್, ಖಾಲಿ ಬಾಟಲಿ, ಮುಚ್ಚಳಗಳನ್ನು ದಾಸ್ತಾನು ಇಟ್ಟಿರುವುದನ್ನು ಅಬಕಾರಿ ಪೊಲೀಸರು ಪತ್ತೆಹಚ್ಚಿದ್ದು, ಆರೋಪಿ ಜಯಪ್ರಕಾಶ್ ಪಿ.ಎಸ್. ಯಾನೆ ಪ್ರಸನ್ನ ಎಂಬಾತನು ತಲೆಮರೆಸಿಕೊಂಡಿದ್ದು ಆತನನ್ನು ಪತ್ತೆಹಚ್ಚಬೇಕಾಗಿದೆ.
ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರು ಇವರ ಆದೇಶದಂತೆ ಅಬಕಾರಿ ಉಪ ಆಯುಕ್ತರು, ಉಡುಪಿ ಜಿಲ್ಲೆ ಇವರ ನೇತೃತ್ವದಲ್ಲಿ ಮಂಗಳೂರು ಜಿಲ್ಲಾ ತಂಡದ ಅಬಕಾರಿ ನಿರೀಕ್ಷಕರಾದ ವಿಜಯ್‍ಕುಮಾರ್, ಜಗನ್ನಾಥ ನಾಯ್ಕ್ ಅಬಕಾರಿ ಉಪ ನಿರೀಕ್ಷಕರು, ಸಿಬ್ಬಂದಿಗಳಾದ ಗಿರಿಧರ್, ಸುಪ್ರೀತ್, ವಾಹನ ಚಾಲಕರಾದ ಯೋಗೀಶ್ ಮತ್ತು ಉಡುಪಿ ಜಿಲ್ಲಾ ತಂಡದ ಅಬಕಾರಿ ಉಪ ನಿರೀಕ್ಷಕ ನಿತ್ಯಾನಂದ, ಸಿಬ್ಬಂದಿಗಳಾದ ಮುನಾಫ್ ಸಾಹೇಬ್, ಶಾಂತಪ್ಪ ಎಳಗಿ, ಗಣೇಶ್, ಹಿರಿಯ ವಾಹನ ಚಾಲಕರಾದ ವೆಂಕಟ್ರಮಣ ಕಾರ್ಯಾಚರಣೆಯಲ್ಲಿ ಹಾಜರಿದ್ದರು. ಮಂಗಳೂರು ಜಿಲ್ಲಾ ತಂಡದ ಅಬಕಾರಿ ನಿರೀಕ್ಷಕರು ವಿಜಯ್ ಕುಮಾರ್ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಅಬಕಾರಿ ಇಲಾಖೆ ಪ್ರಕಟಣೆ ತಿಳಿಸಿದೆ.
Spread the love