Home Mangalorean News Kannada News ನಗರದಲ್ಲಿ ಉಂಟಾದ ನೆರೆಗೆ ಮಾಜಿ ಶಾಸಕ ಕಾರಣ ಎಂಬ ಬಿಜೆಪಿಗರ ಹೇಳಿಕೆ ಜೆ.ಆರ್.ಲೋಬೊ ಗರಂ

ನಗರದಲ್ಲಿ ಉಂಟಾದ ನೆರೆಗೆ ಮಾಜಿ ಶಾಸಕ ಕಾರಣ ಎಂಬ ಬಿಜೆಪಿಗರ ಹೇಳಿಕೆ ಜೆ.ಆರ್.ಲೋಬೊ ಗರಂ

Spread the love

ನಗರದಲ್ಲಿ ಉಂಟಾದ ನೆರೆಗೆ ಮಾಜಿ ಶಾಸಕ ಕಾರಣ ಎಂಬ ಬಿಜೆಪಿಗರ ಹೇಳಿಕೆ ಜೆ.ಆರ್.ಲೋಬೊ ಗರಂ

ಮಂಗಳೂರು: ಮಂಗಳೂರು ನಗರದಲ್ಲಿ ಈ ಬಾರಿ ಮುಂಗಾರು ಪೂರ್ವದಲ್ಲಿ ಒಂದೇ ದಿನ ಸುರಿದ 24 ಸೆಂಟಿ ಮೀಟರ್ ಮಳೆಗೆ ಕೃತಕ ನೆರೆ ಸೃಷ್ಟಿಯಾಗಿತ್ತು. ಈ ಸಂದರ್ಭ ಕೆಲವು ಬಿಜೆಪಿ ಮುಖಂಡರು ಈ ನೆರೆಗೆ ಲೋಬೊ ಕಾರಣ ಎಂದು ಹೇಳಿಕೆ ನೀಡಿದ್ದಾರೆ. ಅದು ಅವರಿಗೆ ಮಾಹಿತಿ ಕೊರತೆ ಇದೆ ಎನ್ನುವುದನ್ನು ತೋರಿಸುತ್ತದೆ. ಇದೇ ಸಂದರ್ಭ ಬಜಾಲ್, ಪಡೀಲ್ ಅಂಡರ್ ಪಾಸ್, ಕೊಟ್ಟಾರದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೃತಕ ನೆರೆ ಸೃಷ್ಟಿಯಾಗಿರುವ ಬಗ್ಗೆ ಬಿಜೆಪಿ ಮುಖಂಡರು ಸಂಸದರನ್ನು ದೂರುತ್ತಾರೆಯೇ? ಮಾಜಿ ಶಾಸಕ ಜೆ.ಆರ್. ಲೋಬೊ ಪ್ರಶ್ನಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಜೆ ಆರ್ ಲೋಬೊ ಅವರು ಜನಪ್ರತಿನಿಧಿಗಳು ಕೇವಲ ಅನುದಾನ ತರಿಸುತ್ತಾರೆಯೇ ಹೊರತು ತಾಂತ್ರಿಕ ಕೆಲಸಗಳನ್ನು ಮಾಡುವುದಿಲ್ಲ. ಮಂಗಳೂರು ನಗರದ ಅಭಿವೃದ್ಧಿ ಯೋಜನೆಯ ಕಾಮಗಾರಿಗಳ ಬಗ್ಗೆ ಐಡಿಎಫ್ ಸಲಹೆ ನೀಡಿದೆ. ಆ ಪ್ರಕಾರ ಕಾರ್ಯನಿರ್ವಹಿಸಿದ ಇಂಜಿನಿಯರ್‌ಗಳು ಯೋಜನೆಯನ್ನು ಕಾರ್ಯಗತಗೊಳಿಸಿದ್ದಾರೆ. ತಾಂತ್ರಿಕ ತಜ್ಞರು ನೀಡಿದ ಮಾಹಿತಿ ಪ್ರಕಾರ ಕಾಮಗಾರಿ ನಡೆದಿರುವುದರಿಂದ ಇಲ್ಲಿ ಲೋಪವಾಗಿದ್ದರೆ ಈ ಬಗ್ಗೆ ತನಿಖೆ ನಡೆಯಲಿ ಎಂದು ಜೆ.ಆರ್.ಲೋಬೊ ತಿಳಿಸಿದ್ದಾರೆ.

ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ 238 ಮತದಾನ ಕೇಂದ್ರಗಳಲ್ಲಿ ಬಳಸಲಾದ ಇವಿಎಂ ಯಂತ್ರದ ಕಾರ್ಯನಿರ್ವಹಣೆಯ ಬಗ್ಗೆ ಸಂದೇಹ ವಿದೆ.ಈ ಹಿನ್ನೆಲೆಯಲ್ಲಿ ಮತಪತ್ರದ ಮೂಲಕವೇ ಚುನಾವಣೆ ನಡೆಸಬೇಕು ಆಗ ಚುನಾವಣೆ ಪಾರದರ್ಶಕವಾಗಿರುತ್ತದೆ. ಮುಂದಿನ ಚುನಾವಣೆಯಲ್ಲಿ ಚುನಾವಣಾ ಆಯೋಗ ಮತಯಂತ್ರವನ್ನು ಬಳಸಬಾರದು ಎಂದು ರಾಜ್ಯದ ಉಚ್ಛ ನ್ಯಾಯಾಲಯದ ಮೊರೆ ಹೋಗುತ್ತೇನೆ ಮತ್ತು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ವಿರುದ್ಧ ತನಿಖೆಗೆ ನ್ಯಾಯಾಲಯದ ಮೊರೆ ಹೋಗುವುದಾಗಿ ಜೆ.ಆರ್. ಲೋಬೊ ತಿಳಿಸಿದ್ದಾರೆ.

ಇವಿಎಂ ಯಂತ್ರದ ಮೂಲಕ ನಡೆದ ಚುನಾವಣಾ ಫಲಿತಾಂಶ ಹಾಗೂ ನಮ್ಮ ಸಮೀಕ್ಷೆಯ ಪ್ರಕಾರ ಅಂದಾಜಿಸಲಾದ ಮತಗಳಲ್ಲಿ ತುಂಬಾ ವ್ಯತ್ಯಾಸವಿದೆ.ಈ ಹಿನ್ನೆಲೆಯಲ್ಲಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಎಲ್ಲಾ ಮತದಾನ ಕೇಂದ್ರಗಳ ಇವಿಎಂಗಳಲ್ಲಿ ದಾಖಲಾದ ವಿವಿಪ್ಯಾಟ್‌ನ್ನು ಪರಿಶೀಲಿಸಲು ನ್ಯಾಯಾಲಯದ ಮೊರೆ ಹೋಗುವುದಾಗಿ ಜೆ.ಆರ್.ಲೋಬೊ ತಿಳಿಸಿದರು.


Spread the love
1 Comment
Inline Feedbacks
View all comments
6 years ago

Raj Narayan who had defeated Mrs Indira Gandhi in 1977 had made a ridiculous statement after the cyclone which had battered Divi and Prakasham districts of Andhra in Nov 1977.
He said God had punished the people of Andhra for voting Cong I.

Take heart Lobo saab. Ignore the fools. You are smarter than that.

wpDiscuz
Exit mobile version